ದೇಶದ ಪುರಾತನ ಕಾರು 'ಅಂಬಾಸಿಡರ್' ಮತ್ತೆ ಸುದ್ದಿ ಮಾಡ್ತಿದೆ !!

Written By:

ಭಾರತ ರಾಷ್ಟ್ರದ ಪ್ರಧಾನ ಮಂತ್ರಿ ಇಂದ ಹಿಡಿದು ಸಾಮಾನ್ಯ ಜನರ ತನಕ ಎಲ್ಲರ ಮನ ಗೆದಿದ್ದ ಅಂಬಾಸಿಡರ್ ಬ್ರಾಂಡ್ ನ ಕಾರು ಇನ್ಮೇಲೆ ಫ್ರಾನ್ಸ್ ನ ಆಟೋ ದೈತ್ಯ ಪ್ಯೂಜೊ ಕಂಪನಿಯಲ್ಲಿ ವಿಲೀನಗೊಳ್ಳಲಿದೆ.

ಹಿಂದುಸ್ತಾನ್ ಮೋಟರ್ಸ್ ಸಿ.ಕೆ ಬಿರ್ಲಾ ಗ್ರೂಪ್ ಒಡೆತನದಲ್ಲಿ ಇತ್ತಾದರೂ ಎರಡು ಕಂಪನಿಗಳ ಒಪ್ಪಂದದ ಮೇರೆಗೆ ಈ ನಿರ್ದಾರಕ್ಕೆ ಬರಲಾಗಿದೆ. 80 ಕೋಟಿ ಮೌಲ್ಯದ ಒಪ್ಪಂದ ಇದಾಗಿದ್ದು, ಇನ್ನು ಮುಂದೆ ಪ್ಯೂಜೊ ಬ್ರಾಂಡ್ ಅಡಿಯಲ್ಲಿ ಅಂಬಾಸಿಡರ್ ಕಾರು ಬರಲಿದೆ.

"ನಾವು ಬ್ರಾಂಡ್ ನ ರಾಯಭಾರತ್ವ ಮತ್ತು ಟ್ರೇಡ್ ಮಾರ್ಕ್ ಗಳನ್ನು ಕಂಪನಿಗೆ ಮಾರಲು ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಸಿ ಕೆ ಬಿರ್ಲಾ ಸಮೂಹದ ವಕ್ತರಾರು ಸ್ಪಷ್ಟ ಪಡಿಸಿದ್ದಾರೆ.

"ಒಪ್ಪಂದದಿಂದ ಬಂದ ಆದಾಯದಲ್ಲಿ ನೌಕರರ ಮತ್ತು ಸಾಲ ನೀಡಿದವರ ಬಾಕಿ ತೀರಿಸಲು ಬಳಸುವ ಸಲುವಾಗಿ ಈ ನಿರ್ದಾರಕ್ಕೆ ಬರಲಾಗಿದೆ" ಎಂದು ವಕ್ತರಾರು ಹೇಳಿದರು.

ಏಳು ದಶಕದ ಹಿಂದೆ ಮಾರಿಸ್ ಆಕ್ಸ್ ಫರ್ಡ್ ಎರಡನೇ ಸರಣಿಯ ಪರಿಷ್ಕರಣೆಯ ಭಾಗವಾಗಿ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಹಿಂದುಸ್ತಾನ್ ಮೋಟರ್ಸ್ ಬಿಡುಗಡೆಗೊಳಿಸಿದ ಅಂಬಾಸಿಡರ್ ಕಾರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

1980 ರ ಅವಧಿಯಲ್ಲಿ ಅಂಬಾಸಿಡರ್ ಕಾರು ಮುಟ್ಟಿದೆಲ್ಲಾ ಚಿನ್ನವಾಗತೊಡಗಿತು. ಭಾರತದ ರಸ್ತೆಗಳಲ್ಲಿ, ಆಗಿನ ಚಿತ್ರಗಳಲ್ಲಿ ಅಂಬಾಸೆಡರ್ ಕಾರಿನದೇ ಕಾರುಬಾರು.

ಹೊಸ ನೀರು ಬಂದ ಮೇಲೆ ಹಳೆ ನೀರು ಮರೆಯಾಗಲೇ ಬೇಕು ಎನ್ನುವ ಲೋಕನಿಯಮದಡಿ ಅಂಬಾಸಿಡರ್ ನ ಜನಪ್ರಿಯತೆ ಕುಂದುತ್ತಾ ಬಂದಿತು.

ಎಷ್ಟರ ಮಟ್ಟಿಗೆ ಎಂದರೆ 2013-14 ಅವಧಿಯಲ್ಲಿ ಕೇವಲ 2500 ಗಿಂತ ಕಡಿಮೆ ಕಾರುಗಳು ಮಾರಾಟವಾಗಿವೆ ಎಂದರೆ ನೀವೇ ಊಹಿಸಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ ಪ್ಯೂಜೊ ಈ ಬ್ರಾಂಡ್ ಅನ್ನು ತನ್ನದಾಗಿಸಿಕೊಂಡಿರುವ ಉದ್ದೇಶವೇನು ಎಂಬುದು ಇನ್ನೂ ನಿಗೂಢವಾಗಿದ್ದರೂ, ಮುಂದೆ ಪ್ಯೂಜೊ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಹೊಸ ಸ್ವಿಫ್ಟ್ 2017 ಕಾರಿನ ಫೋಟೋಗಳನ್ನು ನೋಡಿ.

Story first published: Saturday, February 11, 2017, 14:33 [IST]
English summary
The iconic Indian car brand, Ambassador has been sold to Peugeot by the C K Birla Group owned Hindustan Motors.
Please Wait while comments are loading...

Latest Photos