ಆಡಿ ಇಂಡಿಯಾ ಪರಿಷ್ಕರಿಸಿದ 'ಕ್ಯೂ3' ಕಾರನ್ನು ಬಿಡುಗಡೆಗೊಳಿಸಿದೆ: ಬೆಲೆ ಮತ್ತು ವಿವರ ಇಲ್ಲಿದೆ

Written By:

ಆಡಿ ಇಂಡಿಯಾ ತನ್ನ ಕ್ರೀಡಾ ಬಳಕೆಯ ಕ್ಯೂ3 ಕಾರನ್ನು ಮತ್ತಷ್ಟು ಪರಿಷ್ಕರಿಸಿ ಮತ್ತೆ ರೀ ಎಂಟ್ರಿ ಕೊಡಿಸಿದೆ. ಹೌದು, ಜಗತ್ತಿನ ಐಷಾರಾಮಿ ಕಾರು ತಯಾರಕ ಕಂಪನಿ ತನ್ನ ಯಶಸ್ವಿ ಕ್ಯೂ3 ಕಾರಿಗೆ ಮತ್ತಷ್ಟು ಮೆಚ್ಚುವಂತಹ ಆಧುನಿಕ ಅಂಶಗಳನ್ನು ಸೇರಿಸಿ ಬಿಡುಗಡೆಗೊಳಿಸಿದೆ.

ಎರಡು ಮಾಡಾರಿಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಕಾರು ಮತ್ತಷ್ಟು ಸುಂದರಗೊಂಡು ನಿಮ್ಮ ಮನೆ ತಲುಪಲಿದ್ದು, ನಿಮ್ಮ ಬಜೆಟ್ 30ರಿಂದ 35 ಲಕ್ಷ ರು.ಗಳ ಅಸುಪಾಸಿನಲ್ಲಿದ್ದೆಯೇ? ಹಾಗಾದ್ರೆ ಖಂಡಿತ ನಿಮಗೆ ಹೇಳಿ ಮಾಡಿಸಿದ ಕಾರು ಈ ಆಡಿ ಕ್ಯೂ3.

ಯಾಂತ್ರಿಕ ವಿಚಾರಕ್ಕೆ ಬಂದರೆ ಕ್ಯೂ3 2.0-ಲೀಟರ್ ಟಿಡಿಐ ಎಂಜಿನ್ ಹೊಂದಿರಲಿದ್ದು, ಹೆಚ್ಚಿನ ಮಟ್ಟದ ಟ್ಯೂನ್ ಕಾಯ್ದುಕೊಳ್ಳಲಿದೆ.

ಅತ್ಯುತ್ತಮ 'ಮುಂಭಾಗದ ಚಕ್ರ ಚಲನೆ'ಯ ತಂತ್ರಜ್ಞಾನ ಹೊಂದಿರುವ ಮಾದರಿಯ ಕಾರು 147ರಷ್ಟು ಅಶ್ವಶಕ್ತಿ ಉತ್ಪಾದಿಸಲು ಮಾತ್ರ ಶಕ್ತವಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು, ಕ್ವಾಟ್ರೊ ಮಾದರಿಯ ಕಾರು 182 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿ ಹೊಂದಿದ್ದು, ಈ ಕಾರಿನ ಮಾದರಿಯಲ್ಲಿಯೇ ಅತಿ ಹೆಚ್ಚಿನ ಮಟ್ಟದ ಶಕ್ತಿಶಾಲಿ ಕಾರು ಇದಾಗಿದೆ.

ಎರಡು ಮಾದರಿಗಳಲ್ಲಿ 7-ಸ್ಪೀಡ್ ಸ್ವಯಂಚಾಲಿತ ರವಾನೆ ಹೊಂದಿರಲಿದೆ. ತಿರುಚಿರುವ ಬಂಪರ್ಗಳು, ಚೂಪಾದ ಗೆರೆ ಹೊಂದಿರುವ ಹೊರ ಭಾಗ, ಪನೋರಮಿಕ್ ಸನ್ ರೂಫ್ ಮತ್ತು 17-ಇಂಚಿನ ಅಲಾಯ್ ಚಕ್ರಗಳು ಮತ್ತು ಎಲ್ಇಡಿ ಹೆಡ್ ಲೈಟ್ ಹೊಂದಿರಲಿದೆ.

ಹೊಚ್ಚ ಹೊಸ ವಿನ್ಯಾಸದ ಚರ್ಮದ ಆಸನಗಳನ್ನು ಆಡಿ ಕ್ಯೂ3 ಪಡೆದುಕೊಳ್ಳಲಿದ್ದು, ಕ್ವಾಟ್ರೊ ಕ್ರೀಡಾ ಮಾದರಿಯ ಅಲ್ಯೂಮಿನಿಯಂ ಟ್ಯಾಂಜೆಂಟ ಇನ್ ಲೇ ಹೊಂದಿರಲಿದೆ.

ಮುಂಭಾಗದ ಆಸನಗಳನ್ನು ಎಲೆಕ್ಟ್ರಿಕ್ ಮೂಲಕ ಹೊಂದಿಸಬಹುದಾಗಿದ್ದು, ಕ್ಯೂ3 2.0 ಟಿಡಿಇ ಮಾದರಿಯ ಕಾರಿನ ಬೆಲೆ ರೂ.34.20 ಲಕ್ಷ (ದೆಹಲಿ ಎಕ್ಸ್ ಷೋ ರೂಂ) ನಿಗದಿಪಡಿಸಲಾಗಿದೆ.

ಇನ್ನು ಕ್ವಾಟ್ರೊ ಕ್ರೀಡಾ ಮಾದರಿಯ ಕಾರಿನ ಬೆಲೆ ರೂ. 37.20 ಲಕ್ಷ (ದೆಹಲಿ ಎಕ್ಸ್ ಷೋ ರೂಂ) ನಿಗದಿಪಡಿಸಲಾಗಿದೆ. ಇನ್ನು ತನ್ನ ಪ್ರತಿಸ್ಪರ್ಧಿಗಳಾದ ಮರ್ಸಿಡಿಸ್ ಬೆಂಜ್ ಜಿಎಲ್ಎ ಮತ್ತು ಬಿಎಂಡಬ್ಲ್ಯೂ ಎಕ್ಸ್1 ಕಾರುಗಳೊಂದಿಗೆ ಗ್ರಾಹಕರನ್ನು ಮೆಚ್ಚಿಸಲು ಸೆಣೆಸಲಿದೆ.

ನಿಮಗೆ ಆಡಿ ಕಾರಿನ ಬಗ್ಗೆ ಹೆಚ್ಚು ಒಲವು ಇದ್ದರೆ ಖಂಡಿತ ಆಡಿ ಎಸ್.ಕ್ಯೂ5 ಚಿತ್ರಗಳನ್ನು ನೀವು ನೋಡಲೇ ಬೇಕು.

Click to compare, buy, and renew Car Insurance online

Buy InsuranceBuy Now

Read more on ಆಡಿ audi
Story first published: Thursday, March 9, 2017, 14:07 [IST]
English summary
Audi India launched the updated version of the Q3. The car, get cosmetic as well as mechanical upgrades and is available in two variants.
Please Wait while comments are loading...

Latest Photos