ಆಡಿ ಕ್ಯೂ3 1.4 ಪೆಟ್ರೋಲ್ ಕಾರು ಭಾರತದಲ್ಲಿ ಬಿಡುಗಡೆ: ವಿವರ ಇಲ್ಲಿದೆ

Written By:

ಐಷಾರಾಮಿ ಕಾರು ತಯಾರಕ ಸಂಸ್ಥೆ ಆಡಿ ಇಂಡಿಯಾ ತನ್ನ ಪೆಟ್ರೋಲ್ ಮಾದರಿಯ ಕ್ಯೂ3 1.4 ಟಿಎಫ್ಎಸ್ಐ ವಾಹನವನ್ನು ಅನಾವರಣಗೊಳಿಸಿದ್ದು, ಈ ಕಾರು ಫ್ರಂಟ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ನಿಮ್ಮ ಮುಂದೆ ಬಂದಿದೆ.

ಪ್ರಪಂಚದಲ್ಲಿಯೇ ಐಷಾರಾಮಿ ಕಾರುಗಳ ತಯಾರಕೆಯಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ, ತನ್ನ ಯಶಸ್ವಿ ಕ್ಯೂ3 1.4 ಟಿಎಫ್ಎಸ್ಐ ಕಾರನ್ನು ಯಾಂತ್ರಿಕವಾಗಿ ಮತ್ತಷ್ಟು ಮೆಚ್ಚುವಂತಹ ಆಧುನಿಕ ಅಂಶಗಳನ್ನು ಸೇರಿಸಿ ಬಿಡುಗಡೆಗೊಳಿಸಿದೆ.

ಆಡಿ ಬಿಡುಗಡೆಗೊಳಿಸಿರುವ ಈ 1.4 ಟಿಎಫ್ಎಸ್ಐ ಕ್ರೀಡಾ ಬಳಕೆಯ ಕಾರಿನ ಬೆಲೆ ರೂ. 32.20 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿರುವ ಆಡಿ ಇಂಡಿಯಾ ಸಂಸ್ಥೆಯ ಈ ಕಾರು ಕೇವಲ ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಂಡಿದೆ.

ಬಿಡುಗಡೆಗೊಂಡಿರುವ ಈ ಕ್ಯೂ3 ಕ್ರೀಡಾ ಬಳಕೆಯ ಐಷಾರಾಮಿ ವಾಹನ 1.4-ಲೀಟರ್ ಪೆಟ್ರೋಲ್ ಟರ್ಬೊಚಾರ್ಜ್ ಎಂಜಿನ್ ಹೊಂದಿದ್ದು, 150 ಅಶ್ವಶಕ್ತಿ ಉತ್ಪಾದಿಸುವಷ್ಟು ಬಲಿಷ್ಠವಾಗಿದೆ.

ಈ ಕಾರು 6 ಸ್ಪೀಡ್ ಇರುವಂತಹ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದ್ದು, ಈ ಕಾರು ಒಂದು ಲೀಟರ್ ಪೆಟ್ರೋಲ್ ಇಂಧನಕ್ಕೆ 16.9 ಕಿ.ಮೀ ಮೈಲೇಜ್ ನೀಡಲಿದೆ.

ಪೆಟ್ರೋಲ್ ಮಾದರಿಯ ಈ ಕ್ಯೂ೩ 1.4 ಟಿಎಫ್ಎಸ್ಐ ಕಾರಿನ ಬಿಡುಗಡೆಯಿಂದಾಗಿ ಆಡಿಯ ಕ್ರೀಡಾಬಳಕೆಯ ವಾಹನಗಳ ವಿಭಾಗಕ್ಕೆ ಹೆಚ್ಚಿನ ಬಲ ಬಂದಿರುವುದಂತೂ ಸತ್ಯ.

ಬಿಡುಗಡೆಯಾಗುವ ಎಲ್ಲಾ ಶಕ್ತಿ ಮುಂದಿನ ಚಕ್ರಗಳು ಪಡೆದುಕೊಳ್ಳುವುದರಿಂದ, ಸಾಮಾನ್ಯವಾಗಿ ಕಾರುಗಳಿಗೆ ಇರುವಂತಹ ಆಲ್ ವೀಲ್ ಡ್ರೈವ್ ಸಿಸ್ಟಮ್ ಈ ಕಾರಿನ ನೀಡುತ್ತಿಲ್ಲ ಎಂದು ಕಂಪನಿ ತಿಳಿಸಿದೆ.

ಎಂದಿನಂತೆ 'ಮುಂಭಾಗದ ಚಕ್ರ ಚಲನೆ' ಆಯ್ಕೆಯೊಂದಿಗೆ ನಿಮ್ಮ ಮುಂದೆ ಬಂದಿರುವ ಈ ಕಾರು ಈ ಹಿಂದಿನ ಆವೃತಿಯಾದ ಕ್ಯೂ3 ಡೀಸೆಲ್ ಮಾದರಿಯಂತೆ ಇದೆ ಎಂದು ಕಂಪನಿ ತಿಳಿಸಿದೆ.

ಈ ಕಾರು ಇಂಧನ ಮತ್ತು ಕ್ಯಾಬಿನ್‌ನಲ್ಲಿ ಕಂದು ಬಣ್ಣದ ಕೆತ್ತನೆಗಳನ್ನು ಪಡೆದುಕೊಂಡಿದ್ದು, ಇವುಗಳನ್ನು ಹೊರತುಪಡಿಸಿ ಎಲ್ಲವೂ ಡೀಸೆಲ್ ಮಾದರಿಯಂತೆ ಇದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ಆಡಿ ಕ್ಯೂ3 ಪೆಟ್ರೋಲ್ ಮಾದರಿ ಎಂದಿನಂತೆ ಎಲ್ಇಡಿ ಹೆಡ್ ಲ್ಯಾಂಪ್, 17-ಇಂಚಿನ ಅಲಾಯ್ ಚಕ್ರಗಳು, ಕ್ರುಸಿ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು ತನ್ನದೇ ಆದ ಡಿಲಕ್ಸ್ ಡುಯಲ್ ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

Read more on ಆಡಿ audi
English summary
German auto major Audi has has launched the petrol variant of its Q3 SUV. The petrol SUV is only offered with the front-wheel-drive option.
Please Wait while comments are loading...

Latest Photos