ಏನ್ ಗುರು 500 ರೂಪಾಯಿ ದಂಡಕ್ಕಾಗಿ ಹೀಗಾ ಮಾಡೋದು..!!

Written By:

ಬೆಂಗಳೂರು ಅಂದ ತಕ್ಷಣ ನಮಗೆ ತಟ್ ಅಂಥಾ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ಇನ್ನು ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಹೇಗೆರುತ್ತೆ ಎಂದ್ರೆ ಈ ಸ್ಟೋರಿ ಓದಲೇಬೇಕು.

ನೋ ಪಾರ್ಕಿಂಗ್‌ನಲ್ಲಿ ಕಾರು ನಿಲುಗಡೆ ಮಾಡದೋ ಕಾನೂನು ಪ್ರಕಾರ ತಪ್ಪು. ಹೀಗಾಗಿ ಅದಕ್ಕೆ ಸೂಕ್ತ ದಂಡ ವಸೂಲಿ ಮಾಡುವುದು ಪೊಲೀಸರ ಕರ್ತವ್ಯ ಕೂಡಾ ಹೌದು.

ಆದ್ರೆ ದಂಡ ವಸೂಲಿ ಮಾಡುವ ಬರದಲ್ಲಿ ಪೊಲೀಸರು ನಡೆದುಕೊಳ್ಳುತ್ತಿರುವ ಕ್ರಮ ಎಂತವರಿಗೂ ಶಾಕ್ ನೀಡದೆ ಇರಲಾರದು.

ಆ ವ್ಯಕ್ತಿ ನೋ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿ ಹೋಗಿದ್ದೆ ತಪ್ಪಾಗಿತ್ತು. ಪೊಲೀಸರು ಕಾರು ಜಪ್ತಿ ಮಾಡುವ ನೆಪದಲ್ಲಿ ನಡೆದುಕೊಂಡ ರೀತಿ ಎಂತವರಿಗೂ ಕೋಪ ತರಿಸದೇ ಇರಲಾದರು.

ಕಾರು ಜಪ್ತಿ ಮಾಡುವ ಸಂದರ್ಭದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪೊಲೀಸರ ಕ್ರಮಕ್ಕೆ ಕಾರು ಮಾಲೀಕ ಕಂಗಾಲಾಗಿದ್ದಾನೆ.

ಕೇವಲ 500 ರೂಪಾಯಿ ದಂಡ ವಸೂಲಿ ಬದಲಾಗಿ ಕಾರು ರಿಪೇರಿಗಾಗಿ 10 ಸಾವಿರ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಪೊಲೀಸರು ಮಾಡಿದ್ದು ಸರಿಯೇ ಎಂಬ ಪ್ರಶ್ನೆ ಶುರುವಾಗಿದೆ.

ಅಂದಹಾಗೆ ಇದೆಲ್ಲಾ ನಡೆದಿದ್ದು ಬೆಂಗಳೂರಿನ ಮ್ಯೂಜಿಯಂ ರಸ್ತೆಯಲ್ಲಿ. ಕಾರು ಜಪ್ತಿ ಸಂದರ್ಭದಲ್ಲಿ ಕಾರಿನ ಇಂಜಿನ್ ವಿಭಾಗ ಜಖಂಗೊಂಡಿದೆ.

ಇನ್ನು ಪೊಲೀಸರು ಕಾರು ಜಪ್ತಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾರು ಜಪ್ತಿ ಕುರಿತಂತೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಪೊಲೀಸರ ನಡೆದುಕೊಂಡ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿವೆ.

ಇನ್ನು ನೋ ಪಾರ್ಕಿಂಗ್‌ನಲ್ಲಿ ಕಾರು ನಿಲುಗಡೆ ಮಾಡಿದ್ದು ಕಾರು ಮಾಲೀಕನಿಂದ ತಪ್ಪಾಗಿದ್ದು ನಿಜ, ಆದ್ರೆ ಅದಕ್ಕೆ ಸರಿಯಾದ ದಂಡ ವಸೂಲಿ ಮಾಡಬೇಕಿತ್ತು ಎನ್ನುವುದು ಹಲವರ ವಾದ.

ನೋ ಪಾರ್ಕಿಂಗ್‌ನಿಂದ ಕಾರು ಜಪ್ತಿ ಮಾಡುತ್ತಿರುವ ವೀಡಿಯೋ ವೀಕ್ಷಿಸಿ..

Click to compare, buy, and renew Car Insurance online

Buy InsuranceBuy Now

Story first published: Monday, May 15, 2017, 12:01 [IST]
English summary
Benglore traffic police's recovering cars in no-parking slot.
Please Wait while comments are loading...

Latest Photos