ಸುರಕ್ಷಾ ವಿಚಾರದಲ್ಲಿ ಭಾರತೀಯರಿಗೆ ಉತ್ತಮ ಎನ್ನಿಸುವ 5 ಕಾರುಗಳು ಯಾವವು ಗೊತ್ತಾ?

Written By:

ಕಾರು ಖರೀದಿಸುವ ಮುನ್ನ ಪ್ರತಿಯೊಬ್ಬರು ಸುರಕ್ಷಾ ವಿಚಾರವಾಗಿ ಕೂಲಂಕುಶವಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದ್ದು, ಕಾರು ಆಯ್ದುಕೊಳ್ಳುವ ಮುನ್ನ ಕೆಲವು ವಿಚಾರಗಳು ನಿಮ್ಮ ಗಮನದಲ್ಲಿಟ್ಟುಕೊಳ್ಳುವುದು ಒಳಿತು.

ಹೀಗಾಗಿ ಕಾರು ಖರೀದಿಸುವಾಗ ಕೇವಲ ಬೆಲೆ ಮತ್ತು ಹೊಸ ಹೊಸ ವೈಶಿಷ್ಟ್ಯತೆಗಳು ಮಾತ್ರ ಮುಖ್ಯವಲ್ಲ. ಬದಲಾಗಿ ಕಾರಿನಲ್ಲಿರುವ ಸುರಕ್ಷಾ ವಿಚಾರಗಳು ತುಂಬಾ ಮುಖ್ಯವಾಗಿರುತ್ತವೆ.

ಪ್ರಥಮ ಬಾರಿಗೆ ಒಂದು ಕಾರು ಉತ್ಪಾದನೆ ಆದ ನಂತರ ಅದನ್ನು ಗ್ಲೋಬಲ್ ಎನ್‌ಸಿಎಸಿ ಕ್ರ್ಯಾಶ್ ಟೆಸ್ಟಿಂಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಹೊಸ ಕಾರಿನ ಬಗೆಗೆ ಸುರಕ್ಷಾ ವಿಧಾನಗಳನ್ನು ಪರೀಕ್ಷೆ ಮಾಡಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್ ಪಡೆದ ಅಂಕಗಳ ಆಧಾರ ಮೇಲೆ ಯಾವ ಕಾರು ಎಷ್ಟು ಸುರಕ್ಷತೆ ಹೊಂದಿದೆ ಎಂಬುವುದರ ಮೇಲೆ ಆ ಕಾರು ಗ್ರಾಹಕರಿಗೆ ಎಷ್ಟು ಸುರಕ್ಷೆ ನೀಡುತ್ತೆ ಎಂಬುವುದು ನಿರ್ಧಾರವಾಗುತ್ತೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಈ ಕೆಳಗಿನ ನೀಡಲಾಗಿರುವ ಪ್ರಮುಖ 5 ಮಾದರಿಗಳು ಉತ್ತಮ ರೇಟಿಂಗ್ ಪಡೆಯುವ ಇದೀಗ ಗ್ರಾಹಕರಿಗೆ ಉತ್ತಮ ಕಾರು ಮಾದರಿ ಎನ್ನಿಸಿವೆ.

05. ಫೋರ್ಡ್ ಪಿಗೋ ಮತ್ತು ಆಸ್ಪೈರ್

ಹೊಚ್ಚ ಹೊಸ ಫೋರ್ಡ್ ಪಿಗೋ ಮತ್ತು ಆಸ್ಪೈರ್ ಮಾದರಿಗಳಲ್ಲಿ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಪಘಾತಗಳಲ್ಲಿ ಸಂದರ್ಭದಲ್ಲಿ ಹೆಚ್ಚು ಹಾನಿಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಹೊಸ ಮಾದರಿಗಳಲ್ಲಿ ಒಟ್ಟು 6 ಏರ್‌ಬ್ಯಾಗ್‌ಗಳನ್ನು ಪರಿಚಯಿಸಲಾಗಿದೆ.

ಇನ್ನು ಕಳ್ಳತನ ತಡೆಗಟ್ಟಲು ಫೋರ್ಡ್ ಕಾರುಗಳಲ್ಲಿ ಪೆರಿಮೀಟರ್ ಅಲಾರಾಮ್ ಕೂಡಾ ಇದ್ದು, ಎಬಿಎಸ್ ಮತ್ತು ಇಬಿಡಿ ಸೌಲಭ್ಯವನ್ನು ಇರಿಸಲಾಗಿದೆ.

04. ಹ್ಯುಂಡೈ ಐ20
ಡ್ಯುಯಲ್ ಏರ್‌ಬ್ಯಾಗ್, ಆ್ಯಂಟಿ ಪಿಂಚ್ ಪವರ್ ವಿಂಡೋ ಹಾಗೂ ಸ್ಮಾರ್ಟ್ ಪೆಡಲ್ ಹೊಂದಿರುವ ಹ್ಯುಂಡೈ ಐ20 ಕಾರು ಮಾದರಿಯೂ, ಪ್ರಯಾಣದ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷೆ ನೀಡುತ್ತದೆ.

03. ಫೋಕ್ಸ್‌ವ್ಯಾಗನ್ ಪೋಲೋ

ಡ್ಯುಯಲ್ ಏರ್‌ಬ್ಯಾಗ್ ಹಾಗೂ ಎಬಿಎಸ್ ಸ್ಟ್ಯಾಂಡರ್ಡ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಫೋಕ್ಸ್‌ವ್ಯಾಗನ್ ಪೋಲೋ, ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಗಳೊಂದಿಗೆ ಖರೀದಿಗೆ ಉತ್ತಮ ಮಾದರಿಯಾಗಿದೆ.

02.ಹ್ಯುಂಡೈ ಕ್ರೇಟಾ

ಎಸ್‌ಯುವಿ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹ್ಯುಂಡೈ ಕ್ರೇಟಾ, ಆರ್ ಏರ್‌ಬ್ಯಾಗ್, ಎಬಿಎಸ್ ಇಎಸ್‌ಸಿ ಮತ್ತು ರಿರ್ ಪಾರ್ಕಿಂಗ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

01.ಟೊಯೊಟಾ ಲಿವಾ ಮತ್ತು ಎಟಿಯೋಸ್

ಆರಂಭಿಕ ಮಾದರಿಗಳಲ್ಲೇ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಕೀ ಲೇಸ್ ಎಂಟ್ರಿ ಸೌಲಭ್ಯ ಹೊಂದಿರುವ ಟೊಯೊಟಾ ಮಾದರಿಗಳಲ್ಲಿ ಲಿವಾ, ಎಟಿಯೋಸ್ ಖರೀದಿ ಯೋಗ್ಯವಾಗಿವೆ.

ವಿ.ಸೂ- ಪ್ರಯಾಣದ ವೇಳೆ ಆಗಬಹುದಾದ ಅನಾಹುತಗಳ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸಬಲ್ಲ ಸುರಕ್ಷಾ ವಿಧಾನಗಳ ಆಧಾರದ ಮೇಲೆ ಈ ಐದು ಮಾದರಿಗಳನ್ನು ಆಯ್ಕೆ ಮಾಡಲಾಗಿದೆ.

English summary
Read in Kannada about top 5 best safest cars in India.
Please Wait while comments are loading...

Latest Photos