ಟ್ರಕ್ ಮಾರಾಟದಲ್ಲಿ ಭಾರತ್ ಬೆಂಝ್ ಹೊಸ ಮೈಲಿಗಲ್ಲು..!!

Written By:

ಕಳೆದ ಐದು ವರ್ಷಗಳ ಅವಧಿಯಲ್ಲಿ ವಾಣಿಜ್ಯ ವಾಹನಗಳ ಮಾರಾಟ ದ್ವಿಗುಣಗೊಂಡಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಭಾರತ್ ಬೆಂಝ್ ಯಶಸ್ವಿಯಾಗಿದೆ. ಈ ಮೂಲಕ 50 ಸಾವಿರ ಟ್ರಕ್‌ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸಾಧಿಸಿದೆ.

2012ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಹೆವಿ ಡ್ಯೂಟಿ ಟ್ರಕ್‌ಗಳನ್ನು ಪರಿಚಯ ಮಾಡಿದ್ದ ಭಾರತ್ ಬೆಂಝ್, ಇದುವರೆಗೆ 50 ಸಾವಿರ ಟ್ರಕ್‌ಗಳನ್ನು ಮಾರಾಟ ಮಾಡಿದೆ.

ಹೆವಿ ಡ್ಯೂಟಿ ಹಾಗೂ ಮಧ್ಯಮ ಗಾತ್ರದ ಟ್ರಕ್ ಉತ್ಪಾದನೆ ಮಾಡುವ ಭಾರತ್ ಬೆಂಝ್, ಸುಧಾರಿತ ತಂತ್ರಜ್ಞಾನಗಳೊಂದಿಗೆ ಪ್ರಸ್ತುತ ಮಾದರಿಗಳನ್ನು ಪರಿಚಯ ಮಾಡಿದೆ.

ಬಿಎಸ್-4 ಹಾಗೂ ಎಹೆಚ್‌ಓ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರ ಮನಗೆದ್ದಿರುವ ಭಾರತ್ ಬೆಂಝ್, ಸುರಕ್ಷಾ ದೃಷ್ಠಿಯಿಂದಲೂ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ.

ಆದ್ದರಿಂದಲೇ ಕೇವಲ 5 ವರ್ಷಗಳಲ್ಲಿ 50 ಸಾವಿರ ಟ್ರಕ್ ಮಾರಾಟ ಮಾಡಲು ಸಾಧ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಭಾರತ್ ಬೆಂಝ್ ನಿರ್ಧರಿಸಿದೆ.

ಮೊನ್ನೆಯಷ್ಟೇ ಹೊಸ ಮಾದರಿಯ ಟ್ರಕ್ ಬಿಡುಗಡೆಗೊಳಿಸಿರುವ ಭಾರತ್ ಬೆಂಝ್, ಉತ್ತಮ ಇಂಧನ ಕಾರ್ಯಕ್ಷಮತೆ, ಕಡಿಮೆ ನಿರ್ವಹಣಾ ವೆಚ್ಚದ ಜೊತೆ ಸಾಕಷ್ಟು ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಟ್ರಕ್‌ಗಳನ್ನು ಪರಿಚಯ ಮಾಡಿದೆ.

English summary
Read in Kannada about bharat benz achieves 50,000 truck sales in India.
Please Wait while comments are loading...

Latest Photos