ಬಿಹಾರದಲ್ಲಿ ವಾಣಿಜ್ಯ ಮತ್ತು ಶಾಲಾ ವಾಹನಗಳಿಗೆ 'ಸ್ಪೀಡ್ ಗವರ್ನರ್' ಕಡ್ಡಾಯ

Written By:

ಬಿಹಾರದ ರಾಜ್ಯ ಸಾರಿಗೆ ಇಲಾಖೆ, ಅಕ್ಟೋಬರ್ 1, 2017ರ ಒಳಗಾಗಿ ನೋಂದಣಿ ಮಾಡಲಾದ ಎಲ್ಲಾ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಅಕ್ಟೋಬರ್ ತಿಂಗಳ ಒಳಗಾಗಿ ನೋಂದಣಿ ಮಾಡಲಾದ ಎಲ್ಲಾ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಲು ಬಿಹಾರದ ರಾಜ್ಯ ಸಾರಿಗೆ ಇಲಾಖೆ ತೀರ್ಮಾನಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದಂತೆ ವಾಣಿಜ್ಯ ವಾಹನ ತಯಾರಕರು ಎಲ್ಲಾ ಹೊಸ ವಾಹನಗಳಲ್ಲೂ ಈ ಸಾಧನಗಳನ್ನು ಅಳವಡಿಸುವ ಅಗತ್ಯವಿದೆ.

2002ರಲ್ಲಿ ವಾಣಿಜ್ಯ ವಾಹನಗಳ ಮೇಲೆ ವೇಗದ ಗವರ್ನರ್‌ಗಳನ್ನು ಅಳವಡಿಸಲು ಆದೇಶ ಬಂದಿತ್ತು, ಆದರೆ ಯಾವುದೇ ರೀತಿಯ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇದ್ದದ್ದು ವಿಪರ್ಯಾಸ ಎನ್ನಬಹುದು.

ಹೆಸರೇ ಸೂಚಿಸುವಂತೆ ಸ್ಪೀಡ್ ಗವರ್ನರ್ ವಾಹನದ ವೇಗವನ್ನು ಮಿತಿಗೊಳಿಸಲಿದ್ದು, ಅಪೆಕ್ಸ್ ನ್ಯಾಯಾಲಯ ಮಾರ್ಗದರ್ಶಿ ಸಾಲುಗಾಳಿಗನುಗುಣವಾಗಿ ಈ ಸ್ಪೀಡ್ ಗವರ್ನರ್ ಅಳವಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ವಾಣಿಜ್ಯ ವಾಹನಗಳಿಗೆ ವೇಗದ ಗವರ್ನರ್‌ಗಳನ್ನು ಕಡ್ಡಾಯಗೊಳಿಸುವುದಕ್ಕೆ ಈಗಾಗಲೇ ಪ್ರತ್ಯೇಕ ಸೂಚನೆಗಳನ್ನು ನೀಡಿವೆ.

ವೇಗದ ಗವರ್ನರ್ ಅಳವಡಿಕೆಯ ನಂತರ ಫ್ರೆಶ್ ಫಿಟ್ನೆಸ್ ಸರ್ಟಿಫಿಕೇಟ್ (FC) ಆಯಾ ಜಿಲ್ಲೆಯ ಆರ್‌ಟಿಓ ಕಚೇರಿಗೆ ನೀಡುವಂತೆ ಬಿಹಾರ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಏಪ್ರಿಲ್‌ನಲ್ಲಿ ಬಿಹಾರ್ ರಾಜ್ಯ ಸರಕಾರವು ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಶಾಲೆಯ ವಾಹನಗಳ ವೇಗ ಗಂಟೆಗೆ 40 ಕಿ.ಮೀ ಮತ್ತು ಡಂಪ್ ಟ್ರಕ್‌ಗಳ ವೇಗವನ್ನು ಗಂಟೆಗೆ 60 ಕಿ.ಮೀ ನಿರ್ಬಂಧ ಹೇರಲಾಗಿದೆ.

Story first published: Saturday, June 10, 2017, 14:26 [IST]
English summary
Read in Kannada about Bihar has made speed governors mandatory for all commercial vehicles in the state registered on or before October 1, 2017
Please Wait while comments are loading...

Latest Photos