ದಟ್ಸನ್ ಗೊ ಮತ್ತು ದಟ್ಸನ್ ಗೊ ಪ್ಲಸ್ ಸ್ಪೆಷಲ್ ಆವೃತ್ತಿ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ಗೊ ಮತ್ತು ದಟ್ಸನ್ ಗೊ ಪ್ಲಸ್ ಸ್ಪೆಷಲ್ ಆವೃತ್ತಿ ಬಿಡುಗಡೆಯಾಗಿದ್ದು, ಸಂಪೂರ್ಣ ವಿವರ ಇಲ್ಲಿದೆ.

Written By:

ಮೂರನೇ ವರ್ಷದ ಸಂಭ್ರಮದಲ್ಲಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ದಟ್ಸನ್, ಹೊಸ ರೂಪದೊಂದಿಗೆ ಮತ್ತೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ದಟ್ಸನ್ ಗೊ ಮತ್ತು ದಟ್ಸನ್ ಗೊ ಪ್ಲಸ್ ಸ್ಪೆಷಲ್ ಆವೃತ್ತಿಗಳು ಬಿಡುಗಡೆಗೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

3 ವರ್ಷಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಗ್ರಾಹಕರ ಮನಗೆದ್ದಿರುವ ದಟ್ಸನ್, ಮತ್ತೊಮ್ಮೆ ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಜೊತೆಗೆ ಗೊ ಪ್ಲಸ್ ಸ್ಪೆಷಲ್ ಆವೃತ್ತಿಯು ಕೂಡಾ ಬಿಡುಗಡೆಯಾಗಿದೆ.

ವಿಶೇಷ ವಿನ್ಯಾಸ ಹೊಂದಿರುವ ದಟ್ಸನ್ ಗೊ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.4.19 ಲಕ್ಷಕ್ಕೆ ಹಾಗೂ ಗೊ ಪ್ಲಸ್ ಆವೃತ್ತಿ ರೂ.4.9 ಲಕ್ಷಕ್ಕೆ ಲಭ್ಯವಿದೆ.

3ನೇ ವರ್ಷಾಚರಣೆ ಹಿನ್ನೆಲೆ ದಟ್ಸನ್ ಆವೃತ್ತಿಗಳನ್ನು ಮರುಬಿಡುಗಡೆ ಮಾಡಿರುವ ನಿಸ್ಸಾನ್ ಸಂಸ್ಥೆಯು, ಬೆಲೆಗಳಲ್ಲಿ ಯಾವುದೇ ಏರಿಕೆ ಮಾಡದೆ ಈ ಹಿಂದಿನ ಬೆಲೆಗಳಲ್ಲೇ ಹೊಸ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಸಿದ್ಧಗೊಂಡಿರುವ ದಟ್ಸನ್ ಗೊ ಹಾಗೂ ದಟ್ಸನ್ ಗೊ ಪ್ಲಸ್ ಮಾದರಿಗಳು, ಹ್ಯಾಚ್‌ಬ್ಯಾಕ್ ಮಾದರಿ ವಿಶೇಷ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರನ್ನು ಗಮನಸೆಳೆಯುವ ತವಕದಲ್ಲಿವೆ.

ಹೊಸ ಮಾದರಿಗಳಲ್ಲಿನ ಗ್ರಾಫಿಕ್ಸ್ ಡಿಸೈನ್ ಅದ್ಭುತವಾಗಿದ್ದು, ಒಳಭಾಗದ ವಿನ್ಯಾಸಗಳು ಹೊಸ ಲುಕ್‌ ಹೊಂದಿವೆ. ಜೊತೆಗೆ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹೊಸ ಆವೃತ್ತಿಗಳ ಹಿಂಭಾಗದಲ್ಲಿ ಬ್ಯಾಡ್ಜ್ ಕೂಡಾ ಹಾಕಲಾಗಿದೆ.

ದಟ್ಸನ್ ವಿನೂತನ ಮಾದರಿಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. 2 ವರ್ಷಗಳ ಕಾಲ ಯಾವುದೇ ಕಿಲೋ ಮೀಟರ್ ಮೀತಿಯಿಲ್ಲದೇ ವಾರಂಟಿ ನೀಡಲಾಗುತ್ತಿದ್ದು, ಇದರ ಜೊತೆಗೆ ಇದೇ ಆಫರ್‌ಗಳನ್ನು 5 ವರ್ಷಗಳ ತನಕ ವಿಸ್ತರಣೆ ಕೂಡಾ ಮಾಡಿಕೊಳ್ಳಬಹುದಾಗಿದೆ.

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ದಟ್ಸನ್ ಮಾದರಿಯೂ 67ಬಿಎಚ್‌ಪಿ ಮತ್ತು 104ಎಂಎನ್ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.

ಅತ್ಯುತ್ತಮ ಆಫರ್‌ಗಳೊಂದಿಗೆ ಗ್ರಾಹಕನ್ನು ಸೆಳೆಯುತ್ತಿರುವ ನಿಸ್ಸಾನ್, ದಟ್ಸನ್ ಮಾರಾಟದಲ್ಲಿ ಹೊಸ ದಾಖಲೆ ಮಾಡುವ ತವಕದಲ್ಲಿದೆ. ಇದಲ್ಲದೇ ಬಜೆಟ್ ಮತ್ತು ಹೊಸ ತಂತ್ರಜ್ಞಾನ ವಿಚಾರಕ್ಕೆ ಬಂದರೆ ಖರೀದಿಗೆ ಇವು ಉತ್ತಮ ಕಾರು ಮಾದರಿ ಎನ್ನಬಹುದು.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

English summary
Read in Kannada about Datsun GO & GO+ Special Anniversary Edition Launched In India.
Please Wait while comments are loading...

Latest Photos

LIKE US ON FACEBOOK