ಬಿಎಸ್-3 V/S ಬಿಎಸ್-4, ಯಾವುದು ಉತ್ತಮ ?

Written By:

ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಬಿಎಸ್ III ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ಈ ನಿಟ್ಟಿನಲ್ಲಿ ಈ ಬಿಎಸ್ ಎಂಜಿನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ, ಓದಿ.

ಭಾರತ್ ಸ್ಟೇಜ್ ಅಂದ್ರೆ ಏನು..?

ಭಾರತ್ ಸ್ಟೇಜ್ ಎನ್ನುವುದು ಕೇಂದ್ರ ಸರ್ಕಾರ ದ್ವಿಚಕ್ರ ಮತ್ತು ತ್ರಿಚಕ್ರ, ಕಾರುಗಳು ಮತ್ತು ಎಲ್ಲ ಮಾದರಿಯ ವಾಣಿಜ್ಯ ವಾಹನಗಳಿಗೆ ನಿಗದಿ ಮಾಡಿದ ಮಾಲಿನ್ಯ ಪ್ರಮಾಣದ ನಿಯಂತ್ರಣ ಮಾನದಂಡವಾಗಿದೆ.

 

ಬಿಎಸ್-3 ನಿಷೇದ ಮಾಡಲು ಕಾರಣವೇನು ?

1 ಬಿಎಸ್‌3 ಎಂಜಿನ್‌ ವಾಹನಗಳಿಗೆ ಹೋಲಿಸಲಿದೆ ಬಿಎಸ್‌ 4 ವಾಹನಗಳು ಉಗುಳುವ ಹೊಗೆಯಲ್ಲಿ ಮಾಲಿನ್ಯಕಾರಕ ಅಂಶಗಳ ಪ್ರಮಾಣ ತೀರಾ ಕಡಿಮೆ.

 

ಬಿಎಸ್-3 ನಿಷೇದ ಮಾಡಲು ಕಾರಣವೇನು ?

2. ಬಿಡುಗಡೆಗೊಳ್ಳಲಿರುವ ಬಿಎಸ್ 3 ವಾಹನಗಳನ್ನು ನಿಷೇಧಿಸುವುದರಿಂದ ವಾಯುಮಾಲಿನ್ಯ ನಿಯಂತ್ರಿಸಬಹುದಾಗಿದ್ದು,, 3 ಬಿಎಸ್‌ 4 ಇಂಧನ ಉತ್ಪಾದನೆ ಸಲುವಾಗಿ, ಶುದ್ಧೀಕರಣ ಘಟಕಗಳನ್ನು ಮಾರ್ಪಡಿಸಲು ತೈಲ ಕಂಪೆನಿಗಳು ಸುಮಾರು ₹ 30 ಸಾವಿರ ಕೋಟಿ ವೆಚ್ಚ ಮಾಡಿವೆ.

ಯಾವ ಕಂಪನಿ ಬಿಎಸ್-4 ವಾಹನಗಳನ್ನು ಹೊಂದಿದೆ ?

ಸುಜುಕಿ, ಹುಂಡೈ, ಬಜಾಜ್ ಮೊದಲಾದ ಕಂಪೆನಿಗಳು ಈಗಾಗಲೇ ಬಿಎಸ್ 4ಗೆ ವರ್ಗಾಯಿಸಿಕೊಂಡಿದ್ದಾರೆ. ಉಳಿದ ಕಂಪೆನಿಗಳು ಸಂಶೋಧನೆ, ಅಭಿವೃದ್ಧಿ ಮತ್ತು ಬದಲಾವಣೆಯ ಹಂತದಲ್ಲಿವೆ.

 

ವಾಹನ ತಯಾರಿಕ ಕಂಪನಿಗಳು ಏನು ಹೇಳುತ್ತಿವೆ ?

ಸರ್ಕಾರದ ಈ ನಿರ್ಧಾರವನ್ನು ಈಗಾಗಲೇ ಕೆಲವು ವಾಹನ ತಯಾರಕ ಕಂಪನಿಗಳು ಸ್ವಾಗತಿಸಿದ್ದು, ತಂತ್ರಜ್ಞಾನವನ್ನು ಈಗಾಗಲೇ ತಮ್ಮ ವಾಹನಗಳಿಗೆ ಅಳವಡಿಸಿವೆ.

ವಾಹನ ತಯಾರಿಕ ಕಂಪನಿಗಳು ಏನು ಹೇಳುತ್ತಿವೆ ?

ಈಗಾಗಲೇ ನೋಂದಣಿಯಾಗಿರುವ ಬಿಎಸ್-3 ವಾಹನಗಳ ಮರುಮರಾಟ, ಮಾಲಿಕತ್ವ ಹಾಗೂ ವಿಳಾಸ ಬದಲಾವಣೆಗೆ ಈ ನಿಯಮ ಅನ್ವಯಿಸುವುದಿಲ್ಲ.

ವಾಹನ ತಯಾರಿಕ ಕಂಪನಿಗಳು ಏನು ಹೇಳುತ್ತಿವೆ ?

ಬಿಎಸ್-4 ಮಾನದಂಡಕ್ಕೆ ಒಗ್ಗಿಕೊಳ್ಳಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರು ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಅಳವಡಿಸಬೇಕು, ಇದನ್ನು ಅಳವಡಿಸಬೇಕಾದರೆ ವಾಹನದ ವಿನ್ಯಾಸ ಕೂಡ ಬದಲಾಯಿಸಬೇಕು, ಇದು ತುಂಬಾ ಕಠಿಣವಾದ ಕೆಲಸವಾಗಿದ್ದು, ಹೆಚ್ಚಿನ ಹಣ ಬೇಡುತ್ತದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಹನ ತಯಾರಿಕ ಕಂಪನಿಗಳು ಏನು ಹೇಳುತ್ತಿವೆ ?

ಕಳೆದ ತಿಂಗಳ ಕೊನೆಯಲ್ಲಿ ಬಿಎಸ್-3 ಬೈಕ್‍ಗಳನ್ನು 15, 20 ಸಾವಿರ ರೂ. ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು.

ವಾಹನ ತಯಾರಿಕ ಕಂಪನಿಗಳು ಏನು ಹೇಳುತ್ತಿವೆ ?

ಇನ್ನು ವಾಹನ ತಯಾರಕರಿಗೆ ಉಳಿದಿರೋ ಎರಡನೇ ಮಾರ್ಗವೆಂದರೆ ಬಿಎಸ್-3 ಮಾನದಂಡಕ್ಕೆ ಹೊಂದಿಕೆಯಾಗುವಂತಹ ರಾಷ್ಟ್ರಗಳಿಗೆ ಈ ವಾಹನಗಳನ್ನು ರಫ್ತು ಮಾಡಬೇಕಾಗುತ್ತದೆ.

ಭಾರತ ಸರ್ಕಾರದ ಮುಂದಿನ ನಡೆ ಏನು ?

ಸದ್ಯ ಪರಿಚಯ ಮಾಡಿರುವ ಬಿಎಸ್-4 ನಂತರ ಬಿಎಸ್ -5 ಮಾನದಂಡವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, 2020ರ ವೇಳೆಗೆ ದೇಶದಾದ್ಯಂತ ಬಿಎಸ್-6 ಮಾನದಂಡ ಜಾರಿಗೊಳಿಸಲು ಉದ್ದೇಶಿಸಿದೆ ಹಾಗು ವಾಹನ ಉತ್ಪಾದಕರು ಮತ್ತು ತೈಲ ಕಂಪೆನಿಗಳು ಈ ಬದಲಾವಣೆಗೆ ಸಿದ್ದರಾಗುವಂತೆ ಸೂಚಿಸಲಾಗಿದೆ.

ಬಿಎಸ್-3 ಎಂಜಿನ್ ಇಂಧನದ ಗುಣಮಟ್ಟ ಕಮ್ಮಿ ಇರುತ್ತಾ ?

ಬಿಎಸ್‌ 4 ವಾಹನಗಳಲ್ಲಿ ಬಿಎಸ್‌ 3 ಗುಣಮಟ್ಟದ ಇಂಧನ ಬಳಸಿದರೆ, ಅವುಗಳ ಎಂಜಿನ್‌ಗೆ ಭಾರಿ ಪ್ರಮಾಣದ ಹಾನಿಯಾಗುವ ಸಂಭವ ಇರುವುದರಿಂದ ಸರ್ಕಾರ ಈಗಾಗಲೇ ಬಿಎಸ್‌ 4 ಇಂಧನ ಉತ್ಪಾದನೆ ಮಾಡುವ ಶುದ್ಧೀಕರಣ ಘಟಕಗಳನ್ನು ಮಾರ್ಪಡು ಮಾಡಲು ಸುಮಾರು ₹ 30 ಸಾವಿರ ಕೋಟಿ ವೆಚ್ಚ ಮಾಡಿವೆ.

 

ಕೊನೆ ಕ್ಷಣದಲ್ಲಿ ಖರೀದಿ ಮಾಡಿದವರಿಗೆ ತೊಂದ್ರೆ ಆಗುತ್ತಾ...?

ಇತ್ತೀಚೆಗೆ ಬಿಎಸ್3 ಎಂಜಿನ್ ಖರೀದಿಸಿದವರಿಗೆ ಸದ್ಯ ಯಾವುದೇ ತೊಂದರೆ ಇಲ್ಲ, ಆದರೆ ಇನ್ನು ಕೇವಲ 3 ವರ್ಷಗಳಲ್ಲಿ 2020ಕ್ಕೆ ಬಿಎಸ್-4 ಕಾಲ ಮುಗಿದು, ಬಿಎಸ್-5 ವಾಹನಗಳ ಯುಗ ಆರಂಭವಾಗುತ್ತೆ.

 

ಕೊನೆ ಕ್ಷಣದಲ್ಲಿ ಖರೀದಿ ಮಾಡಿದವರಿಗೆ ತೊಂದ್ರೆ ಆಗುತ್ತಾ...?

ಮುಂದಿನ ಕೆಲ ವರ್ಷಗಳಲ್ಲಿ ಬಿಎಸ್-3 ಬೈಕ್​'ಗಳು ಸಂಪೂರ್ಣ ನಿಷೇಧವಾಗುವ ಸಾಧ್ಯತೆ ಇದ್ದು, ಬಿಎಸ್-3 ವಾಹನಗಳಿಗೆ ರೀ-ಸೇಲ್ ಮೌಲ್ಯವೂ ಇರುವುದಿಲ್ಲ.

ಈ ನಿಯಮದಿಂದಾಗಿ ಕಂಪನಿಗಳಿಗೆ ಆದ ನಷ್ಟ ಎಷ್ಟು ?

ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಈ ಮೊದಲೇ ಆಟೋ ಉತ್ಪಾದಕರಿಗೆ ಎಚ್ಚರಿಕೆ ನೀಡಿದ್ದ ಸುಪ್ರೀಂಕೋರ್ಟ್, ಬಿಎಸ್-3 ಎಂಜಿನ್ ಸಾಮರ್ಥ್ಯದ ವಾಹನಗಳ ಉತ್ಪಾದನೆ ಮಾಡದಂತೆ ಸೂಚನೆ ನೀಡಿತ್ತು.

 

ಈ ನಿಯಮದಿಂದಾಗಿ ಕಂಪನಿಗಳಿಗೆ ಆದ ನಷ್ಟ ಎಷ್ಟು ?

ಆದರೆ ಸುಪ್ರೀಂಕೋರ್ಟ್ ಈ ಹೊಸ ನಿಯಮದಿಂದಾಗಿ ಆಟೋ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಅಂದಾಜು 3 ಲಕ್ಷ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ.

ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

ಬಿಎಸ್-3 ಎಂಜಿನ್ ಹೊಂದಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಇಲ್ಲುವುದಿಲ್ಲ.

 

ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

ಬಿಎಸ್-3 ಎಂಜಿನ್ ಹೊಂದಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಎಂಜಿನ್ ಚಲನೆಯ ಸ್ಥಿತಿಯಲ್ಲಿ ನಿಲುಗಡೆ ಮಾಡಿದ ವೇಳೆಯಲ್ಲಿ ವಾಹನದಿಂದ ಇಂಧನ ಆವಿಯಾಗುವ ಪ್ರಮಾಣ ಕಡಿಮೆ ಇರುತ್ತದೆ.

ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

ಬಿಎಸ್-3 ವಾಹನಗಳಿಗೆ ಹೋಲಿಸಿದರೆ ಹೊಸ ತಂತ್ರಜ್ಞಾನ ಪಡೆಯುವ ಬಿಎಸ್-4 ಎಂಜಿನ್ ವಾಹನ ಅತಿ ದುಬಾರಿಯಾಗಲಿದೆ.

ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

ಬಿಎಸ್-3 ಎಂಜಿನ್ನಿನಲ್ಲಿ ಪೂರ್ತಿಯಾಗಿ ಉರಿಯದೆ ಇರುವಂತಹ ಹೈಡ್ರೋಕಾರ್ಬೊನ್ಸ್ ಮತ್ತು NOx ಹೊರಸೂಸುವಿಕೆಯ ಅಂಶ ಬಿಡುಗಡೆಗೊಳ್ಳುವುದರಿಂದ ಈ ವಿಷಕಾರಿ ಅಂಶ ಗಾಳಿಗೆ ಸೇರಿ ಬಹಳಷ್ಟು ಮಾಲಿನ್ಯ ಮಾಡುತ್ತದೆ.

ಬಿಎಸ್-3 ಮತ್ತು ಬಿಎಸ್-4 ಎಂಜಿನ್ನುಗಳ ವ್ಯತ್ಯಾಸ ಏನು ?

ಬಿಎಸ್4 ಎಂಜಿನ್ ಹೊಸ ತಂತ್ರಜ್ಞಾನದ ಕಾರ್ಬನ್ ಸಣ್ಣ ಡಬ್ಬಿ, ಆಕ್ಸಿಜನ್ ಸೆನ್ಸರ್, ಮೂರು ಹಾದಿ ಹೊಂದಿರುವ ಕ್ಯಾಟಲಿಸ್ಟ್ ಸಿಸ್ಟಮ್ ಎಂಬ ಸಾಧನೆಗಳನ್ನು ಹೊಂದಿರಲಿದ್ದು, ಇದರಿಂದಾಗಿ ಗಾಳಿಗೆ ಸೇರ್ಪಡೆಯಾಗಲಿರುವ ಹೈಡ್ರೋಕಾರ್ಬೊನ್ಸ್ ವಿಷಕಾರಿ ಅಂಶ ಮತ್ತು NOx ಹೊರಸೂಸುವಿಕೆಯ ಅಂಶ ತಡೆಯಬಹುದಾಗಿದೆ.

ವಾಯು ಮಾಲಿನ ಮಾಡುವ ಅನೇಕ ವಿಷಕಾರಿ ಅಂಶಗಳಲ್ಲಿ CO (ಇಂಗಾಲದ ಮಾನಾಕ್ಸೈಡ್), HC (ಹೈಡ್ರೋಕಾರ್ಬೊನ್ಸ್), NOx (ನೈಟ್ರಸ್ ಆಕ್ಸೈಡ್), ಎಂಬ ಅಂಶಗಳು ಪ್ರಮುಖವಾಗಿದ್ದು, ಇವುಗಳು ಪರಿಸರಕ್ಕೆ ಬಿಡುಗಡೆಯಾಗುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಬಿಎಸ್-4 ಎಂಜಿನ್ ಅಳವಡಿಸಲು ಮುಂದಾಗಿದೆ.

Story first published: Wednesday, April 5, 2017, 13:47 [IST]
English summary
[read in kannada] Difference Between BS3 And BS4 Engines. details about indian emission norms, difference between bs3 and bs4 engines
Please Wait while comments are loading...

Latest Photos