ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತವೆ ಗೊತ್ತಾ?

Written By:

ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿರ್ದಿಷ್ಟ ವಾಹನಗಳು ಇಂತಹುದೇ ಬಣ್ಣಗಳ ನಂಬರ್ ಪ್ಲೇಟ್‌ಗಳನ್ನು ಹೊಂದಿರಬೇಕೆಂಬ ನಿಯಮಗಳಿವೆ. ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನಿನ ಪ್ರಕಾರ ಭಾರೀ ಪ್ರಮಾಣದ ದಂಡ ಕೂಡಾ ತೆರಬೇಕಾಗುತ್ತೆ.

ದೈನಂದಿನ ಸಂಚಾರದ ವೇಳೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್‌ಗಳು ನಮ್ಮ ಕಣ್ಣ ಮುಂದೆ ದರ್ಶನವಾಗುತ್ತದೆ. ಆದ್ರೆ ಯಾವ ಬಣ್ಣದ ನಂಬರ್ ಪ್ಲೇಟ್ ಏನನ್ನು ಸೂಚಿಸುತ್ತೆ ಎಂಬ ಬಗ್ಗೆ ಬಹುತೇಕ ಜನತೆಗೆ ಸರಿಯಾದ ಮಾಹಿತಿ ಇಲ್ಲ.

ಹಾಗಿದ್ದರೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತದೆ? ಯಾವುದರ ಸಂಕೇತವಿದು ಎಂಬ ಎಲ್ಲ ರೀತಿಯ ಗೊಂದಲಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಿದ್ದೇವೆ.

ಬಿಳಿ ಬಣ್ಣದ ಬೋರ್ಡ್
ಬಿಳಿ ಬೋರ್ಡ್‌ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ಕಾರುಗಳು ಖಾಸಗಿ ವಿಭಾಗಕ್ಕೆ ಸೇರಿದ ವಾಹನಗಳಾಗಿವೆ. ಇವೆಲ್ಲವೂ ಖಾಸಗಿ ಬಳಕೆಗಷ್ಟೇ ಸೀಮಿತವಾಗಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವಂತಿಲ್ಲ.

ಹಳದಿ ಬಣ್ಣದ ಬೋರ್ಡ್
ಹಳದಿ ಬೋರ್ಡ್ ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ವಾಹನಗಳು ಟ್ಯಾಕ್ಸಿ ಮತ್ತು ಟ್ರಕ್ ವಿಭಾಗಕ್ಕೆ ಸೇರಿದ ವಾಣಿಜ್ಯ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಚಾಲಕನಿಗೆ ವಾಣಿಜ್ಯ ಪರವಾನಗಿಯ ಅಗತ್ಯವಿರುತ್ತದೆ.

ಕಪ್ಪು ಬಣ್ಣದ ಬೋರ್ಡ್
ಕಪ್ಪು ಬೋರ್ಡ್ ಮೇಲೆ ಹಳದಿ ಅಕ್ಷರಗಳನ್ನು ಹೊಂದಿರುವ ವಾಣಿಜ್ಯ ವಾಹನಗಳು ಬಾಡಿಗೆಗೆ ಲಭ್ಯವಿರುವ ಸೆಲ್ಪ್ ಡ್ರೈವ್ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದ್ದು ವಾಣಿಜ್ಯ ಪರವಾನಗಿಯ ಅಗತ್ಯವಿರುವುದಿಲ್ಲ.

ತಿಳಿ ನಿಲಿ ಬಣ್ಣದ ಬೋರ್ಡ್
ತಿಳಿ ನೀಲಿ ಬೋರ್ಡ್ ಮೇಲೆ ಬಿಳಿ ಅಕ್ಷರಗಳನ್ನು ಹೊಂದಿರುವ ವಾಹನಗಳು ವಿದೇಶಿ ದೂತವಾಸಗಳ ವಾಹನಗಳಾಗಿರುತ್ತದೆ. ಇಂತಹ ನಂಬರ್ ಪ್ಲೇಟ್ ಗಳು ಯುಎನ್, ಸಿಡಿ ಅಥವಾ ಸಿಸಿ ಗಳೆಂಬ ವಿಶೇಷ ಸಂಕೇತಗಳನ್ನು ಹೊಂದಿರುತ್ತದೆ.

ತಿಳಿ ನಿಲಿ ಬೋರ್ಡ್‌ನಲ್ಲಿ ಯುಎನ್ ಎಂಬುದು ವಿಶ್ವಸಂಸ್ಥೆ, ಸಿಡಿ ಎಂಬುದು ಡಿಪ್ಲೋಮ್ಯಾಟಿಕ್ ಕಾರ್ಪ್ ಮತ್ತು ಸಿಸಿ ಎಂಬುದು ಕನ್ಸೂಲರ್ ಕಾರ್ಪ್ಸ್ ಎಂಬುದನ್ನು ಸೂಚಿಸುತ್ತದೆ.

ವಿವಿಐಪಿ ಕಾರು
ಭಾರತದ ರಾಷ್ಟ್ರಪತಿ ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ರಾಜ್ಯಪಾಲರಿಗೆ ಮಾತ್ರ ಲೈಸನ್ಸ್ ಪ್ಲೇಟ್ ಗಳಿಲ್ಲದ ತ್ರಿವರ್ಣ ಪತಾಕೆ ಹೊಂದಿರುವ ಅಧಿಕೃತ ಕೆಂಪು ವರ್ಣದ ನಂಬರ್ ಪ್ಲೇಟ್ ಕಾರುಗಳಲ್ಲಿ ಸಂಚರಿಸುವ ಹಕ್ಕಿರುತ್ತದೆ.

ಮಿಲಟರಿ ವಾಹನಗಳು
ಇತರೆ ನಂಬರ್ ಪ್ಲೇಟ್ ವಾಹನಗಳನ್ನು ಹೋಲಿಸಿದಾಗ ಮಿಲಿಟರಿ ವಾಹನಗಳು ವಿಶಿಷ್ಟ ಶೈಲಿಯ ನಂಬರ್ ಪ್ಲೇಟ್ ಶೈಲಿಯನ್ನು ಹಿಂಬಾಲಿಸುತ್ತಿದೆ. ಮೊದಲಿಗೆ ಮೇಲ್ಖುಖವಾದ ಬಾಣ ಬಳಕೆಯಿದ್ದು, ಮೊದಲ ಎರಡು ಅಕ್ಷರಗಳು ಈ ವಾಹನ ಮಿಲಿಟರಿಗೆ ಯಾವ ಇಸವಿಯಲ್ಲಿ ಸೇರ್ಪಡೆಯಾಯಿತು ಎಂಬುದನ್ನು ತಿಳಿಸುತ್ತದೆ.

ನಿಯಮ ತಪ್ಪಿದ್ರೆ ಭಾರೀ ದಂಡ
ಇನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿರ್ದಿಷ್ಟ ವಾಹನಗಳು ಇಂತಹುದೇ ಬಣ್ಣದ ನಂಬರ್ ಪ್ಲೇಟ್ ಹೊಂದಿರಬೇಕೆಂಬ ನಿಯಮವಿದ್ದು, ನಿಯಯ ಉಲ್ಲಂಘನೆ ಮಾಡಿದ್ರೆ ಭಾರೀ ಪ್ರಮಾಣದ ದಂಡ ಹಾಕಲಾಗುತ್ತೆ.

 

Story first published: Friday, April 21, 2017, 14:27 [IST]
English summary
Number Plates that Denote Different Purposes in India.
Please Wait while comments are loading...

Latest Photos