ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಕಳೆದ ಕೆಲವು ವರ್ಷಗಳಿಂದ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಕಾರುಗಳಲ್ಲಿ ಯಾವುದು ಅತ್ಯುತ್ತಮ ಎಂಬುದರ ಬಗ್ಗೆ ನಿರಂತರ ಚರ್ಚೆಗಳು ಜಾರಿಯಲ್ಲಿದ್ದು, ಕೆಲವು ಮಹತ್ವದ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

By Praveen

ಮ್ಯಾನುವಲ್ ಕಾರು ಬಳಕೆ ಕುರಿತಂತೆ ವಾಹನ ತಜ್ಞರು ಕೆಲವು ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿದ್ದು, ವಾಹನ ಚಾಲನೆ ವೇಳೆ ಈ ವಿಧಾನಗಳನ್ನು ಅನುಸರಿಸುವುದು ಒಳಿತು.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸುಲಭ ಚಾಲನೆಯನ್ನು ನೀಡಿದಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಕಾರು ನೈಜ ಚಾಲನಾ ಇಷ್ಟಪಡುವವರಿಗೆ ಸೂಕ್ತವೆನಿಸಲಿದೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಪ್ರಸ್ತುತ ಲೇಖನದಲ್ಲಿ ಮ್ಯಾನುವಲ್ ಕಾರನ್ನು ಓಡಿಸುವಾಗ ಚಾಲಕರು ಗಮನದಲ್ಲಿಟ್ಟುಕೊಳ್ಳಬೇಕಾದ ಅಥವಾ ಮಾಡಬಾರದ ಐದು ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

01. ಸ್ಟೀರಿಂಗ್ ಮೇಲೆ ಕೈಯಿರಲಿ

ಬಹುತೇಕ ವಾಹನ ಸವಾರರು ತಮ್ಮ ಬಲಗೈಯನ್ನು ಸ್ಟೀರಿಂಗ್ ವೀಲ್ ಮೇಲೂ, ಎಡಗೈಯನ್ನು ಗೇರ್ ನಾಬ್ ಮೇಲೆ ಇಟ್ಟುಕೊಂಡು ವಾಹನ ಚಾಲನೆ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಆದ್ರೆ ಇದು ತಪ್ಪು.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಇದರಿಂದ ನಿಮ್ಮ ಕೈಗಳಿಗೆ ನಿರಾಳತೆ ಅನುಭವವಾದರೂ ಗೇರ್ ಬಾಕ್ಸ್ ಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೊಂದು ವೇಳೆ ಗೇರ್ ನಾಬ್ ಮೇಲೆ ಒತ್ತಡದಿಂದ ಕೈಯಿಟ್ಟುಕೊಂಡಿದ್ದಲ್ಲಿ ನಿಮ್ಮ ತಿಳುವಳಿಕೆಯಿಲ್ಲದೆ ಗೇರ್ ಬದಲಾವಣೆಯಾಗುವ ಸಂಭವವಿದೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಇದರಿಂದಾಗಿ ಕ್ರಮೇಣ ಗೇರ್ ಬಾಕ್ಸ್ ಗೆ ಪೆಟ್ಟಾಗುವ ಭೀತಿಯಿರುತ್ತದೆ. ಇದರಿಂದಾಗಿ ವಾಹನ ಚಾಲನೆ ವೇಳೆ '9ರಿಂದ 3' ಗಡಿಯಾರದ ಮುಳ್ಳು ಸೂಚಿಸುವಂತೆ ಚಾಲನೆ ಅಭ್ಯಸಿಸಿಕೊಳ್ಳುವುದು ಉತ್ತಮ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

02. ಎಡಗಾಲು ಕ್ಲಚ್ ನಿಂದ ದೂರವಿರಲಿ

ಗೇರ್ ಬಳಕೆ ಮಾಡುವಾಗ ಮಾತ್ರ ಕ್ಲಚ್ ಅವಶ್ಯಕತೆಯಿದೆ ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ವಾಹನ ಚಾಲಕರು ಕ್ಲಚ್ ಪೆಡಲ್ ಮೇಲೆ ಕಾಲಿಟ್ಟುಕೊಂಡೇ ವಾಹನ ಚಾಲನೆ ಮಾಡುತ್ತಾರೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಹೀಗೆ ಮಾಡುವುದು ಮತ್ತೊಂದು ಅನಾಹುತಕ್ಕೆ ಕಾರಣವಾಗಬಹುದಾಗಿದ್ದು, ಯಾವತ್ತೂ ಇಂತಹ ಕೆಟ್ಟ ಅಭ್ಯಾಸಕ್ಕೆ ಮುಂದಾಗಬಾರದು. ಇದರಿಂದ ಕ್ಲಚ್ ಪೆಡಲ್ ಗೆ ಪೆಟ್ಟಾಗುವ ಭೀತಿಯಿದ್ದು, ಇದನ್ನು ತಪ್ಪಿಸಲು ಡೆಡ್ ಪೆಡಲ್ ಮೇಲೆ ಕಾಲಿರಿಸಬಹುದಾಗಿದೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

03. ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ

ಎತ್ತರದ ಪ್ರದೇಶಗಳಲ್ಲಿ ಕಾರು ಮೇಲ್ಮುಖವಾಗಿ ಪದೇ ಪದೇ ನಿಂತು ನಿಂತು ಸಂಚರಿಸುವಾಗ ವಾಹನ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಚಾಲಕರು ಕ್ಲಚ್ ಪೆಡಲನ್ನು ಅರ್ಧದಷ್ಟು ತುಳಿಯುತ್ತಾರೆ. ಇದೇ ಸಂದರ್ಭದಲ್ಲಿ ಗಾಡಿ ಮುಂದಕ್ಕೆ ಚಲಿಸುವುದಕ್ಕಾಗಿ ಆಕ್ಸಿಲೇಟರ್ ಕೊಡುವ ಪ್ರಯತ್ನ ಮಾಡುತ್ತಾರೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಹೀಗೆ ಮಾಡಿದ್ದಲ್ಲಿ ಕ್ಲಚ್ ಪ್ಲೇಟ್‌ಗೆ ಹಾನಿಯುಂಟಾಗುವ ಸಂಭವವಿದೆ. ಇದರ ಬದಲು ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ ಮಾಡುವುದು ಉಚಿತ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

04. ಗೇರ್ ಬಳಕೆ

ಇಳಿಜಾರಿನಲ್ಲಿ ಸಂಚರಿಸುವಾಗ ಪೆಟ್ರೋಲ್ ಉಳಿತಾಯಕ್ಕಾಗಿ ವಾಹನ ನ್ಯೂಟ್ರಲ್ ನಲ್ಲಿಡುವುದು ಉತ್ತಮ ಎಂಬ ಭಾವನೆಯಿದೆ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಆದರೆ ಇಂತಹ ಪ್ರವೃತ್ತಿ ತಪ್ಪಾಗಿದ್ದು, ಕೆಳಮಟ್ಟದ ಗೇರ್ ನಲ್ಲಿ ಇಳಿಮುಖವಾಗಿ ಸಂಚರಿಸುವುದು ಹೆಚ್ಚು ಸೂಕ್ತ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

05. ಆರ್‌ಪಿಎಂ ಬಳಕೆ

ಇದು ಸ್ವಲ್ಪ ತಾಂತ್ರಿಕ ವಿಷಯವಾಗಿದ್ದು, ಮ್ಯಾನುವಲ್ ಬುಕ್ ನಲ್ಲಿ ಕೊಟ್ಟಿರುವಂತೆಯೇ ಆರ್ ಪಿಎಂ ಬಳಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ.

ಮ್ಯಾನುವಲ್ ಕಾರು ಓಡಿಸುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ..!!

ಇದರಿಂದಾಗಿ ಹೆಚ್ಚು ಇಂಧನ ಕ್ಷಮತೆ ಪಡೆಯಲು ನೆರವಾಗಲಿದೆ. ಅಲ್ಲದೆ ಎಂಜಿನ್ ಹೆಚ್ಚು ಬಾಳಿಕೆ ಬರಲಿದೆ.

Most Read Articles

Kannada
Read more on ಟಿಪ್ಸ್ tips
English summary
Read in Kannada about Manual Gearbox Car Driving Tips.
Story first published: Monday, May 22, 2017, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X