ಡೊನಾಲ್ಡ್ ಟ್ರಂಪ್ ಅಂದ್ರೆ ಸುಮ್ನೇನಾ..? ಇನ್ನು ಅವರು ಭದ್ರತಾ ಕಾರು ಹೇಗಿರಬೇಡಾ..?

Written By:

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕ್ಯಾಡಿಲಾಕ್ ಲಿಮೊಸಿನ್ ವಾಹನವನ್ನು ಸಿದ್ಧಪಡಿಸಲಾಗಿದ್ದು, ಅತಿ ಹೆಚ್ಚು ಸುರಕ್ಷೆ ನೀಡುವ ಎಲ್ಲಾ ಅಂಶಗಳು ಈ ವಾಹನದಲ್ಲಿ ಇರಿಸಲಾಗಿದೆ.

ಈ ಹಿಂದೆ ಇದ್ದ ಅಧ್ಯಕ್ಷರಾದ ಬರಾಕ್ ಒಬಾಮ ಅವರು ಉಪಯೋಗಿಸುತ್ತಿದ್ದ ಬಿಸ್ಟ್ ಕಾರನ್ನು ಈಗಿನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಆದ್ರೆ ಹೆಚ್ಚಿನ ಭದ್ರತಾ ದೃಷ್ಠಿಯಿಂದ ಲಿಮೋ ಈಗ ಡೊನಾಲ್ಡ್ ಟ್ರಂಪ್ ಅವರ ಸರ್ಪಗಾವಲಿಗೆ ನಿಲ್ಲಲಿದೆ.

ಈಗಾಗಲೇ ನೂತನ ಲಿಮೊಸಿನ್ ಕಾರಿನ ನಿರ್ಮಾಣವು ಭಾರಿ ಜೋರಾಗಿ ನಡೆಯುತ್ತಿದೆ, ಸದ್ಯದಲ್ಲಿಯೇ ಡೊನಾಲ್ಡ್ ಟ್ರಂಪ್ ಈಗ ಉಪಯೋಗಿಸುತ್ತಿರುವ ಹಳೆ ವಾಹನದ ಬದಲು ಹೊಚ್ಚ ಹೊಸ ಕಾರನ್ನು ಏರಲು ಸಿದ್ಧವಾಗಲಿದ್ದಾರೆ.

ಅಮೆರಿಕ ಅಧ್ಯಕ್ಷರ ಲಿಮೊ ಕಾರು ಟೆಸ್ಟಿಂಗ್ ಪ್ರಕ್ರಿಯೆ ಹಂತಕ್ಕೆ ಬಂದಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ಅಧ್ಯಕ್ಷರ ಸುರಕ್ಷತಾ ಇಲಾಖೆಗೆ ಹಸ್ತಾಂತರ ಒಂದೇ ಬಾಕಿ ಇದೆ ಎನ್ನಲಾಗಿದೆ.

ಇನ್ನು ಹೊಸ ಕಾರಿನ ವಿಶೇಷತೆಯೆಂದರೇ ಟೈರ್ ಬ್ಲಾಸ್ಟ್ ಆದರೂ ನಿರ್ದಿಷ್ಟ ದೂರದವರೆಗೆ ಅತ್ಯುತ್ತಮ ವೇಗದಲ್ಲಿ ಚಲಿಸಬಲ್ಲ ಶಕ್ತಿ ಹೊಂದಿದೆ.

ಹೊಸ ಕಾರು ಸ್ಪೋರ್ಟ್ ಲುಕ್ ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಬಿ-ಪಿಲ್ಲರ್ ಮತ್ತು ಸಿ-ಪಿಲ್ಲರ್‌ಗಳ ಮಧ್ಯೆಯಲ್ಲಿ ಕ್ಯಾಡಿಲಾಕ್ ಕಾರ್ಪೊರೇಟ್ ಗ್ರಿಲ್ ಇರಿಸಲಾಗಿದೆ. ಜೊತೆಗೆ ಗೀರು ಮೂಡದಂತೆ ಕಾಣುವ ರಿಯರ್ ಕಿಟಕಿಗಳನ್ನು ಇರಿಸಲಾಗಿದೆ.

ಈಗಿರುವ ಲಿಮೊ ಕಾರಿನಂತೆ ನೂತನ ಕ್ಯಾಡಿಲಾಕ್ ಕಾರನ್ನು ಜನರಲ್ ಮೋಟಾರ್ಸ್ ಸಂಸ್ಥೆಯು ಸಿದ್ಪಡಿಸಿದೆ. ಇದು ಕೂಡಾ ಹೆವಿ ಡ್ಯೂಟಿ ಟ್ರಕ್ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ಬುಲೆಟ್ ಫ್ರೂಪ್, ಬಾಂಬ್ ಫ್ರೂಪ್ ಜೊತೆಗೆ ಗರಿಷ್ಠ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಸುರಕ್ಷಾ ದೃಷ್ಟಿಯಿಂದ ಇನ್ನಿತರ ಅತ್ಯಾಧುನಿಕ ಸುರಕ್ಷಾ ವೈಶಿಷ್ಟ್ಯಗಳ ಬಗೆಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ಜಾಗತಿಕಮಟ್ಟದಲ್ಲಿ ಭಯೋತ್ಪಾದನೆ ಎಂಬುದು ಹೆಮ್ಮರವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಹೆಚ್ಚಿನ ಮಾಹಿತಿಯನ್ನು ಬಿಡುಗಡೆಗೊಳಿಸದೆ ಇರುವುದೇ ಸೂಕ್ತಕ್ರಮವಾಗಿದೆ.

ಭದ್ರತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಯಾರು ಮಾಡಿರುವ ಬಿಎಂಡಬ್ಲ್ಯೂ ೭ ಸರಣಿಯ ಕಾರಿನ ಚಿತ್ರಗಳನ್ನು ವೀಕ್ಷಿಸಿ.

Story first published: Saturday, February 25, 2017, 14:45 [IST]
English summary
Donald Trump's new beastly new Cadillac limousine is almost ready and will soon be protecting the American President.
Please Wait while comments are loading...

Latest Photos