ಬಹೂಪಯೋಗಿ ಇಚರ್ ಪೋಲಾರಿಸ್ 'ಮಲ್ಟಿಕ್ಸ್‌' ಬಿಡುಗಡೆ

Written By:

ಅಮೆರಿಕದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಪೋಲಾರಿಸ್‌ ಇಂಡಸ್ಟ್ರೀಸ್‌ ಮತ್ತು ಐಶರ್‌ ಮೋಟ್ ಜಂಟಿಯಾಗಿ ಹೊಸ ಲಘು ವಾಣಿಜ್ಯ ವಾಹನ ಮಲ್ಟಿಕ್ಸ್ ಬಿಡುಗಡೆಗೊಳಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಲಘು ವಾಣಿಜ್ಯ ವಾಹನಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಪೋಲಾರಿಸ್‌ ಇಂಡಸ್ಟ್ರೀಸ್‌ ಸುಧಾರಿತ ತಂತ್ರಜ್ಞಾನ ಹೊಂದಿರುವ ಮಲ್ಟಿಕ್ಸ್ ಪರಿಚಯಿಸಿದೆ.

ಬೆಲೆ (ದೆಹಲಿ ಎಕ್ಸ್‌ಶೋರಂ ಪ್ರಕಾರ)
ಮಲ್ಟಿಕ್ಸ್ - ರೂ.3,19,000

ಸಣ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆಗಳ ಉದ್ದೇಶಕ್ಕಾಗಿ ಪೋಲಾರಿಸ್ ಮಲ್ಟಿಕ್ಸ್ ವಾಹನಗಳು ಅಭಿವೃದ್ಧಿಗೊಂಡಿದ್ದು, 652 ಸಿಸಿ ಸಿಂಗಲ್ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಪೋಲಾರಿಸ್ ಮಲ್ಟಿಕ್ಸ್, 13 ಬಿಎಚ್‌ಪಿ ಮತ್ತು 37ಎಂಎನ್ ಟಾರ್ಕ್ ಉತ್ಪಾದಿಸುವ ಮೂಲಕ ಉತ್ತಮ ಮೈಲೇಜ್ ನೀಡುತ್ತವೆ.

ಮೈಲೇಜ್

29 ಕಿಮಿ(ಪ್ರತಿ ಲೀಟರ್)

ಬಿಎಸ್ 4 ಮತ್ತು ಬಿಎಸ್ 3 ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, 450 ಕೆ.ಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

ಇನ್ನು ಹೊಸ ಮಾದರಿಯ ಇಚರ್ ಪೋಲಾರಿಸ್ 'ಮಲ್ಟಿಕ್ಸ್‌' ವಾಹನಗಳು ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧಡೆ ಖರೀದಿಗೆ ಲಭ್ಯವಿರಲಿವೆ.

ಮಲ್ಟಿಕ್ಸ್ ಬಗ್ಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮಧ್ಯಮ ವರ್ಗದ ಜನತೆಗೆ ಇದೊಂದು ಉತ್ತಮ ವಾಹನವಾಗಿದ್ದು, ಕಡಿಮೆ ಬಂಡವಾಳದೊಂದಿಗೆ ಆರಂಭಗೊಳ್ಳುವ ಸಣ್ಣ ಪ್ರಮಾಣದ ಉದ್ಯಮಗಳಿಗೆ ಇದು ಬಹೂಪಯೋಗಿ ವಾಹನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

English summary
Read in Kannada about Eicher Polaris Multix Launched In India.
Please Wait while comments are loading...

Latest Photos