ನೈಸರ್ಗಿಕ ಉತ್ಪನ್ನಗಳಿಂದಲೇ ಸಿದ್ಧಗೊಂಡ ಫೋರ್ಡ್ ವಿನೂತನ ಕಾರು

ಬಿದಿರಿನಿಂದ ಕೇವಲ ಪೀಠೋಪಕರಣಗಳನ್ನು ಅಷ್ಟೇ ಅಲ್ಲ ಕಾರುಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಫೋರ್ಡ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ವಿಶೇಷ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Written By:

ಆಟೋ ಮೊಬೈಲ್ ಉದ್ಯಮದಲ್ಲಿ ಇದೀಗ ದಿನಕ್ಕೊಂದು ಬಗೆಯ ಕಾರುಗಳು ಉತ್ಪಾದನೆಯಾಗುತ್ತಿವೆ. ಆದ್ರೆ ಫೋರ್ಡ್ ಸಂಸ್ಥೆ ನಿರ್ಮಾಣ ಮಾಡಿರುವ ಈ ನೈಸರ್ಗಿಕ ಕಾರು ಹತ್ತಾರು ವಿಶೇಷತೆಗಳಿಂದ ಕೂಡಿದ್ದು, ಸಂಪೂರ್ಣ ಬಿದಿರಿನಿಂದಲೇ ನಿರ್ಮಾಣಗೊಂಡಿದೆ.

ಪರಿಸರ ಉಳಿಸಿ ಜಾಗೃತಿ ಯೋಜನೆ ಅಡಿ ಬಿದಿರಿನ ಕಾರು ನಿರ್ಮಾಣ ಮಾಡಿರುವ ಫೋರ್ಡ್ ಸಂಸ್ಥೆಯು, ಗ್ರಾಹಕರಿಗೆ ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

ಎಂಜಿನ್ ಹೊರತುಪಡಿಸಿ ಭಾಗಶಃ ಬಿದಿರಿನಿಂದಲೇ ನಿರ್ಮಾಣಗೊಂಡಿರುವ ಫೋರ್ಡ್ ವಿನೂತನ ಕಾರು, ವಿಶ್ವದರ್ಜೆಯ ಗುಣಮಟ್ಟ ಹೊಂದಿದೆ.

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಈ ವಿಶೇಷ ಕಾರನ್ನು ನಿರ್ಮಾಣ ಮಾಡಿರುವ ಫೋರ್ಡ್ ಸಂಸ್ಥೆಯು, ಹೊಸ ಕಾರಿನ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

ವಿಶೇಷ ಕಾರಿನ ಬಗ್ಗೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿರುವ ಫೋರ್ಡ್, ಮುಂಬರುವ ದಿನಗಳಲ್ಲಿ ಪ್ರಮುಖ ಮಾರುಕಟ್ಟೆಗಳಿಗೆ ಈ ಕಾರನ್ನು ಪರಿಚಯ ಮಾಡುವ ತವಕದಲ್ಲಿದೆ.

ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಈ ಕಾರಿನ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮವಹಿಸಲಾಗಿದ್ದು, ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾವಿದರು ಇದರ ಹಿಂದೆ ಕಾರ್ಯನಿರ್ವಹಿಸಿದ್ದಾರೆ.

ಒಟ್ಟಿನಲ್ಲಿ ಪರಿಸರ ಉಳಿಸುವ ಯೋಜನೆ ಅಡಿ ಸಿದ್ಧಗೊಂಡಿರುವ ವಿನೂತನ ಕಾರಿನ ವಿನ್ಯಾಸ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಮುಬಂರುವ ದಿನಗಳಲ್ಲಿ ಇದು ಜನಪ್ರಿಯತೆ ಪಡೆಯುವ ನೀರಿಕ್ಷೆಯಲ್ಲಿದೆ.

ಫೋರ್ಡ್ ಸಂಸ್ಥೆ ನಿರ್ಮಾಣ ಮಾಡಿರುವ ವಿಶೇಷ ಕಾರಿನ ಕುರಿತಾದ ವೀಡಿಯೋ ಇಲ್ಲಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಫೋರ್ಡ್ ford
English summary
Ford is looking at making cars with bamboo and claims that it is not only one of the strongest natural materials.
Please Wait while comments are loading...

Latest Photos

LIKE US ON FACEBOOK