ಜಿಎಸ್‌ಟಿ ಎಫೆಕ್ಟ್- ಫಾರ್ಚೂನರ್ ಕಾರ್ ಬೆಲೆಗಳಲ್ಲಿ ಭಾರೀ ಇಳಿಕೆ..!!

Written By:

ಜಿಎಸ್‌ಟಿ ಜಾರಿಯಾಗುತ್ತಿರುವುದು ಭಾರತೀಯ ಆಟೋ ಉದ್ಯಮದ ಮೇಲೆ ವರವಾಗಿ ಪರಿಣಮಿಸುತ್ತಿದ್ದು, ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾ ತನ್ನ ಪ್ರಮುಖ ಕಾರು ಮಾದರಿ ಫಾರ್ಚೂನರ್ ಮೇಲೆ 1.20 ಲಕ್ಷ ರೂಪಾಯಿ ರಿಯಾಯ್ತಿ ಘೋಷಣೆ ಮಾಡಿದೆ.

ದೇಶಿಯವಾಗಿ ಉತ್ಪಾದನೆಯಾಗುತ್ತಿರುವ ಫಾರ್ಚೂನರ್ ಮೇಲೆ ಹೊಸ ರಿಯಾಯ್ತಿ ದರಗಳು ಅನ್ವಯವಾಗಲಿದ್ದು, ಜಿಎಸ್‌ಟಿ ಜಾರಿಗೂ ಮುನ್ನವೇ ಟೊಯೊಟಾ ಮಹತ್ವದ ನಿರ್ಣಯ ಕೈಗೊಂಡಿದೆ.

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಘೋಷಣೆ ಹಿನ್ನೆಲೆಯಲ್ಲಿ ದೇಶಿಯ ಉತ್ಪಾದನೆಯಲ್ಲಿ ಟೊಯೊಟಾ ಉತ್ಪಾದನೆ ಹೆಚ್ಚಿದ್ದು, ಬೆಲೆಗಳನ್ನು ಕಡಿತ ಮಾಡಲು ಇದೇ ಪ್ರಮುಖ ಕಾರಣವಾಗಿದೆ.

ಈಗಾಗಲೇ ದೇಶಿಯಾಗಿ ಉತ್ಪಾದನೆಯಾಗುವ ಕಾರು ಮಾದರಿಗಳ ಮೇಲೆ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳು ಬೆಲೆ ಕಡಿಗೊಳಿಸಿದ್ದು, ಟೊಯೊಟಾ ಕೂಡಾ ಗ್ರಾಹಕರ ಪರ ಒಲವು ತೋರಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ಟೊಯೊಟಾ ಫಾರ್ಚೂನರ್ ಸದ್ಯ ಭಾರತೀಯ ಮಾರುಕಟ್ಟೆ ತನ್ನದೇ ಆದ ಬೇಡಿಕೆ ಹೊಂದಿದ್ದು, ಪ್ರಿಮಿಯಂ ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿಯಲ್ಲಿದೆ.

ಡಿಸೇಲ್ ಮಾದರಿ 2.8-ಲೀಟರ್ ಎಂಜಿನ್ (177ಬಿಎಚ್‌ಪಿ,450 ಎಂಎನ್‌ ಟಾರ್ಕ್) ಹಾಗೂ ಪೆಟ್ರೋಲ್ ಮಾದರಿ 2.7-ಲೀಟರ್ ಎಂಜಿನ್(166 ಬಿಎಚ್‌ಪಿ ,250ಎಂಎನ್ ಟಾರ್ಕ್) ಉತ್ಪಾದನಾ ಶಕ್ತಿ ಹೊಂದಿದೆ.

ಇದರ ಜೊತೆ ಡಿಸೇಲ್ ಫಾರ್ಚೂನರ್ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದರೇ ಪೆಟ್ರೋಲ್ ಆವೃತ್ತಿಯಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಒಟ್ಟಿನಲ್ಲಿ ಜಿಎಸ್‌ಟಿ ಜಾರಿ ಬರುತ್ತಿರುವುದು ಕಾರು ಖರೀದಿಸುವ ಗ್ರಾಹಕರಿಗೆ ಸಹಕಾರಿಯಾಗಲಿದ್ದು, ಫಾರ್ಚೂನರ್ ಖರೀದಿ ಮೇಲೆ 1.20ಲಕ್ಷ ರಿಯಾಯ್ತಿ ದೊರೆಯಲಿದೆ.

Read more on ಟೊಯೊಟಾ toyota
English summary
Read in Kannada about The Toyota Fortuner could see a reduction in cost once GST comes into effect.
Please Wait while comments are loading...

Latest Photos