ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಹರಿಯಾಣದ ಗುರುಗ್ರಾಮ್‌ನಿಂದ ರಾಜಸ್ತಾನದ ಜೈಪುರ್ ತನಕ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ನಿರ್ಮಾಣ ಕಾರ್ಯ ಶುರುವಾಗಲಿದೆ.

By Praveen

ಕೇಂದ್ರ ಸರ್ಕಾರ ರೂಪಿಸಿರುವ ವಿನೂತನ ಯೋಜನೆಯಿಂದ ಇನ್ಮುಂದೆ ಜೈಪುರ್ ಟು ಗುರುಗ್ರಾಮ್ ನಡುವಿನ ಪ್ರಯಾಣದ ಅವಧಿ ತಗ್ಗಲಿದೆ. ಇದಕ್ಕೆ ಕಾರಣ ದುಬಾರಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಸದ್ಯದಲ್ಲೇ ನಿರ್ಮಾಣ ಕಾರ್ಯ ಶುರುವಾಗಲಿದೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಸದ್ಯದಲ್ಲೇ ಬೃಹತ್ ಯೋಜನೆಗೆ ಚಾಲನೆ ಸಿಗಲಿದೆ ಎಂದಿದ್ದಾರೆ. ಇದರಿಂದ ಸದ್ಯದ ಟ್ರಾಫಿಕ್ ಸಮಸ್ಯೆ ತಗ್ಗಲಿದ್ದು, ವಾಣಿಜ್ಯ ವಹಿವಾಟು ಹೆಚ್ಚಿಸಲು ಅನುಕೂಲವಾಗಲಿದೆ ಎಂದಿದ್ದಾರೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಗುರುಗ್ರಾಮ್‌ ಟು ಜೈಪುರ ನಡುವೆ 260ಕಿಮಿ ಅಂತರವಿದ್ದು, ಸದ್ಯ ಈ ದೂರವನ್ನು ಕ್ರಮಿಸಲು ಸುಮಾರು 3 ಗಂಟೆಗಳ ಅವಶ್ಯಕತೆಯಿದೆ. ಹೀಗಾಗಿ ಹೊಸ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ, ಪ್ರಯಾಣದ ಅವಧಿ ತಗ್ಗಿಸಲು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಅನುಮೊದನೆ ನೀಡಿದೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಆದ್ರೆ ಕೇಂದ್ರ ಸರ್ಕಾರದ ಹೇಳಿಕೆಗಿಂತ ವಾಸ್ತವಾಂಶವೇ ಬೇರೆಯಿದೆ. ಯಾಕೇಂದ್ರೆ ಸದ್ಯದ ರಸ್ತೆ ನಿಯಮಗಳ ಪ್ರಕಾರ ಎಕ್ಸ್‌ಪ್ರೆಸ್ ವೇ ಗಳಲ್ಲಿ ಪ್ರತಿ ಗಂಟೆಗೆ 100ಕಿಮಿ ವೇಗದ ಪ್ರಯಾಣಕ್ಕೆ ಅವಕಾಶವಿದೆ. ಹಾಗಿಯೇ ಹೆದ್ದಾರಿಗಳಲ್ಲಿ ಪ್ರತಿಗಂಟೆಗೆ 90ಕಿಮಿ ವೇಗದ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಇದರಿಂದಾಗಿ 90 ನಿಮಿಷದ ಪ್ರಯಾಣ ಅವಧಿ ಮಾಡಬೇಕಾದ್ರೆ ಮತ್ತಷ್ಟು ಹೊಸ ರಸ್ತೆ ನಿಯಮಗಳನ್ನು ಜಾರಿ ತರುವ ಅವಶ್ಯಕತೆಯಿದೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಈ ಕುರಿತು ಮಾತನಾಡಿರುವ ಸಚಿವ ಗಡ್ಕರಿ "ಆದಷ್ಟು ಮಟ್ಟಿಗೆ ಹೆಚ್ಚಿನ ವೇಗಕ್ಕೆ ಅನುವು ಮಾಡಿಕೊಡಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಸೂಪರ್ ಎಕ್ಸ್‌ಪ್ರೆಸ್ ವೇ ಗಳಲ್ಲಿ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಿದ್ದೇವೆ" ಎಂದಿದ್ದಾರೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಒಂದು ವೇಳೆ ಕೇಂದ್ರದ ಎಕ್ಸ್‌ಪ್ರೆಸ್ ವೇ ಯೋಜನೆ ಜೈಪುರ್ ಟು ಗುರುಗ್ರಾಮ್ ನಡುವೆ ಜಾರಿಗೊಂಡಲ್ಲಿ ನಿಗದಿತ ಅವಧಿಯನ್ನು ತಲುಪಲು ಕನಿಷ್ಠ 120 ರಿಂದ 130ಕಿಮಿ ವೇಗದ ಪ್ರಯಾಣಕ್ಕೆ ಅನುವು ಮಾಡಕೊಡಬೇಕಿದೆ. ಇದಕ್ಕಾಗಿ ಕೆಲವು ನಿಯಮಗಳು ತಿದ್ದುಪಡಿ ತರಬೇಕಿದ್ದು, ಮಹತ್ವದ ಚರ್ಚೆ ಕೂಡಾ ನಡೆದಿದೆ ಎನ್ನಲಾಗಿದೆ.

ಜೈಪುರ್ ಟು ಗುರುಗ್ರಾಮ್ ನಡುವೆ ಎಕ್ಸ್‌ಪ್ರೆಸ್ ವೇ- ಬೃಹತ್ ಯೋಜನೆಗೆ ಕೇಂದ್ರದಿಂದ ಗ್ರೀನ್‌ಸಿಗ್ನಲ್

ಇನ್ನು 260 ಕಿಮಿ ಉದ್ದದ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಬಜೆಟ್ ಸಿದ್ಧಗೊಂಡಿದ್ದು, ಎಕ್ಸ್‌ಪ್ರೆಸ್ ವೇ ಪ್ರಯಾಣಕ್ಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದರೊಂದಿಗೆ ವಾಣಿಜ್ಯ ವಹಿವಾಟು ಮತ್ತು ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ.

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಹೋಂಡಾ ಸಿಟಿ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
Highway Minister, Nitin Gadkari stated that Government has proposed a new super expressway on which the travelling time from Gurugram to Jaipur will be just 90 minutes.
Story first published: Monday, March 13, 2017, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X