ಅಬ್ಬಾ!! ಕೇವಲ 23 ದಿನಗಳಲ್ಲಿ 7,000 ಹೋಂಡಾ ಡಬ್ಲ್ಯೂಆರ್-ವಿ ಕಾರುಗಳು ಬುಕ್ ಆದ್ವು

Written By:

ಪ್ರಪ್ರಥಮ ಬಾರಿಗೆ ಕೇವಲ 23 ದಿನಗಳಲ್ಲಿ 7,000 ಹೊಸ ಡಬ್ಲ್ಯೂಆರ್-ವಿ ಕಾರುಗಳು ಬುಕ್ ಆಗುವ ಮೂಲಕ ಹೊಸ ಮೈಲಿಗಳನ್ನು ಈ ಕಾರು ನಿರ್ಮಾಸಿದೆ. ಸದ್ಯ ಹೋಂಡಾ ಕಂಪನಿ ಈಗಾಗಲೇ 3,833 ಕಾರುಗಳನ್ನು ಗ್ರಾಹಕರಿಗೆ ಅಸ್ತಾಂತರಿಸಿದೆ.

ಇತ್ತೀಚೆಗೆ ಹೋಂಡಾ ಕಾರ್ ಇಂಡಿಯಾ ಕಂಪನಿಯು ತನ್ನ ಅತ್ಯುತ್ತಮ ಕ್ರಾಸ್ ಓವರ್ ಕಾರನ್ನು ಬಿಡುಗಡೆಗೊಳಿಸಿತ್ತು. ಕಡಿಮೆ ಅವಧಿಯಲ್ಲಿ 7000 ಗ್ರಾಹಕರನ್ನು ಗಳಿಸಿಕೊಂಡ ಮೊದಲ ಕಾರು ಎನ್ನಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಂಪನಿ ನೀಡಿರುವ ವರದಿ ಪ್ರಕಾರ ಈ ಮೈಲಿಗಲ್ಲನ್ನು ಮುಟ್ಟಲು ಈ ಕಾರು ಕೇವಲ 23 ದಿನಗಳನ್ನು ತೆಗೆದುಕೊಂಡಿದ್ದು, ಮೊದಲ ತಿಂಗಳಿನಲ್ಲಿಯೇ ಈ ಮಟ್ಟದ ಯಶಸ್ಸು ಎಲ್ಲರ ಉಬ್ಬೇರಿಸುವಂತೆ ಮಾಡಿದೆ.

ಹೋಂಡಾ ಕಂಪನಿಯ ಮತ್ತೊಂದು ಯಶಸ್ವಿ ಹೋಂಡಾ ಜಾಝ್ ಕಾರಿನ ಹೋಲಿಕೆ ಇರುವ ಈ ಹೋಂಡಾ ಡಬ್ಲ್ಯೂಆರ್-ವಿ ಕಾರು ಜಾಝ್ ವಾಹನಕ್ಕಿಂತ ಹೆಚ್ಚಿನ ಮಟ್ಟದ ಖ್ಯಾತಿ ಪಡೆದುಕೊಂಡಿದೆ.

ಈ ಮೊದಲೇ ಕಾರು ತಯಾರಕ ಕಂಪನಿ ಹೋಂಡಾ 'ಮೊಬಿಲಿಯೊ' ಮತ್ತು 'ಬಿಆರ್-ವಿ' ಕಾರನ್ನು ಬಿಡುಗಡೆಗೊಳಿಸಿತ್ತಾದರೂ, ಹೆಚ್ಚಿನ ಸಿಹಿ ಸಿಕ್ಕಿರುವುದು ಈ ಡಬ್ಲ್ಯೂಆರ್-ವಿ ಕಾರಿನಿಂದಲೇ ಎನ್ನುವುದನ್ನು ಮರೆಯುವಂತಿಲ್ಲ.

ಹೊಸ ಮಾದರಿಯ ಹೋಂಡಾ ಸಿಟಿ ಕಾರಿಗೆ ದೊರೆತ ಅತ್ಯದ್ಭುತ ಪ್ರತಿಕ್ರಿಯೆ ನಂತರ ಬಿಡುಗಡೆಗೊಳಿಸಿದ ಕಾರು ಇದಾಗಿದೆ.

ಜಾಝ್ ಕಾರಿನಲ್ಲಿರುವಂತೆ ಸ್ಟ್ಯಾಂಡರ್ಡ್ 1.2-ಲೀಟರ್ ಐ-ವಿಟಿಈಸಿ ಪೆಟ್ರೋಲ್ ಎಂಜಿನ್ ಈ ಕಾರಿನಲ್ಲಿಯೂ ಅಳವಡಿಸಲಾಗಿದ್ದು, 110ಎನ್ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸಲಿದೆ.

ಹೊಸ ಧಾಖಲೆ ಬರೆದಿರುವ ಈ ಹೋಂಡಾ ಡಬ್ಲ್ಯೂಆರ್-ವಿ ಪೆಟ್ರೋಲ್ ಎಂಜಿನ್ ಕಾರಿನಲ್ಲಿ 5 ಸ್ಪೀಡ್ ಮಾನ್ಯುಯಲ್ ಸಿವಿಟಿ (Continuously Variable Transmission) ಹೊಂದಿರುವ ಗೇರ್‌ಬಾಕ್ಸ್ ಇರಿಸಲಾಗಿದೆ.

ಹಾಗು 1.5-ಲೀಟರ್ ಐ-ಡಿಟಿಈಸಿ ಎಂಜಿನ್ ಹೊಂದಿರುವ ಡಬ್ಲ್ಯೂಆರ್-ವಿ ಡೀಸೆಲ್ ಕಾರು, 200ಏನ್ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದ್ದು, 6 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಹೊಂದಿರಲಿದೆ.

ಕಾರಿನ ಒಳಭಾಗದಲ್ಲಿ ಆಪಲ್ ಕಾರ್-ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ಅಳವಡಿಸಲಾಗಿದೆ.

ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ ಒಳಗೊಂಡಿರುವ ಈ ಕಾರು ಸದ್ಯ ಯಶಸ್ವಿಯಾಗಿದ್ದು, ಕಂಪನಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

Read more on ಹೋಂಡಾ honda
Story first published: Monday, April 10, 2017, 11:56 [IST]
English summary
Read in Kannada about Honda WR-V has recorded over 7,000 bookings in the Country. Get more details about WR-V car bookings, sales, stock, price, mileage, specifications and more
Please Wait while comments are loading...

Latest Photos