ಹೇಗಿರಲಿದೆ ಗೊತ್ತಾ..? ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರಿನ ವಿಶೇಷತೆ..!!

Written By:

ಬಿಡುಗಡೆಗೆ ಸಿದ್ಧಗೊಂಡಿರುವ ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರು ಹತ್ತಾರು ವಿಶೇಷತೆಗಳಿಗೆ ಕಾರಣವಾಗಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಯಾವಾಗ ಬಿಡುಗಡೆ?
ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಮಾರ್ಚ್ 16ರಂದು ಬಿಡುಗಡೆಯಾಗಿದ್ದು, ಈ ಬಗ್ಗೆ ಹೋಂಡಾ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಬುಕ್ಕಿಂಗ್ ಆರಂಭಿಸಲಾಗಿದ್ದು, 21 ಸಾವಿರ ರೂಪಾಯಿ ಮುಂಗಡ ಪಾವತಿಸಿ ನಿಮ್ಮ ಇಷ್ಟದ ಕಾರುನ್ನು ಇಂದೇ ಕಾಯ್ದಿಸಿಕೊಳ್ಳಬಹುದಾಗಿದೆ.

ಡಬ್ಲ್ಯುಆರ್-ವಿ ವಿಶೇಷತೆ

ಶಾರ್ಪ್ ಡಿಸೈನ್ ಹೊಂದಿರುವ ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರು, ಎತ್ತರವಾದ ಬ್ಯಾನೆಟ್ ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ ಹೋಂಡಾ ಝಾ ಕಾರಿನ ವಿಶೇಷತೆಗಳನ್ನು ಈ ಕಾರಿನ ವಿನ್ಯಾಸದಲ್ಲಿ ಅಳವಡಿಸಲಾಗಿದೆ.

ಡಬ್ಲ್ಯುಆರ್-ವಿ ನೋಟ
ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರು ಸಂಪೂರ್ಣ ವಿಶೇಷತೆಗಳಿಂದ ಕೂಡಿದೆ. ಕಾರಿನ ಉದ್ದಳತೆ 3999 ಎಂಎಂ ಇದ್ದು, 1734 ಎಂಎಂ ಅಗಲವಾಗಿದೆ. ಜೊತೆಗೆ 1601 ಎಂಎಂ ನಷ್ಚು ಎತ್ತರ ಹೊಂದಿದೆ. ಹೀಗಾಗಿ ಭಾರತೀಯ ರಸ್ತೆಗಳಲ್ಲಿ ಇದು ಜನಪ್ರಿಯತೆ ಪಡೆಯುವ ನೀರಿಕ್ಷೆಯಿದೆ.

ಡಬ್ಲ್ಯುಆರ್-ವಿ ಎಂಜಿನ್ ಸಾಮರ್ಥ್ಯ
ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎರಡು ಮಾದರಿಗಳಲ್ಲೂ ಲಭ್ಯವಿವೆ. 1.5- ಡಿಸೇಲ್ ಎಂಜಿನ್ 99ಬಿಎಚ್‌ಪಿ ಮತ್ತು 200ಎಂಎನ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನೂ 1.2-ಪೆಟ್ರೋಲ್ ಎಂಜಿನ್ 89 ಬಿಎಚ್‌ಪಿ ಮತ್ತು 110 ಎಂಎನ್ ಟಾರ್ಕ್ ಉತ್ಪಾದಿಸುತ್ತದೆ.

ಡಿಸೇಲ್ ಮಾದರಿಯ ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಆವೃತ್ತಿಯು 5-ಸ್ಪಿಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಜೊತೆಗೆ ಪೆಟ್ರೋಲ್ ಮಾದರಿಯಲ್ಲಿ 6-ಸ್ಪಿಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದ್ದು, CVT ಲಭ್ಯತೆ ಬಗ್ಗೆ ಹೋಂಡಾ ಇನ್ನು ಯಾವುದೇ ಮಾಹಿತಿ ನೀಡಿಲ್ಲ.

ಡಬ್ಲ್ಯುಆರ್-ವಿ ಮೈಲೇಜ್
ಹೋಂಡಾ ಕಂಪನಿ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಮಾದರಿಯ ಡಬ್ಲ್ಯುಆರ್-ವಿ ಕಾರು ಪ್ರತಿಲೀಟರ್‌ಗೆ 17.5ಕಿ.ಮೀ ಮೈಲೆಜ್ ನೀಡಲಿದೆ. ಅಂತೆಯೇ ಡಿಸೇಲ್ ಮಾದರಿಯು ಪ್ರತಿ ಲೀಟರ್‌ಗೆ 25.5ಕಿ.ಮೀ ಮೈಲೇಜ್ ನೀಡಲಿವೆ ಎನ್ನಲಾಗಿದೆ.

ಡಬ್ಲ್ಯುಆರ್-ವಿ ವೈಶಿಷ್ಠತೆಗಳು
ಇನ್ನು ವಿನೂತನ ಕಾರಿನ ಹೊರ ಮತ್ತು ಒಳವಿನ್ಯಾಸಗಳ ಬಗ್ಗೆ ಮಾತನಾಡುವುದಾದ್ರೆ ಎಲ್‌ಇಡಿ ಡಿಆರ್‌ಎಲ್‌ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಫ್ರಂಟ್ ಬಂಪರ್ ಮೇಲೆ ಫಾಗ್ ಲ್ಯಾಂಪ್ ವ್ಯವಸ್ಥೆಯಿದೆ. ಜೊತೆಗೆ ಡೈಮಂಡ್ ಕಟ್ ಅಲಾಯ್ ವೀಲ್ಹ್‌ಗಳನ್ನು ಹೊಂದಿದೆ. ಒಳಭಾಗದಲ್ಲಿ ಸ್ಪೋರ್ಟಿ ಲುಕ್ ಹೊಂದಿದ್ದು, ಪ್ರಸುತ್ತ ದುಬಾರಿ ಕಾರುಗಳಲ್ಲಿ ಎಲ್ಲಾ ವ್ಯವಸ್ಥೆ ಇದರಲ್ಲಿದೆ. ಹೀಗಾಗಿ ಸುರಕ್ಷೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು
ದೆಹಲಿ ಎಕ್ಸ್‌ಶೋರಂ ಪ್ರಕಾರ ವಿನೂತ ಡಬ್ಲ್ಯುಆರ್-ವಿ ಮಾದರಿಯ ಬೆಲೆಯು 6.8 ಲಕ್ಷದಿಂದ 10 ಲಕ್ಷ ರೂಪಾಯಿ ಇರಬಹುದು ಎನ್ನಲಾಗಿದೆ. ಹೀಗಾಗಿ ಮಾರುತಿ ಸುಜುಕಿ ಬ್ರೆಜಾ, ಫೋರ್ಡ್ ಇಕೋ ಸ್ಪೋರ್ಟ್ಸ್, ಹುಂಡೈ i20, ಟೊಯೊಟಾ ಇಟಿಗೋ, ಫೋಕ್ಸ್‌ವ್ಯಾಗನ್ ಮತ್ತು ಫಿಯಟ್ ಅವೆಂಚುರಾ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

2017ರ ಹೊಚ್ಚ ಹೊಸ ಹೋಂಡಾ ಸಿಟಿ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಹೋಂಡಾ honda
English summary
Honda WR-V details revealed, India launch date, price in India, specifications, features and everything you need to know about the new Honda crossover.
Please Wait while comments are loading...

Latest Photos