ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಹೋಂಡಾ WR-V ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಭಾರತ ದೇಶದ ರಾಜಧಾನಿ ದೆಹಲಿಯಲ್ಲಿ ಕೇವಲ ಐದು ದಿನಗಳ ಹಿಂದೆ ಬಿಡುಗಡೆಗೊಂಡು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲೇ ಹೋಂಡಾ ಕಂಪನಿ ಹೋಂಡಾ ಡಬ್ಲ್ಯುಆರ್-ವಿ ಕಾರನ್ನು ಬೆಂಗಳೂರಿನಲ್ಲಿಯೂ ಬಿಡುಗಡೆಗೊಳಿಸಿ ಪ್ರಕಟಣೆ ಹೊರಡ

Written By:

ಕ್ರೀಡಾ ಬಳಕೆಯ ವಾಹನದ ಅಂಶಗಳನ್ನು ಒಳಗೊಂಡಿರುವ ಹೋಂಡಾ ಡಬ್ಲ್ಯೂಆರ್-ವಿ ಕಾರು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದ್ದು, ಕಾರಿನ ಬೆಲೆ ರೂ. ರೂ. 7,90,500 ಲಕ್ಷ( ಎಕ್ಸ್ ಷೋ ರೂಂ ಬೆಂಗಳೂರು) ನಿಗದಿಪಡಿಸಲಾಗಿದೆ.

ಮೂರು ವಾರಗಳ ಹಿಂದೆ ಹೋಂಡಾ ಕಂಪನಿಯು ಈ ಕಾರನ್ನು ಗ್ರಾಹಕರಿಗೆ ಬುಕ್ ಮಾಡಲು ಅನುವು ಮಾಡಿಕೊಟ್ಟ ದಿನದಿಂದ ಇಲ್ಲಿಯವರೆಗೆ 1000ಕ್ಕೂ ಹೆಚ್ಚು ಕಾರುಗಳು ಬುಕ್ ಆಗುವ ಮೂಲಕ ಯಶಸ್ವಿ ಕಾರುಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

 

ಹೊಚ್ಚ ಹೊಸ ಹೋಂಡಾ ಡಬ್ಲ್ಯೂಆರ್-ವಿ ಕಾರು16-ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದ್ದು, ಪ್ರಸಕ್ತ ಗ್ರಾಹಕರ ಬೇಡಿಕೆಗಳಿಗೆ ಸರಿ ಹೊಂದುವಂತಹ ವಿನ್ಯಾಸ ಹೊಂದಿದೆ.

ವಿನೂತನ ಹೋಂಡಾ ಕ್ರಾಸ್ ಓವರ್ ಡಬ್ಲ್ಯೂಆರ್-ವಿ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.5-ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ.

ಹೋಂಡಾ ಕಂಪನಿಯ ಜಾಝಿ ಮತ್ತು ಸಿಟಿ ಕಾರಿಗೆ ಹೋಲಿಸಿದರೆ, ಹೋಂಡಾ ಡಬ್ಲ್ಯೂಆರ್-ವಿ ಕಾರು ಹೆಚ್ಚು ಎತ್ತರವಾಗಿದ್ದು, ಅಗಲವಾದ ಕಾರು ಎನ್ನಿಸಿಕೊಂಡಿದೆ.

ಕಾರಿನ ಒಳಭಾಗದಲ್ಲಿ, 7-ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೈ ಮತ್ತು ನೆವಿಗೆಶನ್ ಹೊಂದಿದೆ. ವೈ-ಫೈ, ಬ್ಲೂಟೂತ್ ಕನೆಕ್ಟಿವಿಟಿ, ಒಂದು HDMI ಪೋರ್ಟ್, 1.5 ಜಿಬಿ ಇಂಟರನಲ್ ಮೆಮೊರಿ, ಎರಡು USB ಸ್ಲಾಟ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಇರಿಸಲಾಗಿದೆ.

ಬೆಂಗಳೂರಿನಲ್ಲಿ ಅಮೋಘವಾಗಿ ಬಿಡುಗಡೆಗೊಂಡಿರುವ ಈ ಹೋಂಡಾ ಡಬ್ಲ್ಯೂಆರ್-ವಿ ಕಾರು, ಎಲ್‌ಇಡಿ ಡಿಆರ್‌ಎಸ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದ್ದು, ರಾತ್ರಿ ಪ್ರಯಾಣದ ಕ್ಲಿಷ್ಟತೆಯನ್ನು ಕಡಿಮೆಗೊಳಿಸಿದೆ.

ವಿನೂತನ ಹೊರ ವಿನ್ಯಾಸ ಹೊಂದಿರುವ ಈ ಕ್ರಾಸ್ ಓವರ್ ಹೋಂಡಾ ಡಬ್ಲ್ಯುಆರ್-ವಿ ಕಾರು, ಎಸ್, ಎಸ್(ಡೀಸೆಲ್), ವಿಎಕ್ಸ್ , ವಿ ಎಕ್ಸ್(ಡೀಸೆಲ್) ಎಂಬ ನಾಲ್ಕು ವಿವಿಧ ವಿಧಗಳಲ್ಲಿ ಬಿಡುಗೆಡೆಗೊಂಡಿದೆ.

ಹೋಂಡಾ ಡಬ್ಲ್ಯೂಆರ್-ವಿ ಕಾರಿನ ಬೆಲೆ (ಎಕ್ಸ್ ಷೋ ರೂಂ ಬೆಂಗಳೂರು)
ಎಸ್ ಆವೃತಿ - ರೂ. 7.9 ಲಕ್ಷ
ಎಸ್ ಡೀಸೆಲ್ - ರೂ. 8.94 ಲಕ್ಷ
ವಿಎಕ್ಸ್ - ರೂ. 9.14 ಲಕ್ಷ
ವಿಎಕ್ಸ್‌ ಡೀಸೆಲ್ - ರೂ. 10.15 ಲಕ್ಷ

ಹೋಂಡಾ ಕಂಪನಿಯ ಜಾಝಿ ಮತ್ತು ಸಿಟಿ ಕಾರಿಗೆ ಹೋಲಿಸಿದರೆ, ಹೋಂಡಾ ಡಬ್ಲ್ಯೂಆರ್-ವಿ ಕಾರು ಹೆಚ್ಚು ಎತ್ತರವಾಗಿದ್ದು, ಅಗಲವಾದ ಕಾರು ಎನ್ನಿಸಿಕೊಂಡಿದೆ.

ಹೋಂಡಾ ಕಂಪನಿಯ ಮತ್ತೊಂದು ಕಾರು 'ಜಾಝ್' ಕಾರಿನ ಕ್ರೇಸ್ಓವರ್ ಮಾದರಿಯನ್ನು ಮತ್ತಷ್ಟು ಅಂದಗೊಳಿಸಿ ಮತ್ತು ಹೆಚ್ಚು ತಂತ್ರಜ್ಞಾನದೊಂದಿಗೆ ಹೋಂಡಾ ಡಬ್ಲ್ಯೂಆರ್-ವಿ ಕಾರನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.

5-ಸ್ಪೀಡ್ ಮ್ಯಾನುವಲ್ ಹಾಗು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಈ ಕಾರು, ಪ್ರತಿ ಲೀಟರ್ ಪೆಟ್ರೋಲಿಗೆ 17.5 ಕಿಲೋ ಮೀಟರ್ ಹಾಗೂ ಪ್ರತಿ ಲೀಟರ್ ಡೀಸೆಲ್ ಇಂಧನಕ್ಕೆ 25.5 ಕಿ.ಲೋ ಮೈಲೇಜ್ ನೀಡಲಿದೆ.

ಸದ್ಯ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿರುವ ಈ ಕ್ರಾಸ್ ಓವರ್ ಕಾರು ಮಾರುತಿ ಸುಜುಕಿ ಕಂಪನಿಯ ಬ್ರೀಝ ಮತ್ತು ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ ಕಾರಿನೊಂದಿಗೆ ಸ್ಪರ್ಧಿಸಲಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸುದ್ದಿಗಳು

ಟಾಟಾ ಟಿಗೋರ್

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
English summary
[read in kananda]Honda WR-V launched in Bangalore. The Honda WR-V launched in Bangalore is an aggressive crossover based on the large Jazz hatchback.
Please Wait while comments are loading...

Latest Photos

LIKE US ON FACEBOOK