ರೂ. 7.75 ಲಕ್ಷಕ್ಕೆ ವಿನೂತನ ಹೋಂಡಾ WR-V ಕಾರು- ಬಿಡುಗಡೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..!!

Written By:

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ತನ್ನ ಕ್ರಾಸ್ ಓವರ್ ಆವೃತ್ತಿ WR-V ಬಿಡುಗಡೆಗೆ ಮಾಡಿದೆ. ದೆಹಲಿ ಎಕ್ಸ್‌‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ. 7.75 ಲಕ್ಷಕ್ಕೆ ಲಭ್ಯವಿರಲಿದೆ.

ನಾಲ್ಕು ವಿವಿಧ ಮಾದರಿಗಳಲ್ಲಿ ಬಿಡುಗೆಡೆಗೊಂಡಿರುವ ಹೋಂಡಾ WR-V ಕಾರು S, S(ಡೀಸೆಲ್), VX, VX(ಡೀಸೆಲ್) ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಎಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.75 ಲಕ್ಷ ಹಾಗೂ S ಡೀಸೆಲ್ ಮಾದರಿಯೂ ರೂ.8.79 ಲಕ್ಷಕ್ಕೆ ಲಭ್ಯವಿದೆ.

ಇನ್ನು ವಿಎಕ್ಸ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.8.99 ಲಕ್ಷಕ್ಕೆ ಲಭ್ಯವಿದ್ದರೆ, ವಿಎಕ್ಸ್‌ ಡೀಸೆಲ್ ಮಾದರಿಯೂ ರೂ. 9.99 ಲಕ್ಷಕ್ಕೆ ದೊರೆಯಲಿದೆ.

ಮೈಲೇಜ್ ಮತ್ತು ಎಂಜಿನ್
ಹೊಸದಾಗಿ ಬಿಡುಗಡೆಯಾಗಿರುವ ಹೋಂಡಾ WR-V ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಲಭ್ಯವಿದೆ. ಇದರ ಜೊತೆಗೆ ಕ್ರಮಬದ್ಧವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಪೆಟ್ರೋಲ್ ಮಾದರಿಯೂ ಪ್ರತಿ ಲೀಟರ್‌ಗೆ 17.5 ಕಿಲೋ ಮೀಟರ್ ಹಾಗೂ ಡೀಸೆಲ್ ಮಾದರಿಯೂ ಪ್ರತಿಲೀಟರ್‌ಗೆ 25.5 ಕಿ.ಲೋ ಮೈಲೇಜ್ ನೀಡಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಅದ್ಭುತ ಹೊರ ವಿನ್ಯಾಸ ಹೊಂದಿರುವ ಹೋಂಡಾ WR-V ಮಾದರಿಯೂ ಪ್ರಸ್ತುತ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿದ್ದು, ಎಲ್‌ಇಡಿ ಡಿಆರ್‌ಎಸ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ. ಜೊತೆಗೆ 16-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿದ್ದು, ಎಲ್ ಮಾದರಿಯ ಟೈಲ್‌ಲೈಟ್ ವ್ಯವಸ್ಥೆ ಹೊಂದಿದೆ.

ಇನ್ನು ಒಳವಿನ್ಯಾಸ ಬಗ್ಗೆ ಹೇಳುವುದಾದರೇ 7-ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೈ ಮತ್ತು ನೆವಿಗೆಶನ್ ಹೊಂದಿದೆ. ವೈ-ಫೈ, 1.5 ಜಿಬಿ ಇಂಟರನಲ್ ಮೆಮೊರಿ, ಬ್ಲೂಟೂತ್ ಕನೆಕ್ಟಿವಿಟಿ, ಒಂದು HDMI ಪೋರ್ಟ್, ಎರಡು USB ಸ್ಲಾಟ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ವ್ಯವಸ್ಥೆಗಳಿವೆ.

ಹೊಸ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಎಬಿಎಸ್ ಜೊತೆ ಇಬಿಡಿ ವ್ಯವಸ್ಥೆ ಒದಗಿಸಲಾಗಿದೆ.

 

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ:

ಬಿಡುಗಡೆಗೊಂಡಿರುವ ಹೊಚ್ಚ ಹೊಸ 2017ರ ಹೋಂಡಾ ಸಿಟಿ ಕಾರಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Thursday, March 16, 2017, 19:11 [IST]
English summary
Honda WR-V Launched In India. The all-new Honda WR-V for India is an aggressive crossover SUV based on the Honda Jazz.
Please Wait while comments are loading...

Latest Photos