ಹೆಚ್ಚಿದ ಬಿಸಿಲ ಧಗೆ- ಕಂಗೆಟ್ಟ ಕುದುರೆ ಕಾರಿನ ಮೇಲೆ ಜಂಪ್..!!

Written By:

ದೇಶದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಾಣಿ ಮತ್ತು ಪಕ್ಷಿಗಳು ಕಂಗೆಟ್ಟು ಹೋಗಿವೆ. ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದ ಕುದುರೆಯೊಂದು ಕಾರಿನ ಮೇಲೆ ಹಾರಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮರುಭೂಮಿ ನಾಡು ಎಂದೆ ಖ್ಯಾತಿಯಾಗಿರುವ ಜೈಪುರದಲ್ಲಿ ಇದೀಗ ಕನಿಷ್ಠ ಅಂದ್ರು 43 ಡಿಗ್ರಿ ಸೆಲ್ಶಿಯಸ್ ಬಿಸಿಲು ತಾಪ ದಾಖಲಾಗುತ್ತೆ. ಈ ಬಿಸಿಲಿನ ತಾಪಕ್ಕೆ ಕಂಗೆಟ್ಟ ಕುದುರೆಯೊಂದು ನೆರಳಿನಾಶ್ರಯ ಪಡೆಯಲು ಹೋಗಿ ಕಾರಿನ ಒಳಗೆ ನುಗ್ಗಿ ಅನಾಹುತ ಸೃಷ್ಠಿಸಿದೆ.

ಅತಿಯಾದ ತಾಪಮಾನ ಹಿನ್ನೆಲೆ ಕುದುರೆ ಮಾಲೀಕ ಕುದುರೆಗೆ ಮೇವು ನೀಡಿ ರಸ್ತೆ ಬದಿಯಲ್ಲಿ ಕಟ್ಟಿ ಹೋಗಿದ್ದಾನೆ. ಒಂದು ಕಡೆ ಬಿಸಿಲಿನ ಜಳ ಮತ್ತೊಂದು ಕಡೆ ವಾಹನಗಳ ಶಬ್ದದಿಂದ ಕಂಗೆಟ್ಟ ಕುದುರೆ ಓಡಿ ಹೋಗಲು ಯತ್ನಿಸಿದೆ.

ಈ ವೇಳೆ ಮುಖ್ಯ ರಸ್ತೆಯಲ್ಲಿ ನುಗ್ಗಿದ ಕುದುರೆ, ವಾಹನ ದಟ್ಟಣೆ ಕಂಡು ಭಯಗೊಂಡಿದೆ. ತಕ್ಷಣಕ್ಕೆ ಯಾವ ಕಡೆ ಹೋಗಬೇಕೆಂಬದು ತಿಳಿದೇ ಅಲ್ಲಿಯೇ ಇದ್ದ ಕಾರಿನ ಮೇಲೆ ಜಂಪ್ ಮಾಡಿದೆ.

ವೇಗವಾಗಿ ಓಡಿದ ಕುದುರೆಯು ಕಾರಿನ ಮೇಲೆ ಜಿಗಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದ್ದು, ಗ್ಲಾಸ್ ತುಣುಕುಗಳು ಚುಚ್ಚಿದ ಪರಿಣಾಮ ಕುದುರೆ ಮುಖಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಕಾರು ಚಾಲಕನಿಗೂ ಗಂಭೀರ ಗಾಯಾಗಳಾಗಿದ್ದು, ಕಾರಿನಲ್ಲಿ ಸಿಲುಕಿಕೊಂಡಿದ್ದ ಕುದುರೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ.

ಸದ್ಯ ಘಟನೆಯಲ್ಲಿ ಗಾಯಗೊಂಡ ಕುದುರೆಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ವಿಪರೀತ ಬಿಸಿಲು ಇದ್ದ ಕಾರಣ ಈ ಘಟನೆ ನಡೆದಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

Read more on ಅಪಘಾತ accident
Story first published: Monday, June 5, 2017, 19:16 [IST]
English summary
Read in Kannada about uncontrolled horse jumped into a moving car. Both the driver and horse were injured in this shocking accident.
Please Wait while comments are loading...

Latest Photos