ಟ್ರಾಫಿಕ್ ಸಮಸ್ಯೆ ತಗ್ಗಿಸಲು ಹೊಸ ಪ್ಲ್ಯಾನ್- ಭಾರತದಲ್ಲಿ ಕೈಗೂಡುತ್ತಾ ಹೈಪರ್‌ಲೈನ್ ಪರಿಕಲ್ಪನೆ..?

Written By:

ಜಗತ್ತಿನ ಯಾವುದೇ ಮೂಲೆಗೆ ಹೋದ್ರು ಟ್ರಾಫಿಕ್ ಕಿರಿಕಿರಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ವಿಶ್ವಾದ್ಯಂತ ಹತ್ತಾರು ಅಧ್ಯಯನಗಳು ಕೂಡಾ ನಡೆಯುತ್ತಲೇ ಇವೆ. ಆದರೂ ಅದೊಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ.

ಹೈಪರ್ ಲೈನ್ ಪರಿಕಲ್ಪನೆ

ಸದ್ಯ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ಹೊಸದೊಂದು ಪರಿಕಲ್ಪನೆ ಸಿದ್ಧಗೊಂಡಿದ್ದು, ಅದುವೇ ಹೈಪರ್ ಲೈನ್.

ಟ್ರಾಫಿಕ್ ಸಮಸ್ಯೆ ತಗ್ಗುತ್ತಾ?

ಹೌದು...ಕ್ಯಾಲಿಪೋರ್ನಿಯಾ ವಿವಿ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಹೈಪರ್‌ಲೈನ್ ಪರಿಕಲ್ಪನೆಯು ಟ್ರಾಫಿಕ್ ಸಮಸ್ಯೆಗೆ ಹೊಸ ಪರಿಹಾರವಾಗುವ ಸಾಧ್ಯತೆಗಳಿವೆ.

ಹೈಪರ್‌ಲೈನ್‌ನಿಂದ ಎನು ಲಾಭ?

ಹೈಪರ್‌ಲೈನ್ ಪರಿಕಲ್ಪನೆಯು ಟ್ರಾಫಿಕ್ ದಟ್ಟಣೆಯನ್ನು ತಡೆಯುವ ಒಂದು ವಿಧಾನವಾಗಿದ್ದು, ಹೈಪರ್‌ಲೈನ್ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬಹುದಾಗಿದೆ.

ಹೀಗಾಗಿ ಸದ್ಯ ಲಭ್ಯಯಿರುವ ರಸ್ತೆಗಳ ಹೊರತಾಗಿ ಪ್ರತ್ಯೇಕ ಹೈಪರ್‌ಲೈನ್ ಅಭಿವೃದ್ಧಿ ಪಡಿಸುವ ಅವಶ್ಯಕತೆಯಿದ್ದು, ಈ ಮೂಲಕ ಆಯ್ದ ವಾಹನಗಳಿಗೆ ಮಾತ್ರ ಹೈಪರ್‌ಲೈನ್‌ನಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕಿದೆ.

ಆದ್ರೆ ಕ್ಯಾಲಿಪೋರ್ನಿಯಾ ವಿವಿ ವಿದ್ಯಾರ್ಥಿಗಳ ಪ್ರಕಾರ ಹೈಪರ್‌ಲೈನ್‌ನಲ್ಲಿ ಆಟೋಮೊನಸ್(ಚಾಲಕ ರಹಿತ) ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕೆಂಬ ನಿಯಮಗಳನ್ನು ಸೂಚಿಸಿದ್ದು, ಇದೊಂದು ಧಿರ್ಘಾವಧಿಯ ಯೋಜನೆಯಾಗಿದೆ ಎಂದಿದ್ದಾರೆ.

ಇನ್ನು ಹೈಪರ್‌ಲೈನ್‌ಗಳಲ್ಲಿ ವಾಹನಗಳು ಪ್ರತಿ ಗಂಟೆಗೆ ಸರಾಸರಿ 160 ಕಿಮಿ ವೇಗದಲ್ಲೇ ಚಲಿಸಬೇಕಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಸುಧಾರಿತ ತಂತ್ರಜ್ಞಾನ ಮೂಲಕ ಸಂಚಾರ ನಿಯಂತ್ರಣ ಮಾಡಬಹುದಾಗಿದೆ.

ಇನ್ನೊಂದು ಪ್ರಮುಖ ವಿಚಾರವೆಂದ್ರೆ ಹೈಪರ್‌ಲೈನ್‌ನಲ್ಲಿ ಹೊರಡುವ ಪ್ರತಿ ವಾಹನವು ಒಂದೇ ವೇಗದಲ್ಲಿ ಚಲಿಸಬೇಕಿದ್ದು, ಕಾರುಗಳ ನಿಯಂತ್ರಣಕ್ಕಾಗಿ ಕನಿಷ್ಠವೆಂದರೂ 5ಜಿ ವ್ಯವಸ್ಥೆ ಹೊಂದಿರಲೇಬೇಕು.

ಇದೇ ಕಾರಣಕ್ಕಾಗಿ ಮುಂದುವರೆದ ದೇಶಗಳ ಹೊರತಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದೊಂದು ದುಬಾರಿ ಯೋಜನೆ ಕೂಡಾ ಆಗಿದ್ದು, ಮುಂಬರುವ ಪೀಳಿಗೆಗೆ ಇದು ಸಹಕಾರಿಯಾಗುವುದಲ್ಲಿ ಯಾವುದೇ ಸಂದೇಹವಿಲ್ಲ.

ಇದಲ್ಲದೇ ಹೈಪರ್‌ಲೈನ್‌ನಲ್ಲಿ ಚಾಲಕ ರಹಿತ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದುವರೆಗೆ ವಿಶ್ವದ ಆಟೋಉದ್ಯಮದಲ್ಲಿ ಯಾವುದೇ ಚಾಲಕ ರಹಿತ ಕಾರುಗಳಿಗೆ ಮಾನ್ಯತೆ ಕೂಡ ಸಿಕ್ಕಿಲ್ಲದೇ ಇರುವುದು ಕೂಡಾ ಗಮರ್ನಾಹ ಸಂಗತಿ.

English summary
Read in Kannada about hyperlane is An affordable hyperloop for autonomous cars.
Please Wait while comments are loading...

Latest Photos