ಹೊಸ ಫೇಸ್ ಲಿಫ್ಟ್ ಹ್ಯುಂಡೈ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಕಾರಿನ ರಹಸ್ಯ ಚಿತ್ರಗಳು ಬಿಡುಗಡೆ

Written By:

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಹ್ಯುಂಡೈ ತನ್ನ ಎಲೈಟ್ ಐ20 ಹ್ಯಾಚ್ ಬ್ಯಾಕ್ ಸುಧಾರಿತ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಇದರ ಮಧ್ಯೆ ಈ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ಹ್ಯುಂಡೈ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಕಾರಿನ ಬಿಡುಗಡೆಗೂ ಮುಂಚಿತವಾಗಿ ನವೀಕರಿಸಿದ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ತೆಗೆದ ರಹಸ್ಯ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ತಮಿಳುನಾಡಿನಲ್ಲಿ ಫೇಸ್‌ಲಿಫ್ಟ್ ಎಲೈಟ್ ಐ20 ಕಾರಿನ ಪರೀಕ್ಷೆಯನ್ನು ನೆಡೆಸಲಾಗುತ್ತಿದ್ದು, ಈ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಬದಲಾವಣೆ ಕಂಡಿದೆ.

ಮುಂಭಾಗದ ಬಂಪರ್ ಮತ್ತು ನವೀಕರಿಸಿದ ಹೆಡ್ ಲೈಟ್‌ಗಳು ಈ ಫೇಸ್‌ಲಿಫ್ಟ್ ಕಾರಿನಲ್ಲಿ ಬದಲಾವಣೆ ಮಾಡಲಾಗಿದ್ದು, ಕಾರಿನ ಬದಿ ಹಾಗು ಚಾವಣಿ ಯಾವುದೇ ಬದಲಾವಣೆ ಕಂಡಿಲ್ಲ.

ಎಲೈಟ್ ಐ20 ಕಾರಿನ ಮುಂಭಾಗದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಗ್ರಾಂಡ್ ಐ10 ಮತ್ತು ಎಕ್ಸ್ಎಂಟ್ ಫೇಸ್ ಲಿಫ್ಟ್ ಕಾರುಗಳಲ್ಲಿ ಇರವಂತಹ ಮರುವಿನ್ಯಾಸಗೊಂಡಿರುವ ಫ್ಯಾಮಿಲಿ ಗ್ರಿಲ್ ಈ ಕಾರಿನಲ್ಲೂ ಕಾಣಬಹುದಾಗಿದೆ.

ಚಿತ್ರಗಳು ಗಮನಿಸಿದರೆ, ಸಾಮಾನ್ಯವಾಗಿ ಉನ್ನತ ಶ್ರೇಣಿಯ ಕಾರುಗಳಲ್ಲಿ ನೀಡಲಾಗುವ ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳನ್ನು ಈ ಹೊಸ ಕಾರು ಹೊಂದಿದೆ.

ಕಾರು ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆಯಬಹುದು ಎನ್ನಲಾಗಿದ್ದು, ಇದನ್ನು ಹೊರತುಪಡಿಸಿ ಈ ಫೇಸ್‌ಲಿಫ್ಟ್ ಕಾರಿನ ಒಳಭಾಗವು ಯಾವುದೇ ಬದಲಾವಣೆ ಕಾಣುವುದಿಲ್ಲ ಎನ್ನಲಾಗಿದೆ.

ಎಲೈಟ್ ಐ20 ಕಾರು ಪ್ರಸ್ತುತ ಇರುವ 1.2-ಲೀಟರ್ ಪೆಟ್ರೋಲ್ ಇಂಜಿನ್, 1.4-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್‌ ಹೊಸ ಕಾರಿನಲ್ಲೂ ಮುಂದುವರೆಯಲಿದೆ.

English summary
Hyundai is all set to introduce the facelifted version of its Elite i20 hatchback. Ahead of that the updated car was spotted testing.
Please Wait while comments are loading...

Latest Photos