ಭಾರತಕ್ಕೆ ಬರಲಿದೆ ಹ್ಯುಂಡೈ ಹೈಬ್ರಿಡ್ ಕಾರು 'ಐಯೊನಿಕ್'

Written By:

ಟೊಯೊಟಾದ ಜನಪ್ರಿಯ ಪ್ರಯಸ್ ಹೈಬ್ರಿಡ್ ಕಾರು ಈಗಾಗಲೇ ಬಿಡುಗಡೆಗೊಳಿಸಿದ್ದು, ಹೆಚ್ಚಿನ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದು, ಇತ್ತೀಚೆಗೆ ಹೈಬ್ರಿಡ್ ಕಾರುಗಳತ್ತ ಜನರು ಮನಸ್ಸು ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ.

ಹ್ಯುಂಡೈ ಕಂಪನಿ ಈಗೊಂದು ಸಂತೋಷ ಸುದ್ದಿಯೊಂದಿಗೆ ಜನತೆಯ ಮುಂದೆ ಬಂದಿದ್ದು, ಅತಿ ನೂತನ ಹ್ಯುಂಡೈ ಐಯೊನಿಕ್ (Ioniq) ಹೈಬ್ರಿಡ್ ಕಾರಿನ ಟೀಸರ್ ಚಿತ್ರ ಈಗಗಾಲೇ ಎಲ್ಲರ ಗಮನ ಸೆಳೆದಿದ್ದು, ಮುಂದಿನ ವರ್ಷ 2018ರಲ್ಲಿ ಹ್ಯುಂಡೈ ಐಯೊನಿಕ್ ಬಿಡುಗಡೆಯಾಗಲಿದೆ.

ಪ್ರಪಂಚದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹ್ಯುಂಡೈ ಕಂಪನಿ ಇದರ ವಿರುದ್ಧ ಹೊರಡುವ ನಿಟ್ಟಿನಲ್ಲಿ ತನ್ನ ಅತಿ ನೂತನ ಐಯೊನಿಕ್ ಹೈಬ್ರಿಡ್ ಕಾರನ್ನು 2018ರಲ್ಲಿ ಬಿಡುಗಡೆಗೊಳಿಸಿದೆ.

ಸರ್ಕಾರ ಈಗಾಗಲೇ ಇಂತಹ ಕಾರುಗಳಿಗೆ ಹೆಚ್ಚಿನ ಮಟ್ಟದ ಸಹಕಾರ ನೀಡುತ್ತಿದ್ದು, ಈ ಕಾರು ಮುಂದಿನ ವರ್ಷ ಭಾರತದ 2018 ಆಟೋ ಎಕ್ಸ್-ಪೂನಲ್ಲಿ ಬಿಡುಗಡೆಗೊಳ್ಳುವುದು ಖಚಿತ ಎನ್ನಲಾಗಿದೆ.

ಮತ್ತೊಂದು ಸಂತೋಷಕರ ವಿಚಾರ ಏನೆಂದರೆ ಮೇಕ್ ಇನ್ ಇಂಡಿಯಾ ಸಹಯೋಗದೊಂದಿಗೆ ಎಂಜಿನ್ ಒಳಗೊಂಡು ಈ ಕಾರಿನ ಎಲ್ಲಾ ಭಾಗಗಳೂ ಭಾರತದಲ್ಲಿ ತಯಾರಾಗಲಿವೆ.

ಈ ಕಾರಿನ ನೇರ ಸ್ಪರ್ಧಿ ಎಂದೇ ಬಿಂಬಿತವಾಗಿರುವ ಟೊಯೊಟಾ ಪ್ರಯಸ್ ಕಾರಿನ ಮಾರುಕಟ್ಟೆ ಬೆಲೆ ರೂ. ೩೯ (ಎಕ್ಸ್ ಶೋ ರೂಂ) ಲಕ್ಷವಿದ್ದು ಐಯೊನಿಕ್ ಕಾರಿನ ನಿಖರ ಬೆಲೆ ತಿಳಿದುಬಂದಿಲ್ಲ. ಇನ್ನು ಕಾರಿನಲ್ಲಿ ಪ್ಯೂರ್ ಎಲೆಕ್ಟ್ರಿಕ್, ಪ್ಲಗಿನ್ ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರ್ ಮತ್ತು ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರಿಡ್ ಪ್ರಮುಖವಾಗಿರುತ್ತದೆ.

ಹೈಬ್ರಿಡ್ ಕಾರುಗಳತ್ತ ಹೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ ಭಾರತ ಸರ್ಕಾರ ಸಣ್ಣ ಕಾರುಗಳಿಗೆ ವಿಧಿಸುವ ಶೇಕಡ 12.5 ಉತ್ಪಾದನಾ ತೆರಿಗೆಯನ್ನು ಈ ಕಾರುಗಳಿಗೂ ವಿಧಿಸಲು ತೀರ್ಮಾನಿಸಿದೆ.

ಪರ್ಯಾಯ ಇಂಧನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸದ್ಯ ಕ್ರೀಡಾ ಬಳಕೆಯ ವಾಹನಗಳು ಮತ್ತು ದೊಡ್ಡ ಕಾರುಗಳ ಮೇಲೆ ಶೇಕಡ 24 ರಿಂದ 30ರಷ್ಟು ಉತ್ಪಾದನಾ ತೆರಿಗೆ ವಿಧಿಸಲಾಗುತ್ತಿದೆ.

2017 ರಿಂದ 2020ರ ನಡುವಿನಲ್ಲಿ ಹೊಚ್ಚ ಹೊಸ ಎಂಟು ಕಾರುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಹ್ಯುಂಡೈ ಕಂಪನಿ ಹೊಂದಿದ್ದು, ಎಂಟರಲ್ಲಿ ಮೂರು ಕಾರುಗಳು ಹೊಸ ಆವೃತಿಯನ್ನು ಹೊಂದಿರಲಿವೆ.

ಹೊಸ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡುತ್ತಿರುವ ಹೊತ್ತಿನಲ್ಲಿ ನಿಮಗೆ ಸೂಚಿಸ ಬಯಸುವ ಹೊಸ ಕಾರು ಹ್ಯುಂಡೈ ಕಂಪನಿಯ ವರ್ನ 2017.

English summary
Hyundai is eyeing the hybrid car market in India and will launch the Hyundai Ioniq during the 2018 Auto Expo.
Please Wait while comments are loading...

Latest Photos