ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹ್ಯುಂಡೈ ಹೊಚ್ಚ ಹೊಸ ಎಕ್ಸೆಂಟ್

Written By:

ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಕಾರು ಎಕ್ಸೆಂಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.38 ಲಕ್ಷಕ್ಕೆ ಲಭ್ಯವಿರಲಿವೆ.

2017ನೇ ಸಾಲಿನ ವಿನೂತನ ಹ್ಯುಂಡೈ ಎಕ್ಸೆಂಟ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಹಿನ್ನೆಲೆ ಬೆಲೆಗಳು ಸ್ವಲ್ಪ ಮಟ್ಟಿಗೆ ದುಬಾರಿ ಎನಿಸಲಿವೆ.

ಎಂಜಿನ್ ಸಾಮರ್ಥ್ಯ
1.2-ಲೀಟರ್ ಡೀಸೆಲ್ ಕಾರು (74 ಬಿಎಚ್‌ಪಿ ಹಾಗೂ 190ಎನ್ಎಂ)
1.2-ಲೀಟರ್ ಪೆಟ್ರೋಲ್ ಕಾರು (82 ಬಿಎಚ್‌ಪಿ ಹಾಗೂ 114ಎನ್ಎಂ)

ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)
ಪೆಟ್ರೋಲ್ ಮಾದರಿಯ ಕಾರುಗಳು
ಇ-        5.38 ಲಕ್ಷ
ಇ ಪ್ಲಸ್-  5.93 ಲಕ್ಷ
ಎಸ್-      6.29 ಲಕ್ಷ
ಎಸ್‌ಎಕ್ಸ್- 6.73 ಲಕ್ಷ
ಎಸ್‌ಎಕ್ಸ್(ಐಚ್ಛಿಕ)-7.51ಲಕ್ಷ
ಎಸ್ ಆಟೋಮ್ಯಾಟಿಕ್- 7.09ಲಕ್ಷ

ಡೀಸೆಲ್ ಮಾದರಿ ಕಾರುಗಳ ಬೆಲೆ
ಇ-        6.28 ಲಕ್ಷ
ಇ ಪ್ಲಸ್-  6.83ಲಕ್ಷ
ಎಸ್-     7.19ಲಕ್ಷ
ಎಸ್‌ಎಕ್ಸ್-7.63ಲಕ್ಷ
ಎಸ್ಎಕ್ಸ್(ಐಚ್ಛಿಕ)- 8.41ಲಕ್ಷ

ಮೈಲೇಜ್
ಪೆಟ್ರೋಲ್ ಮಾದರಿ- 20.14 ಕಿ.ಮಿ(ಪ್ರ.ಲೀ)
ಪೆಟ್ರೋಲ್ ಆಟೋಮ್ಯಾಟಿಕ್(4 ಸ್ಪೀಡ್)-17.36ಕಿ.ಮಿ(ಪ್ರ.ಲೀ)
ಡಿಸೇಲ್ ಮಾದರಿ-  25.4 ಕಿ.ಮಿ(ಪ್ರ.ಲೀ)

ಹೊಸ ವಿನ್ಯಾಸಗಳು
ಕಾರಿನ ಮುಂಭಾಗದಲ್ಲಿ ಎಲಂಟ್ರಾಗೆ ಸಮಾನವಾಗಿ ಸಮತಲ ಫ್ರಂಟ್ ಗ್ರಿಲ್ ಇದ್ದು, ಬಂಪರ್ ಹಾಗೂ ಡ್ಯಾಶ್‌ಕ್ರೋಮ್ ಟಚ್ ನೀಡಲಾಗಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ತಕ್ಕಂತೆ ಹ್ಯುಂಡೈ ವಿನೂತನ ಎಂಕ್ಸೆಟ್ ಸಿದ್ಧಗೊಂಡಿದೆ.

ಸುರಕ್ಷಾ ವಿಚಾರಗಳು
ನೂತನ ಎಕ್ಸೆಂಟ್ ಕಾರು ಮಾದರಿಗಳಲ್ಲಿ ಸುರಕ್ಷತೆಗೆ ಹೆಚ್ಚು ಗಮನವಹಿಸಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ವ್ಯವಸ್ಥೆ ಸಿಗಲಿದೆ. ಜೊತೆಗೆ ಡ್ಯುಯಲ್ ಎರ್‌ಬ್ಯಾಗ್ ವ್ಯವಸ್ಥೆ ಕೂಡಾ ಅಳವಡಿಕೆ ಮಾಡಲಾಗಿದೆ.

ಇನ್ನು ಕಾರಿನ ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, 7-ಇಂಚುಗಳ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯಿದೆ. ಜೊತೆಗೆ ಟಾಪ್ ಎಂಡ್ ಮಾದರಿಯಲ್ಲಿ ರಿವರ್ಸ್ ಕ್ಯಾಮೆರಾ ವ್ಯವಸ್ಥೆ ಕೂಡಾ ಇದ್ದು, ಆಡಿಯೋ ವಿಡಿಯೋ ನೇವಿಗೆಷನ್ ಸೇವೆ ಲಭ್ಯವಿದೆ.

ಹೊಸ ಮಾದರಿಯಲ್ಲಿ ಸಿದ್ಧಗೊಂಡಿರುವ ಹ್ಯುಂಡೈ ಎಕ್ಸೆಂಟ್ ಆವೃತ್ತಿ  ವಿವಿಧ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ದೂರದ ಪ್ರಯಾಣಕ್ಕೆ ಅನುವಾಗುವಂತೆ ಸೀಟುಗಳನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ.

ಒಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹ್ಯುಂಡೈ ಎಕ್ಸೆಂಟ್ ಮಾದರಿಯೂ ಪ್ರಮುಖ ಕಾರು ಮಾದರಿಗಳಾದ ಟಾಟಾ ಟಿಗೋರ್ ಮತ್ತು ಮಾರುತಿ ಸ್ವಿಫ್ಟ್ ಡಿಜೈರ್ ಮಾದರಿಗೆ ತೀವ್ರ ಸ್ವರ್ಧೆ ಒಡ್ಡಲಿದೆ.

ಎಕ್ಸ್ಎಂಟ್ 2017 ಕಾರು ಫೇಸ್‌ಲಿಫ್ಟ್ ಅಂಶಗಳನ್ನು ಹೊಂದಿದ್ದು, ನವೀನ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಹೊಸ ತಂತ್ರಜ್ಞಾನ ಪಡೆದುಕೊಂಡಿರುವ ಈ ಕಾರನ್ನು ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Read in Kannada about 2017 new Hyundai Xcent launched in India.
Please Wait while comments are loading...

Latest Photos