ಜಿಎಸ್‌ಟಿ ಜಾರಿಗೆ ಬಂದ್ರೆ ಆಟೋ ಉದ್ಯಮಕ್ಕೆ ಲಾಭವೋ..? ನಷ್ಟವೋ?

Written By:

ಈ ಹಿಂದೆ ಲೋಕಸಭೆಯಲ್ಲಿ ಪರ-ವಿರೋಧದ ನಡುವೆ ಅಂಗೀಕಾರಗೊಂಡಿದ್ದ ಜಿಎಸ್‌ಟಿ ಬಿಲ್ ಇದೀಗ ಜಾರಿಗೆ ಬರುತ್ತಿದ್ದು, ಏಕ ರೂಪದ ತೆರಿಗೆ ವ್ಯವಸ್ಥೆ ಆಟೋ ಮೊಬೈಲ್ ಉದ್ಯಮದ ಮೇಲೂ ಭಾರೀ ಪರಿಣಾಮ ಬೀಳಲಿದೆ.

ರಾಷ್ಟ್ರೀಯ ಮೌಲ್ಯವರ್ಧಿತ ತೆರಿಗೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ತರಲಾಗುತ್ತಿರುವ ಜಿಎಸ್‌ಟಿ ಬಿಲ್ ಇನ್ಮುಂದೆ ‘ಇನ್ಪುಟ್ ತೆರಿಗೆ ಕ್ರೆಡಿಟ್ ಆಧಾರ'ದ ಮೇಲಿನ ತೆರಿಗೆಗಳು ಕಡಿತಗೊಳ್ಳಲಿವೆ.

ಪ್ರಸ್ತುತ ಸೇವಾ ತೆರಿಗೆ ದರ ಶೇ 14.5 ರಷ್ಟಿದೆ. ಜಿಎಸ್‌ಟಿ ದರ ಶೇ 18 ರಷ್ಟು ನಿಗದಿಪಡಿಸಿದರೆ ಸೇವಾ ವಲಯಕ್ಕೆ ಹೆಚ್ಚಿನ ಹೊರೆ ಬೀಳಲಿದೆ.

ಹೀಗಾಗಿ ಪ್ರವಾಸ, ವಿಮಾನ ಪ್ರಯಾಣ, ಆಂಬುಲೆನ್ಸ್‌ ಸೇವೆ, ಲಗ್ಷುರಿ ಕಾರು ಖರೀದಿ ಪ್ರಕ್ರಿಯೆಗಳು ದುಬಾರಿಯಾಗಲಿವೆ.

ಆದ್ರೆ ಜಿಎಸ್‌ಟಿ ಅನುಷ್ಠಾನಗೊಂಡರೆ ಗ್ರಾಹಕನ ಹೊರೆ ಕಡಿಮೆಯಾಗಲಿದ್ದು, ಅಬಕಾರಿ, ವ್ಯಾಟ್‌ ಮತ್ತು ಸೇವಾ ತೆರಿಗೆ ಪಾವತಿಸುತ್ತಿರುವ ತಯಾರಕರು ಇನ್ನು ಮುಂದೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ಬರಲಿದ್ದಾರೆ.

ಜಿಎಸ್‌ಟಿ ಜಾರಿಗೆ ಬರುವುದವುದರಿಂದ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್‌ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಲಿವೆ.

ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್‌ಗಳನ್ನೂ ಪಾವತಿಸುತ್ತಾರೆ. ಆದರೆ ಇನ್ನು ಮುಂದೆ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.

ಇದರ ಜೊತೆಗೆ ಸಣ್ಣ ಕಾರುಗಳ ಮೇಲಿನ ಸೆಸ್ ಶೇ.1ರಷ್ಟು ಮಾತ್ರ ಹೆಚ್ಚಳಮಾಡಲಾಗಿದ್ದು, ದುಬಾರಿ ಕಾರು, ಬೈಕ್ ಖರೀದಿ ಮೇಲೆ ಹೆಚ್ಚುವರಿ ಸೆಸ್ ಪಾವತಿ ಮಾಡಬೇಕಾಗುತ್ತದೆ.

ಜಿಎಸ್‌ಟಿ ಕಾಯ್ದೆ ಜಾರಿಗೆ ಬರುವುದರಿಂದ ಒಂದು ರೀತಿಯಲ್ಲಿ ಮಾಧ್ಯಮ ವರ್ಗಗಳಿಗೆ ವರವಾಗಿ ಪರಿಣಮಿಸಿದರು, ರಾಷ್ಟ್ರೀಯ ವರಮಾನದ ಮೇಲೆ ಪರಿಣಾಮ ಬೀರುವ ಸಾಧ್ಯತಗಳಿವೆ.

1500 ಸಿಸಿ ಮೇಲ್ಪಟ್ಟ ಕಾರು ಮಾದರಿಗಳು ಮತ್ತು 350 ಸಿಸಿ ಸಾಮರ್ಥ್ಯದ ಬೈಕ್ ಮಾದರಿಗಳಿಗೆ ಹೆಚ್ಚುವರಿ ಶೇ.3 ರಷ್ಟು ಸೆಸ್ ಹೊರಬೀಳಲಿದ್ದು, ದುಬಾರಿ ವಾಹನಗಳ ಖರೀದಿ ತಗ್ಗಲಿದೆ.

ಇನ್ನು ಆಟೋಮೊಬೈಲ್ ತಜ್ಞರ ಪ್ರಕಾರ ಜಿಎಸ್‌ಟಿ ಒಂದು ಕಡೆಯಿಂದ ಲಾಭವೇ ಆಗಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸಣ್ಣಕಾರುಗಳ ಉತ್ವಾದನೆ ಉತ್ತೇಜನ ದೊರೆಯಿಲಿದೆ ಎಂದಿದ್ದಾರೆ.

ಪ್ರಸ್ತುತ ಭಾರತದಲ್ಲಿರುವ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿದೆ. ಯಾವುದೇ ವ್ಯಾಪಾರ-ವಹಿವಾಟು ನಡೆಸಲು ಕಾನೂನು ಕಟ್ಟಳೆಗಳನ್ನು ಈಡೇರಿಸಬೇಕಾಗುತ್ತದೆ. ಹೀಗಾಗಿ ಜಿಎಸ್ ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲಾಗುತ್ತಿದೆ.

ಇದುವರೆಗೆ ರಾಜ್ಯಗಳು ಪ್ರತಿ ವರ್ಷ ಬಜೆಟ್‌ ಮಂಡನೆ ವೇಳೆ ತಮಗೆ ಇಷ್ಟಬಂದಷ್ಟು ತೆರಿಗೆ ವಿಧಿಸಬಹುದಾಗಿತ್ತು. ಆದರೆ ಜಿಎಸ್‌ಟಿ ಜಾರಿ ಬಳಿಕ ಇದಕ್ಕೆಲ್ಲಾ ತಡೆ ಬೀಳಲಿದೆ. ಇನ್ನು ಮನಬಂದಂತೆ ತೆರಿಗೆ ಹಾಕುವಂತಿಲ್ಲ.

ಇದರಿಂದ ಆಟೋ ಉತ್ಪಾದಕರು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ತೆರೆಯಬಹುದಾಗಿದ್ದು, ಏಕರೂಪದ ತೆರಿಗೆ ಮಾತ್ರ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು ಎಂದ್ರೆ ತಪ್ಪಾಗಲಾರದು.

Click to compare, buy, and renew Car Insurance online

Buy InsuranceBuy Now

Story first published: Friday, May 19, 2017, 18:56 [IST]
English summary
The new tax system, Goods and Services Tax (GST) will be implemented in the country. And this will also impact the automobile industry.
Please Wait while comments are loading...

Latest Photos