ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಇಸುಝು ಎಂಯುಎಕ್ಸ್

Written By:

ಭಾರತೀಯ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಮಾದರಿಯನ್ನು ಪರಿಚಯಿಸಿರುವ ಇಸುಝು ಸಂಸ್ಥೆಯು, ಎಂಯು-ಎಕ್ಸ್ ಎಸ್‌ಯುವಿ ಬಿಡುಗಡೆ ಮಾಡಿದೆ. ಹೊಸ ಕಾರಿನ ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.23.99 ಲಕ್ಷಕ್ಕೆ ಲಭ್ಯವಿವೆ.

ಇಸುಝು ಹೊಸ ಮಾದರಿಗಳು

ಎಂಯುಎಕ್ಸ್ 4x2
ಎಂಯುಎಕ್ಸ್ 4x4

ಬೆಲೆಗಳು (ದೆಹಲಿ ಎಕ್ಸ್‌ಶೋರಂ)

ಎಂಯುಎಕ್ಸ್ 4x2- ರೂ.23.99 ಲಕ್ಷ
ಎಂಯುಎಕ್ಸ್ 4x4- ರೂ.25.99ಲಕ್ಷ

ಎಂಜಿನ್ ಸಾಮರ್ಥ್ಯ

3-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಇಸುಝು ಎಂಯುಎಕ್ಸ್ ಮಾದರಿಗಳು, 177 ಬಿಎಚ್‌ಪಿ ಮತ್ತು 380ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿವೆ.

ಇದರ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಹೊಂದಿದ್ದು, ಮುಂಭಾಗ ವಿನ್ಯಾಸದಲ್ಲಿ ಭಾರೀ ಬದಲಾವಣೆ ತರಲಾಗಿದೆ.

ಡಿ-ಮಾಕ್ಸ್ ವಿ-ಕ್ರಾಸ್ ಪೀಕ್ ಅಪ್ ಟ್ರಕ್ ಮಾದರಿಯ ಪ್ರೇರೆಪಣೆಯೊಂದಿಗೆ ಎಂಯುಎಕ್ಸ್ ಮಾದರಿ ಸಿದ್ಧಗೊಂಡಿದ್ದು, 17-ಇಂಚಿನ್ ಅಲಾಯ್ ಚಕ್ರಗಳನ್ನು ಹೊಂದಿದೆ.

ಎಲ್‌ಇಡಿ ಡೇ ಟೈಮ್ ಮತ್ತು ರನ್ನಿಂಗ್ ಲೈಟ್ ವ್ಯವಸ್ಥೆ ಇದ್ದು, ರೂಫ್ ರೈಲ್ಸ್ ಕೂಡಾ ಹೊಂದಿದೆ.

ಮೈಲೇಜ್

ಇಸುಝು ಸಂಸ್ಥೆಯ ಹೇಳಿಕೆಯ ಪ್ರಕಾರ ಹೊಸ ಮಾದರಿ ಎಂಯುಎಕ್ಸ್ ಮಾದರಿಗಳು ಪ್ರತಿ ಲೀಟರ್‌ಗೆ 13.8 ಕಿಲೋ ಮೀಟರ್ ಮೈಲೇಜ್ ನೀಡಲಿವೆ.

ಒಳ ವಿನ್ಯಾಸಗಳು

ಡಿ-ಮಾಕ್ಸ್ ವಿ-ಕ್ರಾಸ್ ಪೀಕ್ ಅಪ್ ಟ್ರಕ್ ಮಾದರಿಯ ಒಳವಿನ್ಯಾಸಗಳಂತೆಯೇ ಎಂಯುಎಕ್ಸ್‌ನ ಮಾದರಿಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಅಳವಡಿಸಲಾಗಿದೆ.

ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಂಯುಎಕ್ಸ್ ಮಾದರಿಯಲ್ಲಿ ಎಬಿಎಸ್, ಇಬಿಡಿ, ಇಎಸ್‌ಸಿ ಮತ್ತು ಪಾರ್ಕಿಂಗ್ ಕಂಟ್ರೋಲ್ ಹಿಂಬದಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಎಂಯುಎಕ್ಸ್ ಮಾದರಿಗಳನ್ನು ಪರಿಚಯ ಮಾಡಿರುವ ಇಸುಝು ಸಂಸ್ಥೆಯು, ಸದ್ಯ ಪೂರ್ವ ಮಾದರಿಗಳನ್ನು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಎಸ್‌ಯುವಿ ಮಾದರಿಗಳಾದ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಇಸುಝು ಎಂಯುಎಕ್ಸ್ ಮಾದರಿಗಳು ಮುಂಬರುವ ದಿನಗಳಲ್ಲಿ ಹೊಸ ದಾಖಲೆಯ ನಿರ್ಮಿಸುವ ತವಕದಲ್ಲಿದೆ.

Click to compare, buy, and renew Car Insurance online

Buy InsuranceBuy Now

Read more on ಇಸುಝು isuzu
Story first published: Thursday, May 11, 2017, 19:21 [IST]
English summary
Isuzu has launched its new SUV, the MU-X in India. The SUV is offered in 4x2 and 4X4 variants.
Please Wait while comments are loading...

Latest Photos