ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಜಾಗ್ವಾರ್ ಕಂಪನಿಯ ಕ್ರೀಡಾ ಬಳಕೆಯ ವಿದ್ಯುತ್ ಕಾರು ಲಂಡನ್ ಬೀದಿಗಳಲ್ಲಿ ಕಾಣಿಸಿಕೊಂಡಿದೆ.

By Girish

ಜಾಗ್ವಾರ್ ಕಂಪನಿಯೇ ಹಾಗೆ, ಹೊಸ ಅವಿಷ್ಕಾರಗಳೊಂದಿಗೆ ಯುವ ಸಮೂಹಕ್ಕೆ ಇಷ್ಟವಾಗುವಂತಹ ಕಾರುಗಳನ್ನು ಪರಿಚಯಿಸುತ್ತ, ತನ್ನ ಅಸ್ತಿತ್ವವನ್ನು ಮೊದಲಿನಿಂದಲೂ ಜೋಪಾನ ಮಾಡಿಕೊಂಡು ಬರುತ್ತಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಹಾಗಾದ್ರೆ ಜಾಗ್ವಾರ್ ಮತ್ತೆ ಹೊಸ ಕಾರಿನೊಂದಿಗೆ ಸುದ್ದಿ ಮಾಡುತ್ತಿದೆಯೇ ? ಎಂಬ ಪ್ರೆಶ್ನೆ ನಿಮ್ಮಲ್ಲಿ ಮೂಡಿದ್ದರೆ ಅದು ಖಂಡಿತ ಸರಿ ಆಗಿರುತ್ತದೆ. ಹೌದು, ನಮ್ಮ ನಿಮ್ಮೆಲ್ಲರ ನೆಚ್ಚಿನ ದುಬಾರಿ ಕಾರು ತಯಾರಕ ಕಂಪನಿ ಜಾಗ್ವಾರ್ ಈ ಬಾರಿ ಎಲೆಕ್ಟ್ರಿಕ್ ಐ-ಪೇಸ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

2018ರಲ್ಲಿ ಚೊಚ್ಚಲವಾಗಿ ಬಿಡುಗಡೆಗೊಳ್ಳಲು ಕಾದು ಕುಳಿತಿರುವ ಐ-ಪೇಸ್ ಕಾರು ಸದ್ಯ ಸ್ಟ್ರಾಟ್ಫೋರ್ಡ್ ನ ಹತ್ತಿರ ಇರುವ ಒಲಂಪಿಕ್ ಪಾರ್ಕ್ ಬಳಿ ಕಾಣಿಸಿಕೊಂಡಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಸಾಮಾನ್ಯ ರಸ್ತೆಯಲ್ಲಿ ಕಾರಿನ ಪ್ರಗತಿ ತಿಳಿಯುವ ದೃಷ್ಟಿಯಿಂದ ಈ ರೀತಿಯ ಪ್ರಯೋಗ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಕಂಪನಿ ಬಿಡುಗಡೆಗೊಳಿಸಿಲ್ಲ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಈ ಜಾಗ್ವಾರ್ ಐ-ಪೇಸ್ ಕ್ರೀಡಾ ಬಳಕೆಯ ಕಾರು ಹೆಚ್ಚಿನ ತಂತ್ರಜ್ಞಾನ ಪಡೆದುಕೊಂಡಿರುವ ಅತ್ಯದ್ಭುತವಾದ 90 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಬ್ರಿಟಿಷ್ ದೇಶದ ಹೆಮ್ಮೆಯ ಕಾರು ತಯಾರಕ ಕಂಪನಿ ತನ್ನ ಜಾಗ್ವಾರ್ ಐ-ಪೇಸ್ ಕಾರಿಗೆ ಅಳವಡಿಸಿರುವ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ಹೆಚ್ಚು ಕಡಿಮೆ 310 ಮೈಲಿ ಅಂದರೆ 500 ಕಿ.ಮೀ ಕ್ರಮಿಸುವಷ್ಟು ಕಾರ್ಯಕ್ಷಮತೆ ಪಡೆದುಕೊಂಡಿದ್ದು,

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

90 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಕಾರು ಗಂಟೆಗೆ 0 ಕಿಲೋಮೀಟರ್ ವೇಗದಿಂದ 100 ವೇಗವನ್ನು ಪಡೆಯಲು ಕೇವಲ ನಾಲ್ಕು ಸೆಕೆಂಡುಗಳಲ್ಲಿ ತೆಗೆದುಕೊಳ್ಳಲಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಬಲಿಷ್ಠತೆ ಮತ್ತು ಕಾರ್ಯಕ್ಷಮತೆ ಎರಡು ಹೊಂದಿರುವ ಈ ಜಾಗ್ವಾರ್ ಐ-ಪೇಸ್ ಕಾರು, ಕಾರು ಪ್ರಿಯರನ್ನು ತನ್ನತ್ತ ಸೆಳೆಯುವುದರಲ್ಲಿ ಖಂಡಿತ ಹಿಂದೆ ಬೀಳುವುದಿಲ್ಲ ಎಂಬ ನಂಬಿಕೆಯನ್ನು ಕಂಪೆನಿ ಹೊಂದಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಈಗಾಗಲೇ ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕಂಪನಿಯ 'ಎಸ್' ಆವೃತಿ ಮತ್ತು 'ಎಕ್ಸ್' ಆವೃತಿಗೆ ಈ ಐ-ಪೇಸ್ ಕಾರನ್ನು ಹೋಲಿಸಬಹುದಾಗಿದ್ದು, ಮುಂದಿನ ವರ್ಷ ಟೆಸ್ಲಾ ಕಂಪನಿ ಬಲಿಷ್ಠ ಪ್ರತಿಸ್ಪರ್ಧಿ ಪಡೆಯುವುದಕ್ಕೆ ಮಹೂರ್ತ ನಿಶ್ಚಯವಾಗಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಜಾಗ್ವಾರ್ ನಿರ್ಮಾಣದ ಈ ಚೊಚ್ಚಲ ಎಲೆಕ್ಟ್ರಿಕ್ ಐ-ಪೇಸ್ ಕಾರು ಎರಡು ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದ್ದು, ಇವುಗಳನ್ನು ಮುಂಭಾಗದಲ್ಲಿ ಮತ್ತು ರಿಯರ್ ಎಕ್ಸೆಲ್ ಮೇಲೆ ಇರಿಸಲಾಗುತ್ತದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ದುಬಾರಿ ಬೆಲೆಯ ಕಾರುಗಳ ನಿರ್ಮಾಣ ಮಾಡುವ ಜಾಗ್ವಾರ್ 700ಎನ್ಎಂ ತಿರುಗುಬಲದಲ್ಲಿ 396 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಎಲ್ಲಾ ಚಕ್ರಗಳಿಗೂ ಸಮನಾಗಿ ಶಕ್ತಿ ಒದಗಿಸಲಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು, 50 ಕಿಲೋವ್ಯಾಟ್ ಡಿಸಿ ಚಾರ್ಜ್ ಹೊಂದಿರಲಿದ್ದು, ಕೇವಲ 90 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಬ್ಯಾಟರಿಯನ್ನು ಭರ್ತಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.

ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!

ಸಾಮಾನ್ಯವಾಗಿ ಚೊಚ್ಚಲ ಉತ್ಪಾದನೆಯ ಕಾರುಗಳನ್ನು ಕಂಪನಿಗಳು ನೇರವಾಗಿ ರಸ್ತೆಯ ಮೇಲೆ ಇಳಿಸುವುದನ್ನು ಇಲ್ಲಿಯವರೆಗೂ ವಾಹನ ಕ್ಷೇತ್ರದಲ್ಲಿ ಯಾರು ಕಂಡಿಲ್ಲ, ಆದರೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರೊಂದು ಬಿಡುಗಡೆಗೂ ಮುನ್ನ ರಸ್ತೆ ಮೇಲೆ ಕಾಣಿಸಿಕೊಂಡಿದ್ದು, ಇದೂ ಕೂಡ ಒಂದು ಧಾಖಲೆ ಎನ್ನಬಹುದು.

ಅತಿ ಹೆಚ್ಚು ಜನರು ವೀಕ್ಷಿಸಿದ ಲೇಖನಗಳು ಈ ಕೆಳಗಿನಂತಿವೆ...

ಸ್ವಾರಸ್ಯಕರ ಲೇಖನಗಳು

ಸಾಯುವವರನ್ನು ಸೇವ್ ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಸ್ವಾರಸ್ಯಕರ ಲೇಖನಗಳು

ಕ್ಯಾಶ್‌ಲೆಸ್‌ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್‌ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!

ಸ್ವಾರಸ್ಯಕರ ಲೇಖನಗಳು

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

ಸ್ವಾರಸ್ಯಕರ ಲೇಖನಗಳು

ಶಾಪಿಂಗ್ ಮಾಡೋ ಭರಾಟೆಗೆ ಟ್ಯಾಕ್ಸಿಯಲ್ಲೇ ಮಗು ಮರೆತು ಹೋದ ಮಹಿಳೆ..!!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಸ್ವಾರಸ್ಯಕರ ಚಿತ್ರಗಳು

2017 ಟೊಯೊಟಾ ಪ್ರಿಯುಸ್ ಚಿತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Most Read Articles

Kannada
English summary
Jaguar I-Pace electric SUV hits the streets of London for the first time in road tests ahead of its 2018 debut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X