ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಈ ವಾರದ ಆರಂಭವಾದ 'ಕಂಪಾಸ್' ಎಸ್‌ಯುವಿ ಕಾರಿನ ಬುಕಿಂಗ್ ಮಾಡಲು ಹೆಚ್ಚು ಜನರು ಉತ್ಸುಕರಾಗಿದ್ದು, ಜೀಪ್ ಕಾರು ತಯಾರಕ ಸಂಸ್ಥೆ ಸೋಮವಾರದಿಂದ ಬುಕ್ ಮಾಡಲು ಅನುವು ಮಾಡಿಕೊಟ್ಟಿತ್ತು.

By Girish

ಹೌದು, ಭಾರತದಲ್ಲಿ ಇತ್ತೀಚೆಗೆ ಕಾರು ವಿಭಾಗದಲ್ಲಿ ಸದ್ದು ಮಾಡುತ್ತಿರುವ ಜೀಪ್ ಸಂಸ್ಥೆಯ ಮತ್ತೊಂದು ಕಾರು ಕಂಪಾಸ್ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ವಾರ ರೂ. 50,000 ನೀಡಿ ನಿಮ್ಮ ಕಾರನ್ನು ಖಾಯ್ದಿರಿಸಬಹುದು ಎಂದು ಕಂಪನಿ ತಿಳಿಸಿತ್ತು.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಕಂಪನಿಯ ವೆಬ್‌ಸೈಟ್ ಮತ್ತು ಜೀಪ್ ಕಾರಿನ ಅಧಿಕೃತ ವಿತರಕರ ಮೂಲಕ ಬುಕಿಂಗ್ ಸ್ವೀಕರಿಸಲಾಗುತ್ತಿದೆ ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಜೀಪ್ ಕಂಪಾಸ್ ಎಸ್‌ಯುವಿ ಕಾರು ಭಾರತದಲ್ಲಿ ಎರಡು ತಿಂಗಳ ಹಿಂದೆ ಅನಾವರಣಗೊಂಡಿದೆ ಮತ್ತು ಪುಣೆ ಸಮೀಪದ ಕಂಪೆನಿಯ ರಂಜನ್‌ಗಾವ್ನ್ ಘಟಕದಲ್ಲಿ ತಯಾರಿಸಲಿದೆ.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಕಂಪೆನಿಯು ಈ ಎಸ್‌ಯುವಿ ಬುಕಿಂಗ್ ಪ್ರಾರಂಭಿಸಿದ ನಂತರ ಮೂರು ದಿನಗಳಲ್ಲಿ ಸರಿ ಸುಮಾರು 1,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ ಮತ್ತು ಬುಕಿಂಗ್ ಸಂಖ್ಯೆಯು ಭಾರತೀಯ ಮಾರುಕಟ್ಟೆಯಲ್ಲಿ ಅದರ ಜನಪ್ರಿಯತೆಯನ್ನು ಒತ್ತಿಹೇಳುತ್ತದೆ.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಭಾರತದಲ್ಲಿ ತಯಾರಿಸಲಾದ ಮೊದಲ ಕಾರು ಜೀಪ್ ಕಂಪಾಸ್ ಆಗಿದ್ದು, ಬಲಬದಿಯ ಚಾಲನೆ ನಿಯಮ ಹೊಂದಿರುವ ಜಪಾನ್, ಯುಕೆ ಮತ್ತು ದಕ್ಷಿಣ ಆಫ್ರಿಕಾ ಮುಂತಾದ ಮಾರುಕಟ್ಟೆಗಳಿಗೆ ಈ ಕಾರನ್ನು ರಫ್ತು ಮಾಡಲಾಗುತ್ತದೆ.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ಈ ಕಾರು ನಾಲ್ಕು ಸಿಲಿಂಡರ್ ಹೊಂದಿರುವ 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಕೇವಲ ಮೂರು ದಿನಗಳಲ್ಲಿ 1000 ಜೀಪ್ ಕ್ಯಾಂಪಸ್ ಕಾರುಗಳು ಬುಕ್ ಆದ್ವು

ನಾಲ್ಕು ಚಕ್ರ ಚಾಲನಾ ವ್ಯವಸ್ಥೆ ಹೊಂದಿರುವ ಕಾರು ಇದಾಗಿದ್ದು, ಟೆರೇನ್ ರೆಸ್‌ಪಾನ್ಸ ಸಿಸ್ಟಮ್ ವ್ಯವಸ್ಥೆಯನ್ನು ಸ್ವೀಕರಿಸುತ್ತದೆ.

Most Read Articles

Kannada
Read more on ಜೀಪ್ jeep
English summary
Jeep company has received above 1000 bookings for the Compass just three days after it announced it had started bookings for the SUV
Story first published: Saturday, June 24, 2017, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X