ಬರಲಿದೆ ಪರಿಸರ ಸ್ನೇಹಿ ಮಹೀಂದ್ರಾ ಎಲೆಕ್ಟ್ರಿಕ್ ಕಾರು- ವಾಯುಮಾಲಿನ್ಯಕ್ಕೆ ಬಿಳಲಿದೆ ಬ್ರೇಕ್..!!

Written By:

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಮಹೀಂದ್ರಾ ಮೊದಲ ಎಲೆಕ್ಟ್ರಿಕ್ ಕಾರು ಹಲವು ವೈಶಿಷ್ಟ್ಯತೆಗಳಿಂದ ಕೂಡಿಕೊಂಡಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಳ್ಳುವ ತವಕದಲ್ಲಿದೆ.

ವಾಯುಮಾಲಿನ್ಯ ತಡೆಗಟ್ಟು ನಿಟ್ಟಿನಲ್ಲಿ ಕೆಲವು ವಿನೂತನ ವೈಶಿಷ್ಟ್ಯತೆಗಳನ್ನು ಹೊಂದಿರುವ ಮಹೀಂದ್ರಾ ಎಲೆಕ್ಟ್ರಿಲ್ ಕಾರು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟಲಿದೆ. ವಿನೂತನ ಕಾರಿನ ಬೆಲೆಯನ್ನು ರೂ. 8 ರಿಂದ 10 ಲಕ್ಷ ಎಂದು ನೀರಿಕ್ಷೆ ಮಾಡಲಾಗಿದೆ.

ಇನ್ನು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ದೇಶದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ವಿನೂತನವಾಗಿ ಸಿದ್ಧಗೊಳ್ಳುತ್ತಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಾರು ಮಾದರಿಗೂ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ.

ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಎಲೆಕ್ಟ್ರಿಲ್ ಕಾರುಗಳು ಜನಪ್ರಿಯಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮಹೀಂದ್ರಾ ಕೂಡಾ ಹೊಸ ಆಶಾಭಾವನೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರ್‌ಗಳನ್ನು ಪರಿಚಯ ಮಾಡುತ್ತಿದೆ.

ಪರಿಸರ ಮಾಲಿನ್ಯವನ್ನು ತಡೆಗಟ್ಟು ನಿಟ್ಟಿನಲ್ಲಿ ಕೆಲವು ವಿಶೇಷ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಈ ಬಗ್ಗೆ ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯಂಕಾ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹೀಂದ್ರಾ ವಿನೂತನ ಎಲೆಕ್ಟ್ರಿಕ್ ಕಾರು ಸಿದ್ದಗೊಂಡಿದೆ. ಹೀಗಾಗಿ ಎಲೆಕ್ಟ್ರಿಲ್ ಮಾದರಿಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ.

ಈಗಾಗಲೇ ಎಲೆಕ್ಟ್ರಿಲ್ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಾಕಷ್ಟು ತಯಾರಿ ಮಾಡಿಕೊಂಡಿರುವ ಮಹೀಂದ್ರಾ, ಮುಂಬರುವ ಆರ್ಥಿಕ ವರ್ಷಾವಧಿಯಲ್ಲಿ ಬಿಡುಗಡೆಗೊಳಿಸಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊರ ಮತ್ತು ಒಳ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ಎಲೆಕ್ಟ್ರಿಕ್ ಕಾರುಗಳ ಖರೀದಿಯ ಯೋಚನೆಯಲ್ಲಿದ್ದರೆ ಟೆಸ್ಲಾ ಮಾದರಿಯ ಕಾರುಗಳ ಚಿತ್ರಗಳಿಗಾಗಿ ಈ ಕೂಡಲೇ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Mahindra is developing affordable electric cars for the masses, priced between Rs 8 to 10 lakh. There is a possibility of an SUV too.
Please Wait while comments are loading...

Latest Photos