ಬಿಡುಗಡೆಗೊಂಡ ಸ್ಕಾರ್ಪಿಯೊ ಅಡ್ವೆಂಚರ್ ಸ್ಪೋರ್ಟ್ಸ್ 2017 ಕಾರು: ರೂ. 13.10 ಲಕ್ಷ ಕಾರಿನ

Written By:

ದೈತ್ಯ ಎಸ್‌ಯುವಿ ಕಾರು ತಯಾರಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಸ್ಕಾರ್ಪಿಯೊ 2017 ಅಡ್ವೆಂಚರ್ ಸ್ಪೋರ್ಟ್ಸ್ ಸೀಮಿತ ಆವೃತಿಯನ್ನು ಬಿಡುಗಡೆಗೊಳಿಸಿದೆ.

ಕಳೆದ ವರ್ಷ ಅಮೋಘವಾಗಿ ಬಿಡುಗಡೆಗೊಂಡು ಹೆಚ್ಚು ಸದ್ದು ಮಾಡಿದ್ದ ಮಹೀಂದ್ರ ಕಂಪನಿಯ ಈ ಕಾರು ಇಂದು ಬಿಡುಗಡೆಗೊಂಡಿದ್ದು, ಬಹಳಷ್ಟು ಕ್ರೀಡಾ ಬಳಕೆಯ ಅಂಶಗಳನ್ನು ಈ ಕಾರು ಪಡೆದುಕೊಂಡಿದೆ.

ಸದ್ಯ ಬಿಡುಗಡೆಗೊಂಡಿರುವ ಈ ಸೀಮಿತ ಆವೃತಿ ಕಾರಿನ ಟೂ-ವೀಲ್ ಡ್ರೈವ್ ಆವೃತಿಯ ಕಾರು ರೂ. 13.10 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.( ಎಕ್ಸ್ ಷೋ ರೂಂ ದೆಹಲಿ )

ಇನ್ನು ಈ ಕಾರಿನ ಮತ್ತೊಂದು ಮಾದರಿಯಾದ ಫೋರ್-ವೀಲ್ ಡ್ರೈವ್ ಆವೃತಿಯ ಕಾರು ರೂ. 14.20 ಲಕ್ಷ ಬೆಲೆ ಇರಲಿದೆ. ( ಎಕ್ಸ್ ಷೋ ರೂಂ ದೆಹಲಿ )

2.2-ಲೀಟರ್ ಟರ್ಬೊ ಚಾರ್ಜ್ಡ್ ಎಂ-ಹಾಕ್ ಎಂಜಿನ್ ಆಯ್ಕೆಯೊಂದಿಗೆ ಅನಾವರಣಗೊಂಡಿರುವ ಈ ಮಹೀದ್ರ ಸ್ಕಾರ್ಪಿಯೊ ಅಡ್ವೆಂಚರ್ ಕಾರು 280ಏನ್ಎಂ ತಿರುಗುಬಲದಲ್ಲಿ 120 ಅಶ್ವಶಕ್ತಿ ಉತ್ಪಾದಿಸಲಿದೆ.

ಸಾಮಾನ್ಯ ಮಾದರಿಯ ಸ್ಕಾರ್ಪಿಯೊ ಕಾರಿನ ಮೇಲ್ದರ್ಜೆಯ ಕಾರಿಗಿಂತ ಸರಿ ಸುಮಾರು 40,000 ರೂ ಬೆಲೆ ಹೆಚ್ಚಿಗೆ ಇರಲಿದೆ.

ಈ ಕ್ರೀಡಾ ಬಳಕೆಯ ಸ್ಕಾರ್ಪಿಯೊ ಕಾರು 2.2-ಲೀಟರ್ ಟರ್ಬೊ ಚಾರ್ಜ್ಡ್ ಎಂಹಾಕ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದ್ದು, ಹೆಚ್ಚು ಬಲಿಷ್ಠ ಎಸ್‌ಯುವಿ ಕಾರು ಎನ್ನಿಸಿದೆ.

ಸದ್ಯ ಬಿಡುಗಡೆಗೊಂಡಿರುವ ಈ ಸೀಮಿತ ಆವೃತಿ ಕಾರಿನ ಟೂ-ವೀಲ್ ಡ್ರೈವ್ ಆವೃತಿಯ ಕಾರು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿದೆ.

ಇತ್ತೀಚಿಗೆ ಸ್ಪೋರ್ಟ್ಸ್ ಕಾರುಗಳಲ್ಲಿ ಉಪಯೋಗಿಸುವಂತಹ ಸ್ಮೋಕ್ ಟೈಲ್ ಲ್ಯಾಂಪ್, ಓಆರ್‌ವಿಎಂ‌(ORMVs)ಗಳಲ್ಲಿ ಇಂಡಿಕೇಟರ್‌ಗಳನ್ನು ನೀಡಲಾಗಿದ್ದು, ಗನ್‌ಮೆಟಲ್ ಕೋಟಿಂಗ್ ಹೊಂದಿರುವ 17 ಇಂಚಿನ ಅಲಾಯ್ ವೀಲುಗಳನ್ನು ಈ ಕಾರು ಹೊಂದಿದೆ.

ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಬದಲಾವಣೆಗೊಂಡಿದ್ದು, ಹೆಚ್ಚು ಸ್ಪೋರ್ಟ್ಸ್ ಲುಕ್ ಪಡೆದುಕೊಂಡಿವೆ.

ಈ ಲಿಮಿಟೆಡ್ ಆವೃತಿಯ ಮಹೀಂದ್ರ ಸ್ಕಾರ್ಪಿಯೊ ಅಡ್ವೆಂಚರ್ ಸ್ಪೋರ್ಟ್ಸ್ ಕಾರು ಎರಡು ಮಿಶ್ರಿತ ಬಣ್ಣಗಳಲ್ಲಿ ನಿಮ್ಮ ಮುಂದೆ ಬಂದಿದ್ದು ಹೆಚ್ಚು ಗ್ರಾಫಿಕ್ಸ್ ಅಂಶಗಳನ್ನು ಹೊಂದಿದೆ.

Story first published: Wednesday, April 5, 2017, 18:51 [IST]
English summary
Mahindra Scorpio Adventure Edition launched in India. The Mahindra Scorpio Adventure will be a limited edition vehicle.
Please Wait while comments are loading...

Latest Photos