ಎಕ್ಸ್‌ಯುವಿ ಪ್ರಿಯರಿಗೊಂದು ಸಿಹಿ ಸುದ್ದಿ; ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಆವೃತಿ ಬಿಡುಗಡೆ

Written By:

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದೆ ಆರು ವರ್ಷಗಳಿಂದ ಮಹೀಂದ್ರ ಕಂಪನಿಯ ಎಕ್ಸ್‌ಯುವಿ ವಾಹನ ಭಾರತದ ರಸ್ತೆಗಳ ಮೇಲೆ ಮಾಡಿದ ಮೋಡಿ ಅಷ್ಟ್ ಇಷ್ಟ್ ಅಲ್ಲ, 2011ರಲ್ಲಿ ಬಿಡುಗಡೆಗೊಂಡ ಈ ವಾಹನ ಎಲ್ಲರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಂತೂ ಖಂಡಿತ. ಈಗ ಎಕ್ಸ್‌ಯುವಿ ಪ್ರಿಯರಿಗೊಂದು ಒಳ್ಳೆ ಸುದ್ದಿ ಇದೆ, ಅದೇನಪ್ಪ ಅಂದ್ರೆ...?

ಮಹೀಂದ್ರ ಕಂಪನಿಯು ಎಕ್ಸ್‌ಯುವಿಯ ಅಪ್ಡೇಟೆಡ್ ಸ್ಪೋರ್ಟ್ಸ್ ವರ್ಷನ್ ಬಿಡುಗಡೆಗೊಳಿಸಿದೆ. W10 ಟ್ರಿಮ್ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗಿದ್ದು, ಮಾನ್ಯುಯಲ್ ವೆರಿಯೆಂಟ್ ಬೆಲೆ 16.5 ಲಕ್ಷ ಮತ್ತು 17.56 ಲಕ್ಷ (ಮುಂಬೈ ಎಕ್ಸ್ ಶೋ ರೂಮ್ ಬೆಲೆ) ನಿಗದಿಪಡಿಸಲಾಗಿದೆ. ಮಹೀಂದ್ರ ಎಕ್ಸ್‌ಯುವಿ500 ಕಾಸ್ಮಟಿಕ್ ಆಡಿಷನ್ ಆಗಿದ್ದು, ಸ್ಪೋರ್ಟ್ ಲುಕ್ ಹೊಂದಿದೆ, ಕಾಡ ಕಪ್ಪು ಬಣ್ಣದ ಅಲಾಯ್ ವೀಲ್ಸ್ ಹೊಂದಿರುವ ವಾಹನ ಇದಾಗಿದ್ದು, ಕೆಂಪು ಬಣ್ಣದ ಬ್ರೇಕ್ ಕ್ಯಾಲಿಪರ್ಸ್ ಹೊಂದಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಈ ವಾಹನದ ವಿಶೇಷತೆ ಏನೆಂದರೆ ರೂಫ್ ರೈಲ್ಸ್, ಡೋರ್ ಹ್ಯಾಂಡಲ್ಸ್ ಮತ್ತು ಫಾಗ್ ಲ್ಯಾಂಪ್ಸ್ ಗಳು ಕಿತ್ತಳೆ ಬಣ್ಣದಿಂದ ಸಿಂಗಾರಗೊಂಡು ವಾಹನಕ್ಕೆ ಹೆಚ್ಚು ಮೆರುಗು ತಂದುಕೊಡುವಲ್ಲಿ ಯಶಸ್ವಿಯಾಗಿವೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಈ ಎಕ್ಸ್‌ಯುವಿ 500 ಎಲ್ಲರ ಮನ ಗೆಲ್ಲುವುದರಲ್ಲಿ ಅನುಮಾನವಿಲ್ಲ.

 ಇದು ಸ್ಪೋರ್ಟ್ಸ್ ಎಡಿಷನ್ ಆಗಿರುವುದರಿಂದ ವಾಹನದ ಒಳಗಡೆ ಹೆಚ್ಚು ಕಂಫರ್ಟ್ ಫೀಚರ್ಸ್ ನೀಡಲಾಗಿದ್ದು, 7 ಇಂಚು ಇರುವ ಟಚ್ ಸ್ಕ್ರೀನ್ ಪರದೆ, ಬ್ಲೂಟೂತ್/ಐಪಾಡ್/ಯುಎಸಬಿ ಕನೆಕ್ಟಿವಿಟಿ, ನೇವಿಗೇಶನ್, ರಿವರ್ಸ್ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇವೆಗಳಿರಲಿದೆ.

ಅದೂ ಅಲ್ಲದೆ ಟೈಯರ್ ಪ್ರೆಷರ್ ನಿಯಂತ್ರಣ ತಂತ್ರಜ್ಞಾನ, ಮಳೆಗೆ ತಂತಾನೆ ಚಾಲನೆಗೊಳ್ಳುವ ವೈಪರ್ಸ್, ಮತ್ತು ಕತ್ತಲಾಗುತ್ತಿದ್ದಂತೆ ಸ್ವಯಂಚಾಲನೆ ಗೊಳ್ಳುವ ಹೆಡ್ ಲೈಟಿಂಗ್ ವ್ಯವಸ್ಥೆ ಮತ್ತು ಇತರ ಸುರಕ್ಷತೆಗಳ ಬಗ್ಗೆ ಹೆಚ್ಚು ಓತ್ತು ನೀಡಲಾಗಿದೆ.

ಮಹೀಂದ್ರ ಎಕ್ಸ್‌ಯುವಿ500 ಸ್ಪೋರ್ಟ್ಸ್ ಅತ್ಯುತ್ತಮವಾದ 2.2-ಲೀಟರ್ಸ್ ಇಂಜಿನ್ ತಂತ್ರಜ್ಞಾನ ಹೊಂದಿದ್ದು, ನಾಲ್ಕು ಸಿಲಿಂಡರ್ ನ ಟರ್ಬೊ ಚಾರ್ಜ್ಡ್ ಡೀಸೆಲ್ ಇಂಜಿನ್ ಹೊಂದಿದ್ದು, 330 ಎನ್ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

6-ಸ್ಪೀಡ್ ಮಾನ್ಯುಯಲ್ ಅಥವ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಂಬ ಎರಡು ರೀತಿಯ ಗೇರ್ ಬಾಕ್ಸ್ ಗಳಲ್ಲಿ ಈ ವಾಹನ ಬಿಡುಗಡೆಗೊಳ್ಳುತ್ತಿದ್ದು, ನಿಮಗೆ ಬೇಕಾದ ರೀತಿಯ ಗೇರ್ ಬಾಕ್ಸ್ ಆಯ್ದುಕೊಳ್ಳಬಹುದಾಗಿದೆ. ಮತ್ತೊಂದು ಖುಷಿಯ ವಿಚಾರವೆಂದರೆ ಈಗಿರುವ ಮಾದರಿಯ ವಾಹನದ ಬೆಲೆಗಿಂತ ರೂ. 1000 ಹೆಚ್ಚು ಪಾವತಿಸಿದರೆ ಸ್ಪೋರ್ಟ್ಸ್ ಆವೃತಿ ನಿಮ್ಮ ಕೈ ಸೇರುತ್ತದೆ.

ಎಲ್ಲಾ ರೀತಿಯಲ್ಲೂ ಎಕ್ಸ್‌ಯುವಿ500 ಒಂದು ಅತ್ಯುತ್ತಮ ವಾಹನವಾಗಿದ್ದು,
ಹಿಂದಿನ ಆವೃತಿಗೆ ಹೋಲಿಸಿದರೆ ಎಕ್ಸ್‌ಯುವಿ500 ಸ್ಪೋರ್ಟ್ಸ್ ಕೊಂಚ ದುಬಾರಿಯಾದರೂ ಸಹ ಹೆಚ್ಚು ಗುಣ ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುವುದಂತೂ ಖಂಡಿತ.

ಮಹೀಂದ್ರ ಎಕ್ಸ್‌ಯುವಿ 500 ಹೆಚ್ಚು ಫೋಟೋಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕಿಸಿ.

Story first published: Tuesday, February 7, 2017, 15:45 [IST]
English summary
Mahindra XUV500 Sportz Edition launched in India.
Please Wait while comments are loading...

Latest Photos