ಮಾರುತಿ ನೆಕ್ಸಾ ಶೋರಂನಲ್ಲಿ ಅಗ್ನಿ ಅವಘಡ- ಇಬ್ಬರು ಸಜೀವ ದಹನ

Written By:

ಮಾರುತಿ ನೆಕ್ಸಾ ಕಾರು ಶೋರಂನಲ್ಲಿ ಸಂಭವಿಸಿದ ಅಗ್ನಿಅವಘಡದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬೆಳ್ಳಂಬೆಳಗ್ಗೆ 5 ಗಂಟೆಗೆ ಈ ಘಟನೆ ನಡೆದಿದ್ದು, ಕಾರು ಶೋರಂನಲ್ಲಿ ತಂಗಿದ್ದ ಇಬ್ಬರು ಕಾರ್ಮಿಕರು ಅಗ್ನಿ ಅವಘಡದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ.

ಇನ್ನು ಬೆಂಕಿಯ ಕೆನ್ನಾಲಿಗೆಯನ್ನು ತಡೆಯಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ಅವಘಡದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಪಟ್ಟ ಸಾಹಸ ಅಷ್ಟಿಷ್ಟಲ್ಲ.

ಅದರ ಹೊರತಾಗಿಯೂ ಇಬ್ಬರು ಕಾರ್ಮಿಕರು ಬೆಂಕಿ ಜ್ವಾಲೆಗೆ ಶೋರಂ ಒಳಭಾಗದಲ್ಲೇ ಬೆಂದು ಹೋಗಿದ್ದು, ಸಾವನ್ನಪ್ಪಿದ ಕಾರ್ಮಿಕರು ಯಾರು ಎಂಬುದು ಇನ್ನು ಪತ್ತೆಯಾಗಿಲ್ಲವಾದರೂ ಸೆಕ್ಯೂರಿಟಿ ಗಾರ್ಡ್ ಎಂಬುವುದು ಮಾತ್ರ ತಿಳಿದು ಬಂದಿದೆ.

ಈ ಮಧ್ಯೆ ಘಟನೆ ನಡೆಯುತ್ತಿದ್ದಂತೆ ಶೋರಂ ಮಾಲೀಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ತನಿಖೆ ನಡೆಸಿದ್ದಾರೆ. ಹೀಗಾಗಿ ಘಟನೆಗೆ ಮಾಲೀಕನ್ನೇ ಹೊಣೆ ಮಾಡಲಾಗಿದ್ದು, ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ಆದ್ರೆ ಅದೇನೇ ಇರಲಿ ಶೋರಂನಲ್ಲಿ ಸರಿಯಾದ ಸುರಕ್ಷಾ ಕ್ರಮ ಇದ್ದಿದ್ದರೇ ಇಬ್ಬರು ಅಮಾಯಕರ ಜೀವ ಉಳಿಯುತ್ತಿತ್ತು. ಹೀಗಾಗಿ ಇಗಲಾದ್ರೂ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕಿರುವ ಪೊಲೀಸರು, ಇಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.

Click to compare, buy, and renew Car Insurance online

Buy InsuranceBuy Now

Read more on ಬೆಂಕಿ fire
Story first published: Tuesday, April 25, 2017, 12:29 [IST]
English summary
A Maruti Nexa showroom in Mumbai catches fire due to reasons unknown and claims the life of two.
Please Wait while comments are loading...

Latest Photos