ಫೇಸ್‌ಲಿಫ್ಟ್ ಆವೃತಿಯ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಈ ವರ್ಷ ಬಿಡುಗಡೆ

Written By:

2014ರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಅಮೋಘವಾಗಿ ಭಾರತದಲ್ಲಿ ಬಿಡುಗಡೆ ಮಾಡಿದ ಈ ಸೆಲೆರಿಯೊ ಕಾರು, ಭಾರತದ ರಸ್ತೆಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಸುಳ್ಳಲ್ಲ. ಸತತ ನಾಲ್ಕು ವರ್ಷಗಳಿಂದ ಜನರ ವಿಶ್ವಾಸ ಗಳಿಸಿರುವ ಕಾರು ಫೇಸ್‌ಲಿಫ್ಟ್ ಅಂಶಗಳನ್ನು ಪಡೆದು ಮತ್ತೆ ರಸ್ತೆಗಿಳಿಯಲಿದೆ.

ಕಳೆದ 4 ವರ್ಷಗಳಿಂದ ವಾಹನ ಉದ್ಯಮ ಹೆಚ್ಚು ಬೆಳವಣಿಗೆ ಕಂಡಿದ್ದು, ಪ್ರಸ್ತುತ ಹೆಚ್ಚು ನವ ಪೀಳಿಗೆಯ ಮಾದರಿಗಳೊಂದಿಗೆ ಸ್ಪರ್ಧಿಸಲು ಸೆಲೆರಿಯೊ ಕಾರಿಗೆ ಖಂಡಿತವಾಗಿಯೂ ಒಂದು ಬದಲಾವಣೆ ಬೇಕು ಎನ್ನುವ ನಿಟ್ಟಿನಲ್ಲಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಬಲ್ಲ ಮೂಲಗಳ ಪ್ರಕಾರ ಸೆಲೆರಿಯೊ ಫೇಸ್ ಲಿಫ್ಟ್ ಆವೃತಿಯೂ ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಈ ವರ್ಷದ ಹಬ್ಬದ ಋತುವಿನಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಎಲ್ಲಾ ವಿಶೇಷತೆಗಳನ್ನು ಉನ್ನತೀಕರಿಸಲು ಕಂಪನಿ ನಿರ್ಧರಿಸಿದ್ದು, ಈ ಅಂಶ ಕಾರು ಮಾರಾಟ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.

ಎಲ್-ಆಕಾರ ಇರುವ ಡಿಆರ್‌ಎಲ್s, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಕ್ರೋಮ್ ಒಳಗೊಂಡಿರುವ ಫಾಗ್‌ಲ್ಯಾಂಪ್ ಹೊಂದಿರುವ ಹೊಸ ಸೆಲೆರಿಯೊ ಕಾರು ಈ ವರ್ಷ ಬಿಡುಗಡೆಗೊಳ್ಳಲಿದೆ.

2013ರಲ್ಲಿ ಪ್ರದರ್ಶಿಸಲಾಗಿದ್ದ ಎ-ವಿಂಡ್ ಪರಿಕಲ್ಪನೆಯನ್ನು ಆಧರಿಸಿ ಈ ಕಾರನ್ನು ಆಧುನಿಕಗೊಳಿಸುಲು ಉದ್ದೇಶಿಸಿದ್ದು, ಕಾರಿನ ಮುಂಭಾಗದ ಹೆಚ್ಚು ಬದಲಾವಣೆ ಹೊಂದಲಿದೆ.

ಸುಧಾರಿತ ಸೆಲೆರಿಯೊ ಕಾರಿನ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆದುಕೊಳ್ಳಲಿದ್ದು, ರೆನಾಲ್ಟ್ ಕ್ವಿಡ್ ಕಾರಿಗೆ ಸ್ಪರ್ಧಿಸಲಿದೆ.

1-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸೆಲೆರಿಯೊ 90 ಎನ್ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿ ಉತ್ಪಾದಿಸಲಿದೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಸೆಲೆರಿಯೊ ಕಾರು ರೆನಾಲ್ಟ್ ಕ್ವಿಡ್, ಟಾಟಾ ಟಿಯೊಗೊ, ನಿಸ್ಸಾನ್ ಮೈಕ್ರಾ, ಹೊಂಡಾ ಬ್ರಿಯೊ ಕಾರುಗಳೊಂದಿಗೆ ಸ್ಪರ್ದಿಸಲಿದೆ.

Click to compare, buy, and renew Car Insurance online

Buy InsuranceBuy Now

English summary
Reada in Kannada about Maruti Suzuki Celerio facelift car launch details revealed. Know about this facelift car, milage, specifications and more
Please Wait while comments are loading...

Latest Photos