ಮಾರುತಿ ಸುಜುಕಿ ಡಿಜೈರ್ v/s ಟಾಟಾ ಟಿಗೋರ್- ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಖರೀದಿಗೆ ಯಾವುದು ಉತ್ತಮ?

Written By:

ಆಟೋಮೊಬೈಲ್ ಉದ್ಯಮದಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳು ಬಿಡುಗಡೆಗೊಳ್ಳುತ್ತಲೇ ಇರುತ್ತವೆ. ಆದ್ರೆ ಕೆಲವೇ ಕೆಲವು ಕಾರು ಮಾದರಿಗಳು ಮಾತ್ರ ಮಾಧ್ಯಮ ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಇದೀಗ ಮಾರುತಿ ಸುಜುಕಿ ಡಿಜೈರ್ ಮತ್ತು ಟಾಟಾ ಟಿಗೋರ್ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಹೊಸ ಕಾರುಗಳ ಸಂಪೂರ್ಣ ಚಿತ್ರಣ ಇಲ್ಲಿದೆ.

ಕೇವಲ ನಾಲ್ಕು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಡಿಜೈರ್ ಕಾರು ಖರೀದಿ ಭರಾಟೆ ಜೋರಾಗಿಯೇ ನಡೆದಿದ್ದು, ಈಗಾಗಲೇ ದಾಖಲೆಯ 33 ಸಾವಿರ ಬುಕ್ಕಿಂಗ್ ಆಗಿವೆ.

ಈ ಮಧ್ಯೆ ಟಾಟಾ ವಿನೂತನ ಶೈಲಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾಗಿರುವ ಟಿಗೋರ್ ಮಾದರಿಯೂ ಕೂಡಾ ಅತಿಹೆಚ್ಚು ಮಾರಾಟಗೊಳ್ಳುತ್ತಿದ್ದು, ಮಾರುತಿ ಡಿಜೈರ್‌ಗೆ ತೀವ್ರ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿದೆ.

ಹೀಗಾಗಿ ಮಾರುತಿ ಸುಜುಕಿ ಡಿಜೈರ್ ಮತ್ತು ಟಾಟಾ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಗಳ ನಡುವಿನ ಹೊಸ ವೈಶಿಷ್ಟ್ಯಗಳು ಮತ್ತು ಯಾವುದನ್ನು ಖರೀದಿ ಮಾಡಿದ್ರೆ ಸೂಕ್ತ ಎಂಬ ಬಗ್ಗೆ ಚರ್ಚಿಸಲಾಗಿದೆ.

ಡಿಜೈರ್ v/s ಟಿಗೋರ್- ವಿನ್ಯಾಸಗಳು

ಟಾಟಾ ಸ್ಟೈಲ್‌ಬ್ಯಾಕ್ ಮಾದರಿಯ ಟಿಗೋರ್ ವಿಶೇಷ ಹೊರ ವಿನ್ಯಾಸ ಹೊಂದಿದ್ದು, ಅಂತೆಯೇ ಡಿಜೈರ್ ಇದೇ ಮೊದಲ ಬಾರಿಗೆ ಸುಧಾರಿತ ತಂತ್ರಜ್ಞಾನಗಳೊಂದಿಗೆ ಹೊರಭಾಗದ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆಗೊಂಡಿದೆ.

ಡಿಜೈರ್ v/s ಟಿಗೋರ್- ಎಂಜಿನ್ ಸಾಮರ್ಥ್ಯ

ಮಾರುತಿ ಸುಜುಕಿ ಡಿಜೈರ್ ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು 1.2-ಲೀಟರ್ (82 ಬಿಎಚ್‌ಪಿ,113ಎನ್ಎಂ) ಹಾಗೂ 1.3-ಲೀಟರ್ ಡೀಸೆಲ್ (73ಬಿಎಚ್‌ಪಿ,190ಎನ್ಎಂ) ಎಂಜಿನ್ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಇನ್ನು ಟಾಟಾ ಟಿಗೋರ್ ಮಾದಿಯಲ್ಲಿ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಡಿಜೈರ್ v/s ಟಿಗೋರ್- ಮೈಲೇಜ್

ಡಿಜೈರ್ ಪೆಟ್ರೋಲ್ ಆವೃತ್ತಿ- 22 ಕಿ.ಮಿ(ಪ್ರ/ಲೀ)
ಡಿಜೈರ್ ಡೀಸೆಲ್ ಆವೃತ್ತಿ- 28.4 ಕಿ.ಮಿ(ಪ್ರ/ಲೀ)

ಟಿಗೋರ್ ಪೆಟ್ರೋಲ್ ಆವೃತ್ತಿ- 20.3 ಕಿ.ಮಿ(ಪ್ರ/ಲೀ)
ಟಿಗೋರ್ ಡಿಸೇಲ್ ಆವೃತ್ತಿ- 24.3 ಕಿ.ಮಿ(ಪ್ರ/ಲೀ)

ಡಿಜೈರ್ v/s ಟಿಗೋರ್- ವೈಶಿಷ್ಟ್ಯತೆಗಳು

ಡಿಜೈರ್ ಆವೃತ್ತಿಯೂ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಡೇ ಲೈಟ್ ರನ್ನಿಂಗ್ ಲೈಟ್, 15-ಇಂಚಿನ ಅಲಾಯ್ ಚಕ್ರಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಡಿಜೈರ್ v/s ಟಿಗೋರ್- ಸುರಕ್ಷಾ ಸಾಧನಗಳು

ಸ್ಟ್ಯಾಂಡರ್ಡ್ ಡ್ಯುಯಲ್ ಏರ್‌ಬ್ಯಾಗ್ ವ್ಯವಸ್ಥೆ ಹೊಂದಿರುವ ಡಿಜೈರ್, ಎಬಿಎಸ್ ಇಡಿಬಿ ತಂತ್ರಜ್ಞಾನ ಹೊಂದಿದೆ.

ಟಿಗೋರ್ ಮಾದರಿ ಕೂಡಾ ಡ್ಯುಯಲ್ ಏರ್‌ಬ್ಯಾಗ್ ಜೊತೆಗೆ ಎಬಿಎಸ್, ಇಡಿಬಿ ಮತ್ತು ಸಿಎಸ್‌ಸಿ ಸೌಲಭ್ಯ ಹೊಂದಿದೆ.

ಡಿಜೈರ್ v/s ಟಿಗೋರ್- ಬೆಲೆಗಳು

ಡಿಜೈರ್ ಬೆಲೆಗಳು (ಪೆಟ್ರೋಲ್ ಆವೃತ್ತಿ)
ಎಲ್‌ಎಕ್ಸ್‌ಐ -      ರೂ.5.45 ಲಕ್ಷ
ವಿಎಕ್ಸ್‌ಐ -         ರೂ.6.29 ಲಕ್ಷ
ವಿಎಕ್ಸ್‌ಐ ಎಜಿಎಸ್- ರೂ.6.76 ಲಕ್ಷ
ಝಡ್ಎಕ್ಸ್‌ಐ-        ರೂ.7.05 ಲಕ್ಷ
ಝಡ್ಎಕ್ಸ್‌ಐ ಎಜಿಎಸ್- ರೂ. 7.52 ಲಕ್ಷ
ಝಡ್‌ಎಕ್ಸ್ಐ ಪ್ಲಸ್-     ರೂ.7.94 ಲಕ್ಷ
ಝಡ್‌ಎಕ್ಸ್ಐ ಪ್ಲಸ್ ಎಜಿಎಸ್- ರೂ.8.41 ಲಕ್ಷ

ಡಿಜೈರ್ ಬೆಲೆಗಳು(ಡಿಸೇಲ್ ಆವೃತ್ತಿ)
ಎಲ್‌ಡಿಐ-         ರೂ. 6.45ಲಕ್ಷ
ವಿಡಿಐ-            ರೂ.7.29ಲಕ್ಷ
ವಿಡಿಐ ಎಜಿಎಸ್-  ರೂ.7.76ಲಕ್ಷ
ಝಡ್‌ಡಿಐ-        ರೂ. 8.05 ಲಕ್ಷ
ಝಡ್‌ಡಿಐ ಎಜಿಎಸ್- ರೂ.8.52 ಲಕ್ಷ
ಝಡ್‌ಡಿಐ ಪ್ಲಸ್-   ರೂ. 8.94 ಲಕ್ಷ
ಝಡ್‌ಡಿಐ ಪ್ಲಸ್ ಎಜಿಎಸ್- ರೂ. 9.41 ಲಕ್ಷ

ಟಿಗೋರ್ ಬೆಲೆಗಳು

ಟಿಗೋರ್ ಪೆಟ್ರೋಲ್ ಆವೃತ್ತಿ ಬೆಲೆ
ಎಕ್ಸ್‌ಇ -      ರೂ.4.70 ಲಕ್ಷ
ಎಕ್ಸ್‌ಟಿ-       ರೂ.5.41 ಲಕ್ಷ
ಎಕ್ಸ್‌ಝಡ್-   ರೂ.5.90 ಲಕ್ಷ
ಎಕ್ಸ್‌ಝಡ್ (ಓ)- ರೂ.6.19 ಲಕ್ಷ

ಟಿಗೋರ್ ಡಿಸೇಲ್ ಆವೃತ್ತಿಯ ಬೆಲೆಗಳು
ಎಕ್ಸ್ಇ-    ರೂ.5.60 ಲಕ್ಷ
ಎಕ್ಸ್‌ಟಿ-    ರೂ.6.31 ಲಕ್ಷ
ಎಕ್ಸ್‌ಝಡ್- ರೂ. 6.80 ಲಕ್ಷ
ಎಕ್ಸ್‌ಝಡ್(ಓ) ರೂ. 7.09 ಲಕ್ಷ

ಒಟ್ಟಿನಲ್ಲಿ ನಿಮ್ಮ ಬಜೆಟ್ ತಕ್ಕಂತೆ ಖರೀದಿಗೆ ಎರಡೂ ಮಾದರಿಗಳು ಉತ್ತಮವಾಗಿದ್ದು, ಡಿಜೈರ್ ಕಾರಿನ ಬೆಲೆಗಳು ಸ್ವಲ್ಪ ಮಟ್ಟಿಗೆ ದುಬಾರಿ ಎನಿಸಲಿವೆ. ಆದರೂ ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ವಿಚಾರದಲ್ಲಿ ಉತ್ತಮವಾಗಿದ್ದು, ಟಿಗೋರ್ ಮಾರಾಟಕ್ಕೆ ತೀವ್ರ ಪೈಪೋಟಿ ನೀಡಬಲ್ಲದಾಗಿವೆ.

Click to compare, buy, and renew Car Insurance online

Buy InsuranceBuy Now

Story first published: Friday, May 19, 2017, 13:02 [IST]
English summary
Compact sedan comparison: 2017 Maruti Suzuki Dzire vs Tata Tigor. We compare both compact sedans in terms of design, specs, features, safety, and more.
Please Wait while comments are loading...

Latest Photos