ಬಿಡುಗಡೆಗೊಂಡ ಸೀಮಿತ ಆವೃತಿಯ ಎರ್ಟಿಗಾ : ಆರಂಭಿಕ ಬೆಲೆ ರೂ. 7.85 ಲಕ್ಷ

ಮಾರುತಿ ಸುಜುಕಿ ಎರ್ಟಿಗಾ ಹೊಸ ಕಾರಿನ ಒಳಬಾಗ ಮತ್ತು ಹೊರಬಾಗವನ್ನು ಮತ್ತಷ್ಟು ಅಂದಗೊಳಿಸಿ ಮತ್ತೆ ಸೀಮಿತ ಆವೃತಿಯ ಎರ್ಟಿಗಾ ಕಾರನ್ನು ಬಿಡುಗಡೆಗೊಳಿಸಲಾಗಿದೆ.

Written By:

ಸುಮಾರು 4 ವರ್ಷಗಳ ಹಿಂದೆ ಅಂದರೆ 2012ರಲ್ಲಿ ಎರ್ಟಿಗಾ ಎಂಬ ಬಹು ಉದ್ದೇಶಿತ ಕಾರನ್ನು ಬಿಡುಗಡೆಗೊಳಿಸಿ 3 ಲಕ್ಷಕ್ಕೂ ಹೆಚ್ಚು ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಿದ ಶ್ರೇಯಸ್ಸು ಈ ಕಂಪನಿಗೆ ಸಲ್ಲುತ್ತದೆ.

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ, ಮಾರುತಿ ಸುಜುಕಿ ತನ್ನ ಜನಪ್ರಿಯ ಎರ್ಟಿಗಾ ಕಾರಿನ ಸೀಮಿತ ಆವೃತಿಯನ್ನು ಬಿಡುಗಡೆಗೊಳಿಸಿದೆ.

ಈಗ ಬಂದಿರುವ ಎರ್ಟಿಗಾ ಸೀಮಿತ ಆವೃತಿಯಲ್ಲಿಯೂ ಸಹ ಕಾರನ್ನು ಮತ್ತಷ್ಟು ಸುಂದರಗೊಳಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದು, ಹೆಚ್ಚು ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸದಾಗಿ ಆರಂಭಿಸಿರುವ ಲಿಮಿಟೆಡ್ ಆವೃತ್ತಿ ಎರ್ಟಿಗಾ ಹೊರಭಾಗವನ್ನು ಕ್ರೀಡಾ ಮಾದರಿಯ ವಾಹನದಂತೆ ಮಾರ್ಪಾಡು ಮಾಡಲಾಗಿದೆ.

ಕಾರಿನ ಸೀಮಿತ ಆವೃತ್ತಿಯಲ್ಲಿ ಅಲಾಯ್ ವೀಲ್ಸ್, ಕ್ರೋಮ್ ಫಾಗ್ ಲ್ಯಾಂಪ್ ಬಿಝೆಲ್ ಅಳವಡಿಸಿ, ಹೊರಭಾಗವನ್ನು ಎಕ್ಸ್‌ಕ್ವಿಸಿಟ್ ಮರೂನ್ ಎಂಬ ಹೊಸ ಬಣ್ಣ ಉಪಯೋಗಿಸಿ ಮೇಲ್-ಮೈಯನ್ನು ಕ್ರೋಮ್ ಆಕಾರದಲ್ಲಿ ಸಿದ್ದಪಡಿಸಲಾಗಿದೆ.

ಕಾರಿನ ಸ್ಟೇರಿಂಗ್ ಗೆ ಎರಡು ಬಣ್ಣಗಳನ್ನು ಉಪಯೋಗಿಸಿದ ಹೊದಿಕೆಯನ್ನು ಹಾಕಲಾಗಿದೆ.

ಪ್ರೀಮಿಯಂ ಸೀಟ್ ಕವರ್ ಗಳನ್ನು ಅಳವಡಿಸಲಾಗಿದ್ದು, ಕಾರಿನ ಒಳಗಡೆ ಮರದಿಂದ ವಿನ್ಯಾಸ ಮಾಡಿ ಹೆಚ್ಚು ಮೆರುಗು ಕೊಡುಲಾಗಿದೆ.

ಕಾರಿನ ಒಳಭಾಗದಲ್ಲಿ ಬಿಳಿ ಬಣ್ಣದ ಲ್ಯಾಂಪ್ ಅಳವಡಿಸಲಾಗಿದ್ದು, ಸುಖಕರ ಪ್ರಯಾಣಕ್ಕೆ ಕುಶನ್ ದಿಂಬುಗಳನ್ನು ನೀಡಲಾಗಿದೆ.

ವಿಎಕ್ಸ್‌ಐ ಮತ್ತು ವಿಡಿಐ ಎಂಬ ಎರಡು ಆವೃತಿಗಳಲ್ಲಿ ಬರುತ್ತಿರುವ ಎರ್ಟಿಗಾ, ಎಕ್ಸ್‌ಕ್ವಿಸಿಟ್ ಮರೂನ್, ಸಿಲ್ಕಿ ಸಿಲ್ವರ್ ಮತ್ತು ಸುಪೀರಿಯರ್ ವೈಟ್ ಎಂಬ ಮೂರು ಬಣ್ಣಗಳ ಕಾರನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ಎಕ್ಸಾಸರೀಸ್-ಗಳನ್ನೂ ಒಳಗೊಂಡು ಕಾರಿನ ಬೆಲೆಯನ್ನು ರೂ. 7.85 ಲಕ್ಷ ದಿಂದ 8.10 ಲಕ್ಷ ರೂ (ಎಕ್ಸ್ ಶೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಮಾರುತಿ ಕಂಪನಿಯ ಮತ್ತೊಂದು ಹೊಸ ಸ್ವಿಫ್ಟ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

English summary
Indian automaker Maruti Suzuki has launched the Limited Edition Ertiga with cosmetic updates on the exterior and the interior of the MPV.
Please Wait while comments are loading...

Latest Photos