ಮಾರುತಿ ಸುಜುಕಿ ವಿನೂತನ ಸ್ವಿಫ್ಟ್ ಡಿಜೈರ್ ಟೂರ್ ಕಾರು ಬಿಡುಗಡೆ

Written By:

ಮಾರುತಿ ಸುಜುಕಿ ಬಹುನಿರೀಕ್ಷಿತ ವಿನೂತನ ಸ್ವಿಫ್ಟ್ ಡಿಜೈರ್ ಟೂರ್ ಕಾರು ಬಿಡುಗಡೆಯಾಗಿದ್ದು, ಹೊಸ ಆವೃತ್ತಿಗಳ ಪ್ರಾರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.24 ಲಕ್ಷಕ್ಕೆ ಲಭ್ಯವಿದೆ.

ಸ್ವಿಫ್ಟ್ ಡಿಜೈರ್ ಕಾರಿನ ಬೆಲೆಗಳು
ಡಿಜೈರ್ ಟೂರ್ ಪೆಟ್ರೋಲ್ ಕಾರು-  ರೂ.5,24 ಲಕ್ಷ
ಡಿಸೈರ್ ಟೂರ್ ಡೀಸೆಲ್ ಕಾರು-    ರೂ. 5.99 ಲಕ್ಷ

ಹೊಸ ಕಾರಿನ ಮೇಲೆ ಭಾರೀ ಡಿಸ್ಕೌಂಟ್
ವಿನೂತನ ಸ್ವಿಫ್ಟ್ ಡಿಜೈರ್ ಕಾರುಗಳ ಮಾರಾಟದ ಮೇಲೆ ಭಾರೀ ಪ್ರಮಾಣ ಡಿಸ್ಕೌಂಟ್ ನೀಡಲಾಗುತ್ತಿದೆ. ಪೆಟ್ರೋಲ್ ಮಾದರಿಯ ಹೊಸ ಕಾರಿನ ಮೇಲೆ 40 ಸಾವಿರ ಆಫರ್ ಇದ್ದು, ಎಕ್ಸ್‌ಚೇಂಜ್ ಮಾಡುವುದಾರರೇ 20 ಸಾವಿರ ಡಿಸ್ಕೌಂಟ್ ದೊರಲಿದೆ.

ಇನ್ನು ಡೀಸೆಲ್ ಕಾರು ಆವೃತ್ತಿ ಮೇಲೂ 40 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಎಕ್ಸ್‌ಚೇಂಜ್ ಮಾಡುವುದಾದರೆ 40 ಸಾವಿರ ಡಿಸ್ಕೌಂಟ್ ಪಡೆಯಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಪೆಟ್ರೋಲ್ ಮಾದರಿ ಕಾರು ಆವೃತ್ತಿಯ 1.2-ಲೀಟರ್ ಸಾಮರ್ಥ್ಯ ಹೊಂದಿದ್ದು, 83 ಬಿಎಚ್‌ಪಿ ಮತ್ತು 155 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

1.3-ಲೀಟರ್ ಸಾಮರ್ಥ್ಯ ಹೊಂದಿರುವ ಡೀಸೆಲ್ ಆವೃತ್ತಿಯ ಕಾರು, 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಸ್ವಿಫ್ಟ್ ಡಿಜೈರ್ ವಿನ್ಯಾಸಗಳು
ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಯಾಗಿರುವ ಮಾರುತಿ ಸ್ವಿಫ್ಟ್ ಡಿಜೈರ್ ವಿನ್ಯಾಸಗಳು ಈ ಹಿಂದಿನ ಆವೃತ್ತಿಯನ್ನೇ ಹೋಲುತ್ತವೆ. ಜೊತೆಗೆ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆ ತರಲಾಗಿದೆ.

ಸ್ವಿಫ್ಟ್ ಡಿಜೈರ್ ಕಾರಿನ ಒಳವಿನ್ಯಾಸವು ಅದ್ಭುತವಾಗಿದ್ದು, ಡ್ಯುಯಲ್ ಟೋನ್ ಬ್ಲ್ಯಾಕ್, ಪವರ್ ವಿಂಡೋ ಮತ್ತು ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪೈ ವ್ಯವಸ್ಥೆ ಹೊಂದಿದೆ.

ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಾರಿನ ಸೀಟುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಬೀಜ್ ಫ್ಯಾಬ್ರಿಕ್ ಅಳವಡಿಕೆ ಕೂಡಾ ಹೊಂದಿದೆ.

ಒಟ್ಟಿನಲ್ಲಿ ಪ್ರಸ್ತುತ ಮಾದರಿಗಳಿಗೆ ತೀವ್ರ ಸ್ವರ್ಧೆ ಒಡ್ಡಲು ಸಜ್ಜುಗೊಂಡಿರುವ ಹೊಚ್ಚ ಹೊಸ ಸ್ವಿಫ್ಟ್ ಡಿಜೈರ್ ಕಾರು ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿ ಲಭ್ಯವಿದೆ.

Click to compare, buy, and renew Car Insurance online

Buy InsuranceBuy Now

Story first published: Saturday, April 22, 2017, 13:24 [IST]
English summary
Maruti Suzuki Dzire Tour launched in Indian Market.
Please Wait while comments are loading...

Latest Photos