ಇನ್ಮೇಲೆ ಪಿಜ್ಜಾ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಡೆಲಿವರಿ ಬಾಯ್ ಬರಲ್ಲ...

Written By:

ಪ್ರಪಂಚದ ಐಷಾರಾಮಿ ಕಾರು ತಯಾರಕ ದೈತ್ಯ ಮರ್ಸಿಡಿಸ್ ಬೆನ್ಜ್ ಡ್ರೋನ್ ಮೂಲಕ ಸಾಮಾನು ಅಥವಾ ಪೊಟ್ಟಣಗಳನ್ನು ನಿಗದಿ ಪಡಿಸಿದ ಸ್ಥಳಕ್ಕೆ ತಲುಪಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಹಣ ವ್ಯಾಯ ಮಾಡುತ್ತಿದೆ.

ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನೂತನ ತಂಡವೊಂದನ್ನು ಕಟ್ಟಿರುವ ಮರ್ಸಿಡಿಸ್ ಬೆನ್ಜ್ ಈ ಮೂಲಕ ಚಾಲಕ ರಹಿತ ಸಾಮಾನು ತಲುಪಿಸುವ ವಾಹನಗಳನ್ನು ನಿರ್ಮಾಣ ಮಾಡುವ ಅತಿ ದೊಡ್ಡ ಕಾರ್ಯ ಕೈಗೆತ್ತುಕೊಂಡಿದೆ.

ನೂತನವಾಗಿ ಆವಿಷ್ಕರಿಸಿದ ಈ ಡ್ರೋನ್ 10 ಪೌಂಡ್ ಅಷ್ಟು ಸರಕು ಸಾಗಿಸುವಷ್ಟು ಶಕ್ತವಾಗಿದೆ. ಈ ಕಾರ್ಯ ಯಶಸ್ವಿಯಾದರೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಉಂಟಾಗುವುದಂತೂ ಖಂಡಿತ.

ಬಲ್ಲ ಮೂಲಗಳ ಪ್ರಕಾರ ಮರ್ಸಿಡಿಸ್ ಬೆನ್ಜ್ ಸರಿ ಸುಮಾರು ೫೬೨ ಮಿಲಿಯನ್ ಡಾಲರ್ಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ.

ಈ ದೈತ್ಯ ವಾಹನ ತಯಾರಕ ಕಂಪನಿ ಅತ್ಯಾಧುನಿಕ ಸ್ವಯಂ ಚಾಲಿತ ಸರಕು ಸಾಗಣೆ ಮಾಡುವ ಡ್ರೋನ್ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಇತ್ತೀಚಿಗೆ ಯುಪಿಎಸ್ ಕೂಡ ಡ್ರೋನ್ ಹೊಂದಿರುವ ಹೈಬ್ರಿಡ್ ಟ್ರಕ್ ಆಟೋ ಶೋದಲ್ಲಿ ಪ್ರದರ್ಶಿಸಿದ್ದು ಈ ಡ್ರೋನ್ ಹೈಬ್ರಿಡ್ ಟ್ರಕ್ ಚಾವಣಿಯ ಮೇಲೆ ಇರಿಸಲಾಗಿದ್ದು, ನಿಗಧಿತ ಸ್ಥಳಕ್ಕೆ ಸರಕು ಸಾಗಣೆ ತಲುಪಿಸುವ ಕಾರ್ಯ ಮಾಡಲಿದೆ.

ಇನ್ಮೇಲೆ ಪಿಜ್ಜಾ ಲೇಟ್ ಡೆಲಿವರಿ ಕೊಡುತ್ತಾರೆ ಎನ್ನುವ ಪ್ರಾಬ್ಲಮ್ ಖಂಡಿತ ಇರಲ್ಲ, ಯಾಕ ಗೊತ್ತಾ ? ಡೆಲಿವರಿ ಬಾಯ್ ಬದ್ಲು ಡ್ರೋನ್ ಪಿಜ್ಜಾ ಡೆಲಿವರಿ ಕೊಡೋದು.

ಮರ್ಸಿಡಿಸ್ ಬೆನ್ಜ್ ಈಕ್ಯೂ ತಲೆಮಾರಿನ ಪರಿಕಲ್ಪನೆ ಹೊಂದಿರುವ ಕಾರಿನ ಚಿತ್ರಗಳನ್ನು ನೋಡಿ

English summary
Last year, the manufacturer announced a multi-million dollar investment in drone startup Matternet, the creator of an autonomous drone.
Please Wait while comments are loading...

Latest Photos