ಐಷಾರಾಮಿ ಕಾರು ಪ್ರಿಯರನ್ನು ಸೆಳೆದ ರೆನಾಲ್ಟ್ ವಿನೂತನ ಪರಿಕಲ್ವನೆ..!!

Written By:

ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್, ತನ್ನ ಹೊಸ ಮಾದರಿಯ ಐಷಾರಾಮಿ ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದು, "ಮೊಸ್ಟ್ ಬ್ಯುಟಿಫುಲ್ ಕಾರ್" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂತರ್‌ರಾಷ್ಟ್ರೀಯ ಆಟೋಮೊಬೈಲ್ ಫೆಸ್ಟಿವಲ್‌ನಲ್ಲಿ ಹೊಸ ಪರಿಕಲ್ಪನೆ ಪ್ರದರ್ಶಿಸಿರುವ ರೆನಾಲ್ಟ್, ಅದ್ಭುತ ವಿನ್ಯಾಸ ಹೊಂದಿರುವ ಕಾರು ಮಾದರಿಯೊಂದನ್ನು ಅನಾವರಣಗೊಳಿಸಿದೆ.

ರೆನಾಲ್ಟ್ ಸಿದ್ಧಪಡಿಸಿರುವ ಟ್ರೇಜೊರ್ ಐಷಾರಾಮಿ ಕಾರು ಸದ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಹತ್ತು ಹಲವು ಸುಧಾರಿತ ತಂತ್ರಜ್ಞಾನಗಳ ಸೌಲಭ್ಯ ಹೊಂದಿದೆ.

ವಿಶೇಷ ವಿನ್ಯಾಸ ಹೊಂದಿರುವ ಹಿನ್ನೆಲೆ ಕೇವಲ ಇಬ್ಬರು ಮಾತ್ರ ಪ್ರಯಾಣ ಮಾಡಬಹುದಾಗಿದ್ದು, ಆಟೋಮೊನಸ್(ಚಾಲಕ ರಹಿತ) ತಂತ್ರಜ್ಞಾನ ಕೂಡ ಲಭ್ಯವಿದೆ.

ಕೇವಲ 4 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವ ಟ್ರೇಜೊರ್, ಸಾಮಾನ್ಯ, ಸ್ಪೋರ್ಟ್ಸ್ ಮತ್ತು ಆಟೋಮೊನಸ್‌ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ.

ಸದ್ಯ ಪ್ಯಾರಿಸ್ ಆಟೋ ಮೊಬೈಲ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿರುವ ಟ್ರೇಜೊರ್ ಕಾರು, ಮುಂಬರುವ ದಿನಗಳಲ್ಲಿ ವಿಶ್ವ ಆಟೋ ಉದ್ಯಮ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆ ಹೊಂದಿದೆ.

 

 

Story first published: Wednesday, June 7, 2017, 11:21 [IST]
English summary
Read in kannada about most beautiful concept car of the year revealed.
Please Wait while comments are loading...

Latest Photos