ಭಾರತಕ್ಕೆ ಎಂಟ್ರಿ ಕೊಡುತ್ತೆ ಹ್ಯುಂಡೈ ಸೊನಾಟಾ ಕಾರು

Written By:

ಸೌತ್ ಕೊರಿಯಾದ ಕಾರು ಮಾರಾಟ ಸಂಸ್ಥೆಯಾದ ಹ್ಯುಂಡೈ ಸೊನಾಟಾ ಸೆಡಾನ್ ಕಾರು ಹೊಸ ವೈಶಿಷ್ಟ್ಯಗಳೊಂದಿಗೆ ಕೊರಿಯಾದಲ್ಲಿ ಬಿಡುಗಡೆಗೊಂಡಿದ್ದು, ಭಾರತದ ಮಾರುಕಟ್ಟೆಗೆ ರಿಎಂಟ್ರಿ ಕೊಡಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿ ಮೂಡಿರುವುದಂತೂ ಖಂಡಿತ.

2015ರಲ್ಲಿ ದೇಶದ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಹ್ಯುಂಡೈ ಸೊನಾಟಾ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸಲು ದಕ್ಷಿಣ ಕೊರಿಯಾದ ಮೂಲದ ಸಂಸ್ಥೆಯು ನಿರ್ಧರಿಸಿತ್ತು.

ಸದ್ಯ ಹೊಸ ಸೊನಾಟಾ ಕಾರು ಕೊರಿಯಾದಲ್ಲಿ ಬಿಡುಗಡೆಗೊಂಡಿದ್ದು, ಇದೇ ಕಾರು ಭಾರತದಲ್ಲೂ ಬಿಡುಗಡೆಗೊಳ್ಳಲಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ.

ಈಗ ಬಿಡುಗಡೆಗೊಂಡಿರುವ ಸೊನಾಟಾ ಕಾರು ಕಂಪನಿಯ ಹೊಸ ರಚನೆ ಸೂತ್ರವನ್ನು ಒಳಗೊಂಡಿದ್ದು, ಹಿಂದಿನ ಆವೃತಿಗಿಂತ ಹೆಚ್ಚು ಹರಿತವಾದ ನೋಟ ಹೊಂದಿದೆ.

ಹೆಚ್ಚು ದೀಪಗಳಿಂದ, ಈಗಿನ ತಂತ್ರಜ್ಞಾನದಿಂದ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೋಡಿಕೊಂಡರೆ ಈ ಕಾರು ಹೆಚ್ಚು ಜನಪ್ರಿಯವಾಗುವುದರಲ್ಲಿ ಖಂಡಿತ ಸಂದೇಹವಿಲ್ಲ.

ಹೆಚ್ಚು ಉನ್ನತೀಕರಿಸಿದ ಕಾರಿನ ಒಳಾಂಗಣ ಹೊಂದಿದ್ದು, ಹೊಚ್ಚ ಹೊಸ ಹವಾನಿಯಂತ್ರಣ ವ್ಯವಸ್ಥೆ ಹೊಂದಿದೆ. 7 ಇಂಚು ಬಣ್ಣದ ಟಚ್ ಹೊಂದಿರುವ ಪರದೆ ಹೊಂದಿರುವ ಕಾರು ಇದಾಗಿದ್ದು, ನಿಮಗೆ ಬೇಕೆಂದರೆ ಹೆಚ್ಚು ವ್ಯಹಿಸಿ 8 ಇಂಚು ಹೊಂದಿರುವ ಪರದೆ ಪಡೆಯಬಹುದು.

ಸುರಕ್ಷತೆಯ ಬಗ್ಗೆ ಹೇಳುವುದಾದರೆ ಸೊನಾಟಾ ಕಾರು ಬ್ಲೈಂಡ್ ಸ್ಪಾಟ್ ಕಂಡುಹಿಡಿಯುವ ವ್ಯವಸ್ಥೆ, ಟ್ರಾಫಿಕ್ ಎಚ್ಚರಿಸುವ ವ್ಯವಸ್ಥೆ, ಬಾಗುವ ಡೈನಾಮಿಕ್ ದೀಪಗಳು, ಪತ ಎಚ್ಚರಿಸುವ ತಂತ್ರಜ್ಞಾನ ಹೊಂದಿದೆ.

ಎಂಜಿನ್ ಬಗೆಗಳು :
139 ಅಶ್ವಶಕ್ತಿ ಉಗುಳುವ 1.7-ಲೀಟರ್ ವಿಜಿಟಿ ಎಂಜಿನ್
177 ಅಶ್ವಶಕ್ತಿ ಉಗುಳುವ 1.6-ಲೀಟರ್ ಟಿ-ಜಿಡಿಐ ಎಂಜಿನ್
241 ಅಶ್ವಶಕ್ತಿ ಉಗುಳುವ 2.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್

ನಿಮಗೆ ತಿಳಿದಿರುವ ಹಾಗೆ ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರ ಭಾರತದಲ್ಲಿ ಕಾರು ಪ್ರಿಯರಿಗೆ ಬರವಿಲ್ಲ, ಕಾರು ತಯಾರಕರ ಮೆಚ್ಚಿನ ತಾಣ ಭಾರತ ಎನ್ನಬಹುದು, ಅಂದ ಮೇಲೆ ಸೊನಾಟಾ ಕಾರು ಭಾರತದಲ್ಲಿ ಬಿಡುಗಡೆಗೊಳ್ಳದೆ ಇರುತ್ತದೆಯೇ...!!? ಸದ್ಯದರಲ್ಲಿಯೇ ಈ ಕಾರು ಭಾರತದ ರಸ್ತೆಯಲ್ಲಿ ಕಾಣಸಿಗಲಿದೆ.

ಹ್ಯುಂಡೈ ಕಂಪನಿಯ ಮತ್ತೊಂದು ಯಶಸ್ವಿ ವರ್ನ 2017 ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
The new Hyundai Sonata has been launched and it is only a matter of time till the sedan makes its way to India. Read on for more details.
Please Wait while comments are loading...

Latest Photos