ಪರೀಕ್ಷೆ ವೇಳೆ ಸೆರೆ ಹಿಡಿದ ಹ್ಯುಂಡೈ ಎಕ್ಸ್‌ಸೆಂಟ್ 2017 ಕಾರಿನ ಗೌಪ್ಯ ಚಿತ್ರಗಳು ಬಿಡುಗಡೆ

ಹೊಸ ಸ್ವರೂಪವನ್ನು ಪಡೆದುಕೊಂಡ ನಂತರ ಮೊದಲ ಹಂತವಾಗಿ ಪರೀಕ್ಷಾರ್ಥ ಚಾಲನೆ ವೇಳೆ ಸೆರೆ ಹಿಡಿದ ಹ್ಯುಂಡೈ ಎಕ್ಸ್‌ಸೆಂಟ್ ಕಾರಿನ ಚಿತ್ರಗಳು ಸೋರಿಕೆಯಾಗಿವೆ.

Written By:

ಯುವ ಜನತೆಯ ನೆಚ್ಚಿನ ಕಾರು ಕಂಪನಿ ಹ್ಯುಂಡೈ ತನ್ನ ನವೀನ ಮಾದರಿಯ ಹ್ಯುಂಡೈ ಎಕ್ಸ್‌ಸೆಂಟ್ ಕಾರನ್ನು ಪರೀಕ್ಷೆ ನೆಡೆಸುತಿದ್ದ ಸಮಯದಲ್ಲಿ ರಹಸ್ಯವಾಗಿ ಸೆರೆ ಹಿಡಿದ ಚಿತ್ರಗಳು ಬಿಡುಗಡೆಗೊಳಿಸಲಾಗಿದೆ.

ಸದ್ಯದರಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಹ್ಯುಂಡೈ ಎಕ್ಸ್‌ಸೆಂಟ್ ರಹಸ್ಯ ಚಿತ್ರಗಳು ಲೀಕ್ ಆಗಿವೆ. ಬಲ್ಲ ಮೂಲಗಳ ಪ್ರಕಾರ ಈ ಬಹುನಿರೀಕ್ಷಿತ ಹ್ಯುಂಡೈ ಕಂಪನಿಯ ಈ ಕಾರು ಇದೇ ತಿಂಗಳು ಏಪ್ರಿಲ್ 20ರಂದು ಬಿಡುಗಡೆಯಾಗಲಿದೆ.

ಪರೀಕ್ಷಾರ್ಥ ಚಾಲನೆ ಬಹಳಷ್ಟು ಜೋರಾಗಿ ನಡೆಯುತ್ತಿದ್ದು, ಇದೇ ತಿಂಗಳು ಏಪ್ರಿಲ್ 20ರಂದು ಬಿಡುಗಡೆಗೆ ಸಿದ್ದವಾಗಿರುವ ಈ ಕಾರು ಎಲ್ಲೆಡೆ ಪ್ರಚಾರ ಗಿಟ್ಟಿಸಿಕೊಂಡಿದೆ.

ಸಾಮಾನ್ಯ ಆವೃತಿಯ ಹೊಸ ಹುಂಡೈ ಎಕ್ಸ್ಎಂಟ್ ಕಾರಿನಲ್ಲಿ ಎಬಿಎಸ್ ಅಳವಡಿಸಿಲ್ಲ ಎನ್ನುವ ಸಂಗತಿ ಬಹಿರಂಗವಾಗಿದ್ದು, ಎಬಿಎಸ್ ಆಯ್ಕೆ ಬೇಕೆಂದರೆ ಹೆಚ್ಚಿನ ಹಣ ನೀಡಲೇ ಬೇಕು.

ಸೋರಿಕೆಯ ಚಿತ್ರಗಳಲ್ಲಿ ಗಮನಿಸಿದಂತೆ ಈ ಹೊಸ ಹುಂಡೈ ಎಕ್ಸ್ಎಂಟ್ ಕಾರಿನ ಕೆಲವು ಹಳೆಯ ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಆದರೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎನ್ನುವುದನ್ನು ಮೆರೆಯುವಂತಿಲ್ಲ.

ಎಕ್ಸ್ಎಂಟ್ 2017 ಕಾರಿನಲ್ಲಿ ಮಾನ್ಯುಯಲ್ ಡಿಮ್ಮಿಂಗ್ ಐ‌.ಆರ್‌.ವಿ.ಎಂ, ಡಿಜಿಟಲ್ ಗಡಿಯಾರ, ವೀಲ್ ಕವರ್ ಮತ್ತು ಬ್ಲಾಕೆಡ್ ಔಟ್ ಬಿ-ಪಿಲ್ಲರ್ ಇನ್ನಿತರ ವೈಶಿಷ್ಟ್ಯಗಳನ್ನು ತೆಗೆದು ಹಾಕಲಾಗಿದೆ.

ಚಾಲಕನಿಗೆ ನೀಡುವ ಏರ್‌ಬ್ಯಾಗ್ ಆಯ್ಕೆ ಹಿಂದಿನ ಕಾರಿನ ಮಾದರಿಯಲ್ಲಿ ನೀಡಿತ್ತಾದರೂ ಪ್ರಯಾಣಿಕರಿಗೆ ನೀಡುವಂತಹ ಏರ್‌ಬ್ಯಾಗ್ ನೀಡಿರಲಿಲ್ಲ, ಈ ಕೊರತೆಯನ್ನು ಹೊಸ ಮಾದರಿಯಲ್ಲಿ ಕಂಪನಿ ನೀಗಿಸಿದೆ ಎನ್ನಬಹುದು.

ಹಳೆ ಕಾರಿನ ಮಾದರಿಯಲ್ಲಿ ಇಲ್ಲದೆ ಇರುವಂತಹ ಆಲ್ಟೆರ್‌ನೇಟಿವ್ ನಿರ್ವಹಣಾ ವ್ಯವಸ್ಥೆ (AMS) ಆಯ್ಕೆಯನ್ನು ಈ ಕಾರಿನಲ್ಲಿ ನೀಡಲಾಗಿದೆ. ಎಸ್ ಮತ್ತು ಎಸ್ಎಕ್ಸ್(ಒ) ಆವೃತಿಯ ಎಕ್ಸ್ಎಂಟ್ ಕಾರಿನಲ್ಲಿ ವೈವಿಧ್ಯತೆಗಳನ್ನು ಕಾಣಬಾಹುದಾಗಿದ್ದು, ಹೊಸ ಇಂಚಿನ ಟಚ್‌ಸ್ಕ್ರೀನ್ ಪರದೆ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅಳವಡಿಸಲಾಗಿದೆ.

ಪರಿಷ್ಕರಿಸಿದ ಮುಂಭಾಗದ ಬಂಪರ್ ಮತ್ತು ಗ್ರಿಲ್ ಈ ಕಾರಿನ ಅಂದವನ್ನು ಹೆಚ್ಚಿಸಲಿದ್ದು, ಧ್ವನಿ ಗ್ರಹಿಕೆ ಮಾಡುವಂತಹ ಗುಂಡಿಗಳನ್ನು ಸ್ಟೇರಿಂಗ್ ವೀಲ್ ಹೊಂದಿದ್ದು, ಶಾರ್ಕ್ ಫಿನ್ ಆಂಟೆನಾ, ಹಿಂಭಾಗದಲ್ಲಿ ಮರು ವಿನ್ಯಾಸ ಮಾಡಿದ ಡಿಆರ್‌ಎಲ್ಸ್ ಈ ಕಾರಿನ ಮೇಲೆ ಎಲ್ಲರಿಗು ಪ್ರೀತಿ ಹೆಚ್ಚುವಂತೆ ಮಾಡುವುದಂತೂ ಖಂಡಿತ.

ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಎಕ್ಸ್ಎಂಟ್ 2017 ಕಾರು ಅಗ್ಗದ ದರ, ಹೆಚ್ಚು ವೇಗ ಹಾಗೂ ಒಟ್ಟಾರೆಯಾಗಿ ಬಹುಬೇಗನೇ ವಾಹನ ಪ್ರೇಮಿಗಳನ್ನು ಆಕರ್ಷಿಸುವ ವಿನ್ಯಾಸ ಪಡೆದುಕೊಂಡಿದೆ.

ಎಕ್ಸ್ಎಂಟ್ 2017 ಕಾರು ಫೇಸ್‌ಲಿಫ್ಟ್ ಅಂಶಗಳನ್ನು ಹೊಂದಿದ್ದು, ನವೀನ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಹೊಸ ತಂತ್ರಜ್ಞಾನ ಪಡೆದುಕೊಂಡಿರುವ ಈ ಕಾರನ್ನು ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

English summary
Read in Kannada about leaked new hyundai Xcent car's features ahead of its launch. Get more details about leaked new hyundai Xcent car's photos, specifications, new technology and more.
Please Wait while comments are loading...

Latest Photos

LIKE US ON FACEBOOK