ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಈಗಲೇ ಬುಕ್ ಮಾಡಿ

ಪ್ರಸ್ತುತ ತಂತ್ರಜ್ಞಾನಗಳ ಅಳವಡಿಕೆ ಹೊಂದಿರುವ ಮಾರುತಿ ಸುಜುಕಿಯ ಹೊಚ್ಚ ಹೊಸ ಸ್ವಿಫ್ಟ್ ಡಿಜೈರ್ ಕಾರು ಬಿಡುಗಡೆಗೆ ಸಜ್ಜುಗೊಂಡಿದ್ದು, ಹೊಸ ಮಾದರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಭಾರತೀಯ ಗ್ರಾಹಕರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾದರಿಯ ಸ್ವಿಫ್ಟ್ ಡಿಜೈರ್ ಕಾರನ್ನು ಇದೇ ಮೇ ಅಂತ್ಯಕ್ಕೆ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಈ ಹಿಂದೆ ಸೋರಿಕೆಯಾದ ಚಿತ್ರಗಳಲ್ಲಿ ಗಮನಿಸಿದಂತೆ ಬಹಳಷ್ಟು ಬದಲಾವಣೆ ಹೊಂದಿರುವ ಸ್ವಿಫ್ಟ್ ಡಿಜೈರ್ ಹೊಸ ಮಾದರಿಯ ಕಾರು, ಗ್ರಾಹಕರ ಮನಗೆಲ್ಲುವುದಲ್ಲಿ ಯಾವುದೇ ಅನುಮಾನವಿಲ್ಲ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಈ ಹೊಚ್ಚ ಹೊಸ ಕಾರಿನ ಫೇಸ್‌ಲಿಫ್ಟ್ ಅಂಶಗಳಿದ್ದು, ನವೀನ ಮಾದರಿಯ ವಿನ್ಯಾಸವನ್ನು ಹೊಂದಿವೆ. ಜೊತೆಗೆ ವಿನೂತನ ವಿನ್ಯಾಸದ ಗ್ರಿಲ್ ಪಡೆದುಕೊಂಡಿದ್ದು, ಹೊರ ಭಾಗದ ಹೊಸ ವಿನ್ಯಾಸವು ಗಮನಸೆಳೆಯುತ್ತಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಹೊಸ ಮಾದರಿಯ ಸ್ವಿಫ್ಟ್ ಡಿಸೈರ್ ಕಾರು ಸಾಕಷ್ಟು ಬದಲಾವಣೆಗೊಂಡಿದ್ದು, ಹಳೆಯ ಮಾದರಿಗಿಂತ ಹೆಚ್ಚು ತೂಕ ಪಡೆಯುವ ಮೂಲಕ ಬಲಿಷ್ಠತೆ ಕಾಯ್ದುಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಕಾರಿನ ಹಿಂದಿನ ದೀಪಗಳು ಬೂಟ್ ಲಿಪ್ ಸ್ಪಾಯ್‌ಲರ್‌ನೊಂದಿಗೆ ಮರುವಿನ್ಯಾಸಗೊಂಡಿದ್ದು, ಮೇ ಅಂತ್ಯಕ್ಕೆ ಖರೀದಿಗೆ ಲಭ್ಯವಾಗಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಹೊಚ್ಚ ಹೊಸ ಸ್ವಿಫ್ಟ್ ಡಿಸೈರ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಪೆಟ್ರೋಲ್ ಕಾರು 83 ಅಶ್ವಶಕ್ತಿ ಮತ್ತು ಡೀಸೆಲ್ 74 ಅಶ್ವಶಕ್ತಿ ಪಡೆದುಕೊಂಡಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಇಷ್ಟೆಲ್ಲಾ ಬದಲಾವಣೆಗಳನ್ನು ಒಳಗೊಂಡಿರುವ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಸಾಧಿಸುವುದಂತೂ ಖಚಿತ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಈ ಫೇಸ್‌ಲಿಫ್ಟ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳಲಿದ್ದು, ನಿಮಗೆ ಬೇಕೆನ್ನಿಸಿದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಮತ್ತೊಂದು ಹೊಸ ವಿಷಯವೇನೆಂದರೆ ಈ ಕಾರು ಎರಡು ರೀತಿಯ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದ್ದು, ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಪಡೆದುಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಸ್ವಿಫ್ಟ್ ಕಾರಿನ ಹ್ಯಾಚ್ ಬ್ಯಾಕ್ ಮಾದರಿಯ ಕಾರು ಬಿಡುಗಡೆಗೊಳ್ಳುವ ಮುಂಚಿತವಾಗಿಯೇ ಈ ಹೊಸ ಡಿಜೈರ್ ಕಾರು ಅನಾವರಣಗೊಳಿಸಲು ತೀರ್ಮಾನಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಮೇ ಅಂತ್ಯಕ್ಕೆ ಬಿಡುಗಡೆ ಮಾಡಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಿಡುಗಡೆಗೆ ಕ್ಷಣಗಣನೆ- ಬುಕ್ಕಿಂಗ್ ಆರಂಭ

ಜೊತೆಗೆ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಕಾರು ಪೂರೈಕೆ ಮಾಡಲು ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭ ಮಾಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಸಾವಿರಾರು ಗ್ರಾಹಕರು ಸ್ವಿಫ್ಟ್ ಖರೀದಿ ಮಾಡಲು 5 ಸಾವಿರ ರೂಪಾಯಿ ಮುಂಗಡ ಪಾವತಿಸಿ ಹೆಸರು ನೋಂದಾಯಿಸುತ್ತಿದ್ದಾರೆ.

Most Read Articles

Kannada
English summary
The new or the next-generation Maruti Suzuki Dzire will be launched in India in May 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X