ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

Written By:

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಮೋಟಾರ್ ಕಾಯ್ದೆಗೆ ಲೋಕಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಇದರಿಂದಾಗಿ ರಸ್ತೆ ನಿಯಮ ಉಲ್ಲಂಘನೆ ಮಾಡುವ ಮುನ್ನ ಹೊಸ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಏನಿದು ಮೋಟಾರು ವಾಹನ ಕಾಯ್ದೆ?
ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ರಚಿತವಾದ ಒಂದು ಕಾಯ್ದೆಯಾಗಿದ್ದು, ಇದೀಗ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಣೆ ಮಾಡಲಾಗಿದೆ.

ಹೊಸ ಮೋಟಾರು ವಾಹನ ಕಾಯ್ದೆ-2016ರ ಪ್ರಕಾರ ಈ ಹಿಂದಿನ ದಂಡದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಕೆಲವು ಹೊಸ ಕಾಯ್ದೆಗಳನ್ನು ಕೂಡಾ ಸೇರ್ಪಡೆ ಮಾಡಲಾಗಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘಿಸುವವರು ಭಾರೀ ಪ್ರಮಾಣದ ದಂಡ ತೆತ್ತೆಲು ಸಜ್ಜಾಗಬೇಕಿದೆ.

ಯಾವುದಕ್ಕೆ ಎಷ್ಟು ದಂಡ?
1. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದ್ರೆ ರೂ.5 ಸಾವಿರ ದಂಡ ಕಟ್ಟಬೇಕಿದೆ. ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಇನ್ನು ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು ಅಷ್ಟು ಸುಲಭವಲ್ಲ.

2. ಇನ್ಮುಂದೆ ಸಿಗ್ನಲ್ ಜಂಪ್ ಮಾಡುವ ಮತ್ತೊಮ್ಮೆ ಯೋಚನೆ ಮಾಡಿ. ಯಾಕೇಂದ್ರೆ ಈ ಹಿಂದೆ ಇದ್ದ ರೂ.200 ದಂಡವನ್ನು 1 ಸಾವಿರಕ್ಕೆ ಹೆಚ್ಚಿಸಲಾಗಿದೆ.

3. ದಯವಿಟ್ಟು ಕುಡಿದು ವಾಹನ ಓಡಿಸಲೇಬೇಡಿ. ಯಾಕೇಂದ್ರೆ ಅದು ನಿಮಗೆ ಅಷ್ಚೇ ಅಲ್ಲ ಇತರರ ಜೀವಕ್ಕೂ ಅಪಾಯ. ಹೀಗಾಗಿ ಕಠಿಣ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು 2 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿದೆ. ಜತೆಗೆ ಅಂಥವರಿಗೆ 10 ವರ್ಷಗಳವರೆಗಿನ ಸೆರೆವಾಸ ಶಿಕ್ಷೆಯೂ ಕಾದಿದೆ.

4. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಇಲ್ಲದೇ ಪ್ರಮಾಣ ಭಾರೀ ದಂಡಕ್ಕೆ ಆಹ್ವಾನ. ಕಾರಣ ಈ ಹಿಂದಿನ ದಂಡದ ಮೊತ್ತವನ್ನು ರೂ.100ರಿಂದ 1 ಸಾವಿರಕ್ಕೆ ಹೆಚ್ಟಿಸಲಾಗಿದೆ.

5. ಹೊಸ ವಾಹನ ಖರೀದಿ ಮಾಡಿದಾಗ ತಪ್ಪದೇ ವಿಮೆ ಮಾಡಿಸಿ. ಇಲ್ಲವಾದಲ್ಲಿ ರೂ.2 ಸಾವಿರ ದಂಡ ತೇರಬೇಕಾಗುತ್ತೆ. ಜೊತೆಗೆ ಚಾಲನ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ್ರೆ ೨೫ ಸಾವಿರದಿಂದ 1 ಲಕ್ಷದವರೆಗೂ ದಂಡ ತೆರಬೇಕಾಗುತ್ತೆ.

6. ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆಯನ್ನು ಮಾಡುವುದನ್ನು ಕಡಿಮೆ ಮಾಡಿ. ಇಲ್ಲವಾದಲ್ಲಿ ಈ ಹಿಂದೆ ಇದ್ದ 1 ಸಾವಿರ ರೂಪಾಯಿ ದಂಡವನ್ನು ಇದೀಗ ರೂ. 5 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ನಿಮ್ಮ ಜೇಬಿಗೆ ಕತ್ತರಿ ಬಿಳಲಿದೆ.

7. ಈ ಬಾರಿ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಮೂರು ಹೊಸ ಕಾನೂನು ತಿದ್ದುಪಡಿ ತರಲಾಗಿದೆ. ಒಂದು ವೇಳೆ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಬಿಡದಿದ್ರೆ 10 ಸಾವಿರ ತೆತ್ತಬೇಕಾಗುತ್ತೆ.

8. ಸಾರ್ವಜನಿಕ ಪ್ರದೇಶಗಳಲ್ಲಿ ಅತಿ ವೇಗದ ಚಾಲನೆಗೂ ಮುನ್ನ ಹುಷಾರ್ ಆಗಿ ಇರಿ. ಇಲ್ಲವಾದ್ರೆ ಹೊಸ ಕಾಯ್ದೆ ಪ್ರಕಾರ 2 ಸಾವಿರ ರೂ. ದಂಡ ಪಾವತಿಸಬೇಕಾಗುತ್ತೆ.

9. ಪಾಲಕರು ತಮ್ಮ ಮಕ್ಕಳಿಗೆ ಬೈಕ್, ಕಾರು ನೀಡುವ ಮುನ್ನ ಮೊತ್ತೊಮ್ಮೆ ಯೋಚಿಸಿ. ಯಾಕೇಂದ್ರೆ ಮೋಟಾರ್ ಕಾಯ್ದೆಯಲ್ಲಿ ಹೊಸ ತಿದ್ದುಪಡಿ ತರಲಾಗಿದ್ದು, ಅಪ್ರಾಪ್ತರು ಗಾಡಿ ಓಡಿಸಿದ್ರೆ, ವಾಹನ ಮಾಲೀಕರಿಗೆ 25 ಸಾವಿರ ದಂಡ ಮತ್ತು 2 ಜೈಲಿಗೆ ಹೋಗಬೇಕಾಗುತ್ತೆ.

10. ಸರಕು ಸಾಗಾಣಿಕೆ ವಾಹನಗಳಿಗೆ ಹೆವೀ ಲೋಡ್ ಹಾಕಲೇಬೇಡಿ. ಈ ನಿಯಮ ಉಲ್ಲಂಘನೆ ಮಾಡಿದ್ರೆ 20 ಸಾವಿರ ದಂಡದ ಜೊತೆಗೆ ಪ್ರತಿ ಟನ್‌ಗೂ 2 ಸಾವಿರ ಎಕ್ಸ್‌ಟ್ರಾ ಫೈನ್ ಕಟ್ಟಬೇಕಾಗುತ್ತೆ.

11. ನೀವು ಮಾಡಿಫೈ ವಾಹನಗಳ ಪ್ರಿಯರಾಗಿದ್ದರೇ ಎಚ್ಚೆತ್ತುಕೊಳ್ಳುವುದು ಒಳಿತು. ಇಲ್ಲವಾದ್ರೆ ವಾಹನದ ಅಸಲಿ ನಿರ್ಮಾಣ ಕವಚ ಬದಲಿಸಿದ್ರೆ 5 ಸಾವಿರ ರೂ. ದಂಡ ಬಿಳಲಿದೆ.

12. ಬಸ್ ಮತ್ತು ರೈಲ್ವೆಗಳಲ್ಲಿ ಟಿಕೆಟ್ ಇಲ್ಲದ ಪ್ರಯಾಣ ಇನ್ಮುಂದೆ ಭಾರೀ ದಂಡಕ್ಕೆ ಆಹ್ವಾನ. ಹೌದು ಇನ್ನು ಯಾವುದೇ ಕಾರಣಕ್ಕೂ ಟಿಕೆಟ್ ಇಲ್ಲದೇ ಪ್ರಯಾಣ ಮಾಡಬೇಡಿ ಇಲ್ಲವಾದ್ರೆ ರೂ.200 ಬದಲು ರೂ.500 ದಂಡ ತೆರಬೇಕಾಗುತ್ತೆ.

13. ಅಪಘಾತಗಳ ತಡೆಗೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ದಂಡ ರೂಪಿಸಿದೆ. ಒಂದು ವೇಳೆ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದ್ರೆ ೧೦ ಲಕ್ಷ ರೂ ಪರಿಹಾರ ನೀಡಬೇಕಾಗಿದ್ದು, ಗಾಯಗೊಂಡವರಿಗೆ ೫ ಲಕ್ಷ ಪರಿಹಾರ ಪಾವತಿಸಬೇಕಾಗುತ್ತದೆ.

 

 

14. ಇನ್ಮುಂದೆ ಹಿಟ್ ಆ್ಯಂಡ್ ರನ್ ಮಾಡಿ ಮನೆ ಸೇರೋ ಹಾಗಿಲ್ಲ. ಯಾಕೇಂದ್ರೆ ಹೊಸ ಕಾನೂನಿನ ಪ್ರಕಾರ ಗುದ್ದೋಡಿದ ಪ್ರಕರಣದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕಿದೆ. ಜೊತೆಗೆ ಗಾಯಾಳುವಿಗೆ 50 ಸಾವಿರ ಪರಿಹಾರ ಪಾವತಿಸಬೇಕು.

15. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಬೈಕ್ ವಿಲ್ಹೀಂಗ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಇಂತಹ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 10 ಸಾವಿರಕ್ಕೆ ಏರಿಕೆ ಮಾಡಿದೆ.

16. ಮೇಲಿನ ಕಠಿಣ ಕ್ರಮಗಳಲ್ಲದೇ ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕೇಂಬ ಹೊಸ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

17.ಮತ್ತೊಂದು ಪ್ರಮುಖ ವಿಚಾರವೇಂದರೆ ಮೊಟ್ಟ ಮೊದಲ ಬಾರಿಗೆ ರಾಜಕಾರಣಿಗಳು ಮತ್ತು ವಿಐಪಿಗಳಿಗಳು ಡಿಎಲ್‌ ಪಡೆಯಲು ಟೆಸ್ಟ್‌ ಡ್ರೈವ್‌ ಕಡ್ಡಾಯಗೊಳಿಸಲಾಗಿದೆ.

18. ಆಟೋ ಮೊಬೈಲ್ ಉದ್ಯಮದಲ್ಲಿ ಇತ್ತೀಚೆಗೆ ವಾಹನಗಳ ವಿನ್ಯಾಸದಲ್ಲಿ ಭಾರೀ ಪ್ರಮಾಣದ ದೋಷಗಳು ಕಂಡುಬರುತ್ತಿದ್ದು, ಇದರಿಂದಲೇ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ತಪ್ಪು ಕಂಡುಬಂದಲ್ಲಿ ತಯಾರಕರಿಗೆ ಶಿಕ್ಷೆ ನೀಡಲು ಸೂಚಿಸಲಾಗಿದೆ.

ರಸ್ತೆ ಸುರಕ್ಷತೆಗಾಗಿ ಹೆಚ್ಚಿನ ಒತ್ತು, ಶೇ. 100ರಷ್ಟು ಇ-ಆಡಳಿತ, ಸಂಚಾರಿ ನಿಯಮ ಉಲ್ಲಂಘನೆಗೆ ಐದುಪಟ್ಟು ಅಧಿಕ ದಂಡ, ಪಾರದರ್ಶಕತೆ ಹೆಚ್ಚಳ ಸೇರಿದಂತೆ ಸಾರಿಗೆ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ಮಾಡುವ ಉದ್ದೇಶದಿಂದಲೇ ‘ಮೋಟಾರು ವಾಹನ ವಿಧೇಯಕ 2016ರನ್ನು ಅನುಮೋದನೆಗೊಳಿಸಲಾಗಿದೆ.

Story first published: Tuesday, April 11, 2017, 15:19 [IST]
English summary
Read in Kannada About New Motor Vehicles Bill Passes in Lok Sabha Test; Heavy Fine for violations
Please Wait while comments are loading...

Latest Photos