ಹೊಸ 2017 ಫೇಸ್‌ಲಿಫ್ಟ್ ಒಕ್ಟಾವಿಯಾ ಬಿಡುಗಡೆ ದಿನಾಂಕ ನಿಗದಿಪಡಿಸಿದ ಸ್ಕೋಡಾ

Written By:

ಹಲವು ಬಾರಿ ರಹಸ್ಯ ಚಿತ್ರಗಳ ಬಿಡುಗಡೆಗೊಂಡು ಈಗಾಗಲೇ ಹೆಚ್ಚು ಗಮನ ಸೆಳೆದಿರುವ ಹೊಸ 2017 ಸ್ಕೋಡಾ ಒಕ್ಟಾವಿಯಾ ಫೇಸ್ ಲಿಫ್ಟ್ ಕಾರಿನ ಬಿಡುಗಡೆ ದಿನಾಂಕದ ಬಗ್ಗೆ ಸಂಸ್ಥೆ ಸುಳಿವು ನೀಡಿದೆ.

ಜುಲೈ ಮಧ್ಯದಲ್ಲಿ ಈ ಹೊಸ ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಪ್ರಾರಂಭಿಸಲಾಗುವುದು ಎಂದು ಸ್ಕೋಡಾ ಸಂಸ್ಥೆ ದೃಢಪಡಿಸಿದೆ. ಈ ಹಿಂದಿನ ಮಾದರಿಯ ಕಾರಿಗೆ ಫೇಸ್ ಲಿಫ್ಟ್ ಅಂಶಗಳನ್ನು ಅಳವಡಿಸಿ ಹೆಚ್ಚು ಅಂದಗೊಳಿಸಲಾಗಿದೆ.

ಹೊಸ ಸ್ಕೋಡಾ ಒಕ್ಟಾವಿಯಾ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ಪಡೆಯಲಿದೆ ಎನ್ನಲಾಗಿದ್ದು, ಬಿಡುಗಡೆಯ ನಂತರ ಹೆಚ್ಚು ವಿಚಾರಗಳು ತಿಳಿಯಲಿವೆ.

ಗಮನಾರ್ಹ ಬದಲಾವಣೆಗಳೆಂದರೆ, ಹೊಸ ಮುಂಭಾಗದ ಗ್ರಿಲ್ ಪಡೆದಿರುವ ಈ ಕಾರು, ನವೀನ ರೀತಿಯಲ್ಲಿ ವಿನ್ಯಾಸಗೊಳಿಸಲಾದ ವಿಭಾಗ ಮಾಡಲಾದ ಹೆಡ್ ಲ್ಯಾಂಪ್‌ಗಳನ್ನು ಹೊಂದಿದೆ.

ಒಳಗಡೆ, ಹೊಸ ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರಿನಲ್ಲಿ ಎಲ್ಇಡಿ ದೀಪಗಳು, ಸ್ಮಾರ್ಟ್ ಫೋನ್ ಏಕೀಕರಣದೊಂದಿಗೆ ಹೊಸ 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಿಸಲಾಗಿದೆ.

ನವೀನ ಮಾದರಿಯ ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ 1.4-ಲೀಟರ್ ಮತ್ತು 1.8-ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು ಹೊಂದಿದೆ ಮತ್ತು 2.0-ಲೀಟರ್ ಡೀಸೆಲ್ ಮೋಟಾರ್ ಅನ್ನು ಪ್ರಸ್ತುತ ಮಾದರಿಯಿಂದ ಉಳಿಸಿಕೊಳ್ಳುತ್ತದೆ.

ಎಂಜಿನ್‌ಗಳ ಐಚ್ಛಿಕ ಡಿಎಸ್‌ಜಿ ಪ್ರಸರಣದೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಿಯಾಗಿ ಈ ಕಾರು ಹೆಚ್ಚು ಜನರನ್ನು ತಲುಪಲು ಬರುತ್ತಿದೆ.

English summary
Read in Kannada about The Skoda Octavia facelift has been spied a few times, hinting at the nearing launch date.
Please Wait while comments are loading...

Latest Photos