ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ರಹಸ್ಯ ಚಿತ್ರಗಳು ಸೋರಿಕೆ : ವಿವರ ಇಲ್ಲಿದೆ

Written By:

ಸಾಮಾನ್ಯವಾಗಿ ಬಿಡುಗಡೆಗೊಳ್ಳದ ಕಾರುಗಳನ್ನು ಜನತೆಗೆ ಕಾಣಬಾರದು ಎಂಬ ಕಾರಣಕ್ಕೆ ಮೇಲ್ಭಾಗದಲ್ಲಿ ಹೊದಿಕೆಯೊಂದಿಗೆ ರಸ್ತೆಯಲ್ಲಿ ಪರೀಕ್ಷೆ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ, ಕೇಳಿದ್ದೇವೆ.

ಆದರೆ ಯಾವುದೇ ರೀತಿಯಲ್ಲಿ ಮರೆ ಮಾಡದೆ ಇರುವ ರೀತಿಯಲ್ಲಿ ಸೆರೆ ಹಿಡಿದ ಆರನೆಯ ತಲೆಮಾರಿನ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಆರನೆಯ ತಲೆಮಾರಿನ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಸ್ಪಷ್ಟ ರಹಸ್ಯ ಚಿತ್ರಗಳುಗ ಅಂತರ್ಜಾಲದಲ್ಲಿ ಈಗಾಗಲೇ ವೈರಲ್ ಆಗಿದ್ದು, ಎಲ್ಲೆಡೆ ಭಾರಿ ಬೇಡಿಕೆ ಪಡೆದುಕೊಂಡಿದೆ.

ಚಿತ್ರದಲ್ಲಿ ಗಮನಿಸಿದಂತೆ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಮುಂಭಾಗದಲ್ಲಿರುವ ಡಿ‌ಆರ್‌ಎಲ್ ಗಳು ರಾಡಿಟರ್‌ಗೆ ತಕ್ಕಂತೆ ಬಾಗಿದ ಆಕಾರದಲ್ಲಿ ಇರಿಸಲಾಗಿದ್ದು, ಹೆಚ್ಚು ಮೆರಗು ತಂದುಕೊಟ್ಟಿವೆ.

ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡಗೊಳ್ಳಲು ತುದಿಗಾಲಲ್ಲಿ ಕಾಯುತ್ತಿರುವ ಪೊಲೊ ಎಲ್‌ಇಡಿ ಹೆಡ್‌ಲ್ಯಾಂಪ್, ಮತ್ತು ಹಗಲು ಹೊತ್ತು ಬೆಳಗುವ ರನ್ನಿಂಗ್ ದೀಪಗಳನ್ನು ಪಡೆದುಕೊಂಡಿದೆ.

ಕ್ರೋಮ್ ಅಳವಡಿಕೆಯೊಂದಿಗೆ ಬಿಡುಗಡೆಗೊಳ್ಳುತ್ತಿರುವ ಈ ಪೊಲೊ ಕಾರಿನ ಮುಂಭಾಗದ ಬಂಪರ್ ತೀವ್ರತೆಯ ವಿನ್ಯಾಸ ಹೊಂದಿದೆ.

ಆರನೆಯ ತಲೆಮಾರಿನ ಫೋಕ್ಸ್‌ವ್ಯಾಗನ್ ಪೊಲೊ ಕಾರು ಮೊನಚಾದ ಛಾವಣಿಯನ್ನೂ ಸಹ ಹೊಂದಿದೆ, ಹೆಚ್ಚಿನ ಮಟ್ಟದ ಪ್ರೀಮಿಯಂ ಅವತಾರ ಪಡೆದಿದೆ.

ಫೋಕ್ಸ್‌ವ್ಯಾಗನ್ ಸಂಸ್ಥೆಯ ವಿಶ್ವಾಸಾರ್ಹ ಕಾರು ಪೊಲೊ ಹ್ಯಾಚ್ ಬ್ಯಾಕ್ ಮಾದರಿಯಾಗಿದ್ದು, ಹಿಂದಿನ ಆವೃತಿಗೆ ಹೋಲಿಸಿದರೆ ಹೆಚ್ಚು ಸ್ಪೋರ್ಟ್ಸ್ ಲುಕ್ ಪಡೆದುಕೊಂಡಿದ್ದು, ಸೂಕ್ಷ್ಮವಾದ ಕ್ರೀಸಸ್ ಅಂಶವನ್ನು ನೋಡಬಹುದಾಗಿದೆ.

ಆರನೆಯ ತಲೆಮಾರಿನ ಫೋಕ್ಸ್‌ವ್ಯಾಗನ್ ಪೊಲೊ ಕಾರು ಮೊನಚಾದ ಛಾವಣಿಯನ್ನೂ ಸಹ ಹೊಂದಿದೆ, ಹೆಚ್ಚಿನ ಮಟ್ಟದ ಪ್ರೀಮಿಯಂ ಅವತಾರ ಪಡೆದಿದೆ.

ಹಿಂಭಾಗದ ಟೈಲ್ ದೀಪ ಮತ್ತು ಬಂಪರ್ ಸಹ ಮರುವಿನ್ಯಾಸಗೊಂಡಿದ್ದು, ಈ ಹೊಸ ಹ್ಯಾಚ್ ಬ್ಯಾಕ್ 1.5-ಲೀಟರ್ ಮತ್ತು 2-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ.

ಹೊಸ ಪೊಲೊ 5 ಸ್ಪೀಡ್ ಮ್ಯಾನ್ಯುಯಲ್, 6 ಸ್ಪೀಡ್ ಮ್ಯಾನ್ಯುಯಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರುತ್ತದೆ.

Click to compare, buy, and renew Car Insurance online

Buy InsuranceBuy Now

Read more on ಪೊಲೊ polo
English summary
Read in Kannada about new Volkswagen Polo spotted completely undisguised. Know more about Volkswagen Polo car, and more
Please Wait while comments are loading...

Latest Photos