ಬಿಡುಗಡೆಗೊಂಡ ನಿಸ್ಸಾನ್ ವಿನೂತನ ಟೆರಾನೊ- ಗಮನ ಸೆಳೆದ ಬೆಲೆ ಮತ್ತು ವೈಶಿಷ್ಟ್ಯತೆಗಳು..!!

22 ವಿನೂತನ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ 2017ರ ನಿಸ್ಸಾನ್ ಟೆರಾನೊ ಬಿಡುಗಡೆಯಾಗಿದ್ದು, ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಹೊಂದಿದೆ.

Written By:

2017ರ ನಿಸ್ಸಾನ್ ಬಹುನೀರಿಕ್ಷಿತ ಟೆರಾನೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ.9.99 ಲಕ್ಷದಿಂದ ರೂ.13.95 ಲಕ್ಷಕ್ಕೆ ಲಭ್ಯವಿದೆ.

ಎಂಜಿನ್ ಮತ್ತು ಮೈಲೇಜ್
ಹೊಚ್ಚ ಹೊಸ 2017ರ ನಿಸ್ಸಾನ್ ಟೆರಾನೊ ಕಾರು 1.6-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯೂ 102ಬಿಎಚ್‌ಪಿ ಮತ್ತು 145ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಲಭ್ಯವಿದೆ.

1.5-ಡೀಸೆಲ್ ಎಂಜಿನ್ ಮಾದರಿಯೂ 84 ಬಿಎಚ್‌ಪಿ ಮತ್ತು 200ಎನ್ಎಂ ಉತ್ಪಾದಿಸುತ್ತದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಗ್ರಾಹಕರಿಗೆ ವರವಾಗಲಿದ್ದು, ಡೀಸೆಲ್ ಮಾದರಿಯೂ ಪ್ರತಿ ಲೀಟರ್‌ಗೆ 19.64 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಹೊಚ್ಚ ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ನಿಸ್ಸಾನ್ ಟೆರಾನೊ ಕಾರಿನ ಒಳವಿನ್ಯಾಸ ಕಾರು ಪ್ರಿಯರ ಮನಗೆಲ್ಲಲಿವೆ. ಯಾಕೇಂದ್ರೆ ಕಾರಿನ ಇಂಟಿರಿಯರ್ ವಿನ್ಯಾಸ ಸಾಕಷ್ಟು ಮನಸೆಳೆಯುವಂತಿದ್ದು, ಕಾರಿನ ಬಾಗಿಲು ಮತ್ತು ಸ್ಟೇರಿಂಗ್ ವೀಲ್ಹ್ ಕೂಡಾ ಹೊಸ ವಿನ್ಯಾಸ ಹೊಂದಿವೆ.

ಇದೇ ಮೊದಲ ಬಾರಿಗೆ ನಿಸ್ಸಾನ್ ಟೆರಾನೊ ಮಾದರಿಯಲ್ಲಿ ಕೆಲವು ಮಹತ್ತರ ಬದಲಾವಣೆ ತರಲಾಗಿದೆ. 7-ಇಂಚಿನ ಇನ್ಫೋಮೆಟಿಕ್ ಡಿಸ್‌ಫೈ ವ್ಯವಸ್ಥೆ ಅಳವಡಿಸಲಾಗಿದ್ದು, ಬ್ಲೂ ಟೂಥ್, ನೇವಿಗೆಷನ್ ಮತ್ತು ಡ್ಯಾಶ್ ಬೋರ್ಡ್ ಮೇಲೆ ಸಾಪ್ಟ್ ಟಚ್ ಪೇಂಟ್ ಹೊಂದಿದೆ.

ಸುರಕ್ಷಾ ವಿಚಾರದಲ್ಲೂ ಸಾಕಷ್ಟು ಮುನ್ನೆಚ್ಚೆರಿಕೆ ವಹಿಸಿರುವ ನಿಸ್ಸಾನ್ ಕಂಪನಿಯು, ಹೊಸ ಮಾದರಿಯ ಟೆರಾನೊ ಕಾರಿನಲ್ಲಿ ಎಬಿಎಸ್ ವ್ಯವಸ್ಥೆ ಅಳವಡಿಸಿದೆ. ಜೊತೆಗೆ ಏರ್‌ಬ್ಯಾಗ್ ಮತ್ತು ಇಎಸ್‌ಪಿ ವ್ಯವಸ್ಥೆಯೊಂದಿಗೆ ಅಲ್ಹಾಯ್ ವೀಲ್ಹ್ ಚಕ್ರಗಳನ್ನು ಹೊಂದಿದೆ.

ಇನ್ನು ಬಣ್ಣ ವಿಚಾರವಾಗಿ ಮಾತನಾಡುವುದಾದರೇ ವಿನೂತನ ನಿಸ್ಸಾನ್ ಟೆರಾನೊ ಮಾದರಿಯು ಸದ್ಯಕ್ಕೆ ಸ್ಟ್ಯಾಂಡ್‌ಸ್ಟೋನ್ ಬಣ್ಣದಲ್ಲಿ ಮಾತ್ರವೇ ಲಭ್ಯವಿದೆ. ಕೆಲ ದಿನಗಳ ನಂತರವಷ್ಟೇ ಇನ್ನು ಹಲವು ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಹೊಚ್ಚ ಹೊಸ ನಿಸ್ಸಾನ್ ಟೆರಾನೊ ಕಾರಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Story first published: Monday, March 27, 2017, 19:48 [IST]
English summary
Nissan Terrano launched in India. The new Nissan Terrano comes with 22 new features including an AMT gearbox.
Please Wait while comments are loading...

Latest Photos