ಕೊನೆಗೂ ಸಿಹಿ ಸುದ್ದಿ ಕೊಟ್ಟ ತೈಲ ಕಂಪೆನಿಗಳು...

ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರುವಂತೆ ಪೆಟ್ರೋಲ್‌ ದರ ಲೀಟರ್‌ಗೆ ₹3.77 ಹಾಗೂ ಡೀಸೆಲ್‌ ದರ ಲೀಟರ್‌ಗೆ ₹2.91 ಇಳಿಕೆ ಮಾಡಲಾಗಿದೆ.

Written By:

ಜನವರಿಯಿಂದ ಸತತವಾಗಿ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತೈಲೋದ್ಯಮ ಸಂಸ್ಥೆಗಳು ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಸಿಹಿ ಸುದ್ದಿ ನೀಡಿವೆ.

ಪ್ರತಿ ಲೀಟರ್‌ ಪೆಟ್ರೋಲ್‌ಗೆ 3.77 ರೂ. ಮತ್ತು ಡೀಸೆಲ್‌ಗೆ 2.91 ರೂ. ಕಡಿಮೆಯಾಗಿದೆ. ಈ ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಈ ಮೊದಲು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ನಿಗದಿಪಡಿಸಲಾಗಿತ್ತು, ಇಂದು ಪರಿಷ್ಕರಣೆಗೊಂಡು ರೂ. 72.51 ಬೆಲೆ ನಿಗದಿಯಾಗಿದೆ.

ಹಾಗು, ನಿನ್ನೆಯವರೆಗೂ ಪ್ರತಿ ಲೀಟರ್ ಡೀಸೆಲ್ ಇಂಧನದ ಬೆಲೆ ರೂ. 63.16 ನಿಗದಿಪಡಿಸಲಾಗಿತ್ತು, ಇಳಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ರೂ. 60.25 ಆಗಿದೆ.

ಕಳೆದ ಜನವರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು.

ಪಂಚರಾಜ್ಯಗಳ ಚುನಾವಣೆ ನೆಡೆಯುತ್ತಿದ್ದ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಅನಿಲ ದರವನ್ನು ಹೊರತುಪಡಿಸಿ ಇಂಧನದ ಬೆಲೆಯನ್ನು ಕಳೆದ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಲು ಮುಂದಾಗಿರಲಿಲ್ಲ.

ತೈಲ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ ಬೆಲೆಯನ್ನು ಪರಿಷ್ಕರಿಸುತ್ತವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಕಡಿಮೆಯಾಗಿರುವುದರ ಪರಿಣಾಮ ಈ ತೈಲ ಬೆಲೆ ಇಳಿಕೆಯಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಇಂಧನ fuel
English summary
Indian Oil Corporation and other oil companies have slashed the petrol and diesel price in the country. Read to know all the details about the fuel price.
Please Wait while comments are loading...

Latest Photos