ಸುಧಾರಿತ ತಂತ್ರಜ್ಞಾನ ಹೊಂದಿರುವ ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಬಿಡುಗಡೆ

Written By:

ಫ್ರಾನ್ಸ್ ಮೂಲದ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್, ತನ್ನ ಹೊಸ ಮಾದರಿಯ ಪೆಟ್ರೋಲ್ ಎಂಜಿನ್ ಆವೃತ್ತಿ ಡಸ್ಟರ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿದೆ. ವಿನೂತನ ಮಾದರಿಯಲ್ಲಿ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಕಾರಿನ ಆರಂಭಿಕ ಬೆಲೆಗಳು ರೂ.8.49ಲಕ್ಷಕ್ಕೆ ಲಭ್ಯವಿರಲಿವೆ.

ಡಸ್ಟರ್ ಕಾರಿನ ನಮೂನೆಗಳು
ಡಸ್ಟರ್ ಆರ್‌ಎಕ್ಸ್‌ಇ
ಡಸ್ಟರ್ ಆರ್‌ಎಕ್ಸ್‌ಎಲ್
ಡಸ್ಟರ್ ಆರ್‌ಎಕ್ಸ್‌ಎಸ್ ಸಿವಿಟಿ

ಡಸ್ಟರ್ ಪೆಟ್ರೋಲ್ ಕಾರಿನ ಬೆಲೆಗಳು
ಡಸ್ಟರ್ ಆರ್‌ಎಕ್ಸ್‌ಇ- ರೂ.8.49 ಲಕ್ಷ
ಡಸ್ಟರ್ ಆರ್‌ಎಕ್ಸ್‌ಎಲ್- ರೂ.9.30 ಲಕ್ಷ
ಡಸ್ಟರ್ ಆರ್‌ಎಕ್ಸ್‌ಎಸ್ ಸಿವಿಟಿ- ರೂ.10.32 ಲಕ್ಷ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸಿದ್ಧಗೊಂಡಿರುವ ರೆನಾಲ್ಟ್ ಡಸ್ಟರ್ ಪೆಟ್ರೋಲ್ ಆವೃತ್ತಿಯ ಕಾರ್ ಬಿಡುಗಡೆಗೊಂಡಿದ್ದು, ಸಿವಿಟಿ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಡಸ್ಟರ್ ಡೀಸೆಲ್ ಮಾದರಿಯನ್ನು ಬಿಡುಗಡೆ ಮಾಡಿದ್ದ ರೆನಾಲ್ಟ್, ಈ ಬಾರಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸ ಆವೃತ್ತಿಯು 6-ಸ್ಪಿಡ್ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಪೆಟ್ರೋಲ್ ಆವೃತ್ತಿಯ ರೆನಾಲ್ಟ್ ಡಸ್ಟರ್ ಮಾದರಿಯೂ ಈ ಹಿಂದಿನ ಡೀಸೆಲ್ ಆವೃತ್ತಿಯಂತೆ 104.5ಬಿಎಚ್‌ಪಿ ಉತ್ಪಾದಿಸುತ್ತದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಗ್ರಾಹಕರಿಗೆ ವರವಾಗಿ ಪರಿಣಮಿಸಲಿದೆ.

ಈ ಹಿಂದಿನ ಮಾದರಿಯ ಮಾರಾಟದಲ್ಲಿ ಇಳಿಕೆ ಕಂಡಿರುವ ರೆನಾಲ್ಟ್ ಈ ಬಾರಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಹೊಸ ವಿನ್ಯಾಸಗಳು ಕಾರು ಖರೀದಿಗೆ ಪ್ರಮುಖ ಎನ್ನಿಸಲಿವೆ.

ಪೆಟ್ರೋಲ್ ಮಾದರಿಯ ಬಿಡುಗಡೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೆನಾಲ್ಟ್, 'ನಾವು ಪೆಟ್ರೋಲ್ ಮಾದರಿ ಬಗ್ಗೆ ಉತ್ಸಕರಾಗಿದ್ದು, ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದೇವೆ' ಎಂದು ಮ್ಯಾನೇಜಿಂಗ್ ಡೈರಕ್ಟರ್ ಸುಮಿತ್ ಸಾಹ್ನ್ಯಾ ಹೇಳಿಕೊಂಡಿದ್ದಾರೆ.

ಇನ್ನು ಬಿಡುಗಡೆಯಾಗಿರುವ ಪೆಟ್ರೋಲ್ ಮಾದರಿಯೂ RxE,RxL ಮತ್ತು RxS ಸಿವಿಟಿ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕ ಸ್ನೇಹಿ ಕಾರು ಮಾದರಿಯಾಗುವ ತವಕದಲ್ಲಿವೆ.

ವಿಭಿನ್ನ ಒಳ ವಿನ್ಯಾಸಗಳನ್ನು ಹೊಂದಿರುವ ರೆನಾಸ್ಟ್ ಡಸ್ಟರ್ ಪೆಟ್ರೋಲ್ ಮಾದರಿಯೂ ಪ್ರಸ್ತುತ ಹುಂಡೈ ಕ್ರೇಟಾ ಮತ್ತು ಹೋಂಡಾ ವಿಆರ್-ವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಇದರ ಜೊತೆ ಮೈಲೇಜ್ ವಿಚಾರವಾಗಿ ಮಾತನಾಡುವುದಾದರೇ ಸಿವಿಟಿ ಪೆಟ್ರೋಲ್ ಮಾದರಿಯು 1.5-ಲೀಟರ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 14.99ಕಿ.ಮಿ ಮೈಲೇಜ್ ನೀಡಲಿದೆ.

ಆರ್‌ಎಕ್ಸ್‌ಎಸ್ ಸಿವಿಟಿ ಮಾದರಿ ಸ್ವಲ್ಪ ದುಬಾರಿ ಎನ್ನಿಸಿದರೂ ಸಾಕಷ್ಟು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದು, 16-ಇಂಚಿನ ಅಲ್ಹಾಯ್ ಚಕ್ರಗಳ ಅಳವಡಿಕೆ ಹೊಂದಿದೆ.

ಡಸ್ಟರ್ ಕಾರು ಮಾದರಿಗಳಲ್ಲಿ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್‌ಬ್ಯಾಗ ವ್ಯವಸ್ಥೆ ಹೊಂದಿದೆ.

ಒಟ್ಟಿನಲ್ಲಿ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ರೆನಾಲ್ಟ್ ಡಸ್ಟರ್ ಕಾರು ಕೈಗೆಟುವಕ ದರಗಳಲ್ಲಿ ಲಭ್ಯವಿದ್ದು, ಪ್ರಮುಖ ಕಾರು ಮಾದರಿಗಳಿಂತ ಭಿನ್ನತೆ ಹೊಂದಿದೆ.

Story first published: Thursday, May 4, 2017, 13:16 [IST]
English summary
2017 Renault Duster launched in India. The 2017 Renault Duster features a new engine along with a new CVT gearbox.
Please Wait while comments are loading...

Latest Photos