'ಕ್ವಿಡ್ ಕ್ಲೈಂಬರ್' ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ ರೆನಾಲ್ಟ್ ಕಂಪನಿ: ಬೆಲೆ, ವಿವರ ಇಲ್ಲಿದೆ

Written By:

ಭಾರತದ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ತನ್ನ ಅಧಿಪತ್ಯ ಸಾಧಿಸುತ್ತಿರುವ ರೆನಾಲ್ಟ್ ಕಾರು ತಯಾರಕ ಕಂಪನಿ ತನ್ನ ಹೊಸ ಕ್ವಿಡ್ ಕ್ಲೈಂಬರ್ ಕಾರನ್ನು ಬಿಡುಗಡೆಗೊಳಿಸಿದೆ.

ಹೊಚ್ಚ ಹೊಸ ಮಾದರಿಯ ಕ್ವಿಡ್ ಕ್ಲೈಂಬರ್ 1.0-ಲೀಟರ್ ಎಂಜಿನ್ ಒಳಗೊಂಡಿರಲಿದ್ದು, ಈ ಹೊಸ ಕಾರಿನ ಬೆಲೆ ರೂ. 4.30 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ. ಕ್ವಿಡ್ ಕ್ಲೈಂಬರ್ ಹೆಚ್ಚು ಆಫ್ ರೋಡ್ ಸ್ನೇಹಿ ಕಾರು ಎನಿಸಿಕೊಳ್ಳಲಿದ್ದು, ಕ್ವಿಡ್ ಕ್ಲೈಂಬರ್ ಕಾರಿನೊಳಗೆ ಕೇಸರಿ ಮಿಶ್ರಿತ ವರ್ಣವು ಕಂಡುಬರಲಿದೆ.

ಈ ಕಾರಿನ ಮುಖ್ಯವಾದ ಅಂಶವೆಂದರೆ, ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಜೊತೆಗೆ ಆಫ್ ರೋಡ್ ಚಕ್ರಗಳು ಇದಕ್ಕೆ ಜೋಡಣೆಯಾಗಲಿವೆ.

5-ಸ್ಪೀಡ್ ಮಾನ್ಯುಯಲ್ ಮತ್ತು ಎರಡು ಆಧಾರ ಎಎಂಟಿ ತಂತ್ರಜ್ಞಾನ ಹೊಂದಿರುವ ಎರಡು ರೀತಿಯ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.

ಹೊಸ ಕ್ವಿಡ್ ಕ್ಲೈಂಬರ್ ಕಾರು 999ಸಿಸಿ ಎಂಜಿನ್ ಪಡೆದುಕೊಂಡಿದ್ದು, 91 ಎನ್ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸಧ್ಯ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರುವ ಕ್ವಿಡ್ ಕ್ಲೈಂಬರ್ ಕಾರಿನ ಬೆಲೆ ರೂ. 4.30 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ. ಇನ್ನು ಡ್ಯೂಯಲ್ ಬೇಸ್ ಎಎಂಟಿ ಕಾರಿನ ಬೆಲೆ ಕಾರಿನ ಬೆಲೆ ರೂ. 4.60 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಈ ಕಾರಿನ ಮೈಲೇಜ್ ಬಗ್ಗೆ ತಿಳಿದುಕೊಂಡರೆ ನಿಮಗೆ ಖಂಡಿತ ಖುಷಿ ಆಗುತ್ತೆ, ಈ ಕಾರಿನ ಮೈಲೇಜ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ...

ಈ ಹೊಚ್ಚ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ ಸರಿ ಸುಮಾರು 23.5 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನವೀನ ತಂತ್ರಜ್ಞಾನ ಹೊಂದಿರುವ ಈ ಹೊಸ ಕಾರು, ಎಲೆಕ್ಟ್ರಿಕ್ ಬ್ಲೂ, ಔಟ್ ಬ್ಯಾಕ್ ಬ್ರಾಂಜ್ ಮತ್ತು ಪ್ಲಾನೆಟ್ ಗ್ರೇ ಎಂಬ ಇತ್ತೀಚಿನ ಮೂರು ಬಣ್ಣಗಳನ್ನು ಪಡೆದುಕೊಂಡು ನಿಮ್ಮ ಮುಂದೆ ಬರಲಿದೆ. ಇಷ್ಟೆಲ್ಲಾ ಅನುಕೂಲಗಳಿರುವ ಈ ಕಾರು ಮಧ್ಯಮ ವರ್ಗದ ಜನತೆಗೆ ಅಥವಾ ಚಿಕ್ಕ ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರು ಎನ್ನಬಹುದು.

ರೆನಾಲ್ಟ್ ಕ್ವಿಡ್ ಎಎಂಟಿ ಕಾರಿನ ಚಿತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...

Click to compare, buy, and renew Car Insurance online

Buy InsuranceBuy Now

English summary
Renault Kwid Climber launched in India and will only be available with the 1-litre engine.
Please Wait while comments are loading...

Latest Photos