ಅಬ್ಬಾ!! 1000 ವಜ್ರಗಳನ್ನು ಪುಡಿ ಮಾಡಿ, ಏನ್ ಮಾಡಿದ್ರು ನೋಡಿ...

Written By:

ಇತ್ತೀಚೆಗೆ ಜನರು ಕಾರುಗಳಿಗೆ ನೀಡುತ್ತಿರುವ ಮೌಲ್ಯ ಕಂಡರೆ ಅಬ್ಬಾ ನಿಜಕ್ಕೂ ಅಚ್ಚರಿಯಾಗುವುದಂತೂ ಸತ್ಯ. ಜನರ ಆಶೋತ್ತರಗಳಿಗೆ ಸರಿ ಹೊಂದುವಂತಹ ಕಾರುಗಳ ಉತ್ಪಾದನೆಯಲ್ಲಿ ಕಾರು ತಯಾರಕ ಕಂಪನಿಗಳು ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ರೋಲ್ಸ್ ರಾಯ್ಸ್ ಕಾರು ಸಾಕ್ಷಿ ಎಂದರೆ ತಪ್ಪಲ್ಲ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಈ ಕೆಳಗಿನ ಚಿತ್ರದಲ್ಲಿ ಕಾಣಿಸುತ್ತಿರುವ ರೋಲ್ಸ್ ರಾಯ್ಸ್ ಗೋಸ್ಟ್ ಕಾರು ಸರಿ ಸುಮಾರು ಒಂದು ಸಾವಿರ ವಜ್ರಗಳನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ಬಣ್ಣ ಬೆರೆಸಿ ಪೈಂಟ್ ಮಾಡಿದ ಕಾರು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟಕ್ಕೂ, ರೋಲ್ಸ್ ರಾಯ್ಸ್ ಎಂದರೆ ಸಾಮಾನ್ಯ ಕಂಪನಿಯೇ ಸುಳ್ಳು ಹೇಳೋದಕ್ಕೆ.

ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕೊಳ್ಳುವವರು ಆಗರ್ಭ ಶ್ರೀಮಂತರೇ ಆಗಿರುತ್ತಾರೆ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ ಈ ಐಷಾರಾಮಿ ರೋಲ್ಸ್ ರಾಯ್ಸ್ ಕಂಪನಿ.

ಹೆಚ್ಚಿನ ಮಟ್ಟದ ತಂತ್ರಜ್ಞಾನ ಉಪಯೋಗಿಸಿ ಬೆಲೆಬಾಳುವ 1000 ವಜ್ರಗಳನ್ನು ಪುಡಿ ಮಾಡಿ ಅದಕ್ಕೆ ಬಲು ದುಬಾರಿ ಮತ್ತು ವಿಶಿಷ್ಟವಾದ ಬಣ್ಣ ಬಳಿಯಲಾಗಿರುವ ರೋಲ್ಸ್ ರಾಯ್ಸ್ 'ಗೋಸ್ಟ್' ಕಾರನ್ನು ಬಿಡುಗಡೆಗೊಳಿಸಿದೆ.

ಸದ್ಯ ಈ ಅತಿ ದುಬಾರಿ ಬೆಳೆಯ ರೋಲ್ಸ್ ರಾಯ್ಸ್ 'ಗೋಸ್ಟ್' ಕಾರು ಸದ್ಯ ನೆಡೆಯುತ್ತಿರುವ ಜಿನೆವ ಮೋಟಾರ್ ಷೋನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಿತ ರೋಲ್ಸ್ ರಾಯ್ಸ್ ತಿಳಿಸಿದೆ.

ಬೆಳಕು ಮತ್ತು ಡೈಮಂಡ್ ಎರಡೂ ಪರಸ್ಪರ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತಿಳಿಯಲು ಸರಿ ಸುಮಾರು ಎರಡು ತಿಂಗಳ ಕಾಲ ಕಾರು ತಜ್ಞರು ಅಧ್ಯಯನ ಮಾಡಿ ಈ ವಿಶೇಷ ಕಾರು ವಿನ್ಯಾಸ ಮಾಡಿದ್ದಾರೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಎಲ್ಲಾ ಅಧ್ಯಯನದ ಫಲಿತಾಂಶ ಬಂದ ನಂತರ ಕಾರು ತಯಾರು ಮಾಡಲು ಕಂಪನಿ ನಿರ್ಧರಿಸಿತ್ತು. ತದನಂತರ ಶ್ರೇಷ್ಠವಾದ ಡೈಮಂಡ್ ಪುಡಿ ತಯಾರಿಸಿ, ಪುಡಿಗೆ ಬಣ್ಣ ಬೆರೆಸಿ ಅತ್ಯಮೋಘವಾದ ಬಣ್ಣ ತಯಾರಿಸಿ ಕಾರಿಗೆ ಬಳೆಯಲಾಗಿದ್ದು, ನೋಡಲು ಎರಡೂ ಕಣ್ಣು ಸಾಲದು ಎಂಬಂತಿದೆ.

ಬಣ್ಣ ಬಳೆದ ನಂತರ ಅದರ ಮೇಲೆ ಮತ್ತೊಂದು ಮೆರುಗಿನಂತಹ ಮೇಲ್ಪದರ ಹಚ್ಚಲಾಗಿದ್ದು, ಇದರಿಂದಾಗಿ ಈ ಕಾರು ಹೆಚ್ಚು ಕಂಗೊಳಿಸುತ್ತಿದೆ.

ಕೇವಲ ಮೇಲ್ಪದರ ಹೊಂದಿರುವ ಮೆರುಗು ಹಚ್ಚಲು ಕಂಪನಿ ಎರಡೂ ದಿನಗಳನ್ನು ತೆಗೆದುಕೊಂಡಿದೆ ಎಂದರೆ ಇದರ ಶ್ರೇಷ್ಠತೆ ಎಷ್ಟಿದೆ ಎಂಬುದನ್ನು ನೀವೇ ಊಹಿಸಬಹುದು. ಕೆಂಪು ಮತ್ತು ಕಪ್ಪು ಮಿಶ್ರಿತ ಬಣ್ಣ ಹೊಂದಿರುವ ಕಾರು ಇದಾಗಿದೆ.

ಸದ್ಯ ನೋಡುವುದಕ್ಕೆ ಮಾತ್ರ ಅನುಮತಿ ಇದ್ದು, ಈ ಕಾರಿನ ಮಾರಾಟ ಮತ್ತಿತರ ವಿಚಾರಗಳ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ದುಡ್ಡು ಇರೋರು ಈ 'ಗೋಸ್ಟ್' ಕಾರನ್ನು ಖಂಡಿತ ತಗೋತಾರೆ, ಇಲ್ದೆ ಇರೋರು "ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ ಬಡವನಯ್ಯ" ಅನ್ಕೊಂಡು ಸ್ವಿಫ್ಟ್, ಹೋಂಡಾ ಸಿಟಿ, ಕ್ವಿಡ್, ಬಲೆನೊ ಕಾರು ಕೊಂಡು ಖುಷಿ ಪಡ್ತಾರೆ...

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ನೀವು ನೋಡಲೇಬೇಕಂದರೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.

Story first published: Friday, March 10, 2017, 14:41 [IST]
English summary
Rolls-Royce says that their specialists spent two months perfecting the finish, examining the diamonds under microscopes to study how the stones interact with light.
Please Wait while comments are loading...

Latest Photos